ಮಂಗಳೂರು: ಕಾ೦ಗ್ರೆಸ್ ಸರಕಾರ ಸ್ಥಿರವಾಗಿದ್ದು ೫ ವಷ೯ ಜನಪರ, ಬಡವರಪರ ಮತ್ತು ಅಭಿವೃದ್ಧಿಪರ ಆಡಳಿತ ನೀಡಲಿದೆ. ಸರಕಾರವನ್ನುಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನ ಯಶಸ್ವಿಯಾಗದು .ಸರ್ಕಾರ ಭದ್ರವಾಗಿರುತ್ತದೆ ಎ೦ದು ಕೆಪಿಸಿಸಿ ಉಪಾಧ್ಯಕ್ಷ , ಮಾಜಿ ಸಚಿವ ಭಿ. ರಮಾನಾಥ ರೈ ಹೇಳಿದ್ದಾರೆ.
ಜಿಲ್ಲಾ ಕಾ೦ಗ್ರೆಸ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾ೦ಗ್ರೆಸ್ ಸರಕಾರ ಆಡಳಿತಕ್ಕೆ ಬ೦ದ೦ದಿನಿ೦ದ ಸರಕಾರದ ವಿರುದ್ಧ ಬಿಜೆಪಿ ಅಪಪ್ರಚಾರದಲ್ಲಿ ತೊಡಗಿದೆ.ಅವರಿಗೆ ಅಧಿಕಾರ ಇಲ್ಲದೆ ನೀರಿನಿಂದ ಹೊರಗೆ ಬಂದ ಮೀನಿನ೦ತೆ ಆಗಿದ್ದಾರೆ ಎ೦ದರು.
ಕಾ೦ಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಯಥವತ್ತಾಗಿ ಅನುಷ್ಠಾನಗೊಳಿಸಿದೆ.ಕಾಂಗ್ರೆಸ್ ಬಡವರಪರವಾಗಿದೆ.ಬಿಟ್ಟಿಭಾಗ್ಯ ಅಂತಾರೆ. ನಾವು ಬಡವರಿಗೆ ನೀಡಿದ್ದು . ಅವರಂತೆ ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಿಲ್ಲ ಎ೦ದವರು ಟೀಕಿಸಿದರು.
ಸಿಆರ್ ಝಡ್ ನಲ್ಲಿ ಮರಳು ತೆಗೆಯಲು ಕೇಂದ್ರದ ಒಪ್ಪಿಗೆ ಬೇಕು. ಈಗ ಸಿಆರ್ ಝಡ್ ಅನುಮತಿ ನೀಡಲು ಕಾನೂನಾತ್ಮಕ ತೊಡಕಿದೆ. ನಾನ್ ಸಿಆರ್ ಝಡ್ ಗೆ ನಾವು ಮರಳು ನೀತಿ ಮಾಡಿದ್ದೆವು. ಮಳೆಗಾಲ ನಿಂತಿದೆ, ಬ್ಲಾಕ್ ಗುರುತಿಸಿದಾರೆ, ಆದಷ್ಟು ಶೀಘ್ರ ಅನುಮತಿ ಸಿಗಲಿದೆ ಎ೦ದರು.
ಮಾಜಿ ಶಾಸಕ ಜೆ.ಆರ್. ಲೋಬೋ, ಮುಖ೦ಡರಾದ ಶಶಿಧರ ಹೆಗ್ಡೆ, ಇಬ್ರಾಹೀ೦ ಕೋಡಿಜಾಲ್, ಪ್ರಕಾಶ್ ಸಾಲಿಯಾನ್, ಸುದಶ೯ನ್ ಜೈನ್, ಶಬ್ಭೀರ್ ಸಿದ್ದಕಟ್ಟೆ, ಧರಣೇ೦ದ್ರ ಕುಮಾರ್ , ರಕ್ಷಿತ್ ಶಿವರಾ೦,ಸಾಹುಲ್ ಹಮೀದ್, ನಜೀರ್ ಬಜಾಲ್
ಮತ್ತಿತರರು ಉಪಸ್ಥಿತರಿದ್ದರು.