17.9 C
Karnataka
Saturday, November 23, 2024

ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದು ಇಮ್ತಿಯಾಸ್ ಗೆ ಮರುಜನ್ಮ ನೀಡಿದ ಸ್ನೇಹಾಲಯ

ಮ೦ಗಳೂರು: ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದು ಇಮ್ತಿಯಾಸ್ ಗೆ ಸ್ನೇಹಾಲಯ ಆರೈಕೆ ಮತ್ತು ಚಿಕಿತ್ಸೆಯನ್ನು ಒದಗಿಸಿ ಆರೋಗ್ಯವ೦ತನಾಗಿ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಮರಳಿಸಿದೆ. ಈ ಮೂಲಕ ಕ್ರಿಸ್ಮಸ್ ಹಬ್ಬದ ಸಂದರ್ಬದಲ್ಲಿ ಇಮ್ತಿಯಾಸ್ ಕುಟುಂಬಕ್ಕೆ ಸ್ನೇಹಾಲಯದ ಪ್ರೀತಿಯ ಉಡುಗೊರೆ ನೀಡಿದೆ.

2021ರ ಸೆಪ್ಟೆಂಬರ್ 15ರಂದು, ಇಮ್ತಿಯಾಸ್ ಎಂಬ 27 ವರ್ಷದ ವ್ಯಕ್ತಿಯನ್ನು ಸ್ನೇಹಾಲಯ ತಂಡವು ಮಂಜೇಶ್ವರದ ಬೀದಿಯಿಂದ
ರಕ್ಷಿಸಿತು. ತರುವಾಯ, ಆತನನ್ನು ಮುಂದಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ
ದಾಖಲಿಸಲಾಯಿತು.


ದಾಖಲಾತಿಯ ಸಮಯದಲ್ಲಿ, ಇಮ್ತಿಯಾಸ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತಿದ್ದು ಆತನಲ್ಲಿ ಮಾನಸಿಕ ಆರೋಗ್ಯಕ್ಕೆ
ಸಂಬಂಧಪಟ್ಟ ರೋಗಲಕ್ಷಣಗಳು ಕಂಡುಬಂದವು. ಸ್ನೇಹಾಲಯದ ಸಮರ್ಪಿತ ತಂಡವು ಅವರಿಗೆ ಅಸಾಧಾರಣವಾದ ಆರೈಕೆ ಮತ್ತು
ಚಿಕಿತ್ಸೆಯನ್ನು ಒದಗಿಸಿತು. ಶ್ರದ್ಧಾ ಫೌಂಡೇಶನ್ ಮುಂಬೈಯ ಅಮೂಲ್ಯ ಬೆಂಬಲದೊಂದಿಗೆ, ಅತನ ಕುಟುಂಬವನ್ನು ಪತ್ತೆಹಚ್ಚಲು
ಸಾಧ್ಯವಾಯಿತು.
2023ರ ಡಿಸೆಂಬರ್ 23ರಂದು, ಕರ್ನಾಟಕದ ಬಳ್ಳಾರಿ ಮೂಲದ ಇಮ್ತಿಯಾಸ್ ಕುಟುಂಬವು ತಮ್ಮ ಮಗನನ್ನು ಮರಳಿ ಪಡೆಯಲು
ಸ್ನೇಹಾಲಯ ಮಂಜೇಶ್ವರಕ್ಕೆ ಆಗಮಿಸಿತು. ಏಳು ವರ್ಷಗಳ ಸುದೀರ್ಘ ಬೇರ್ಪಡುವಿಕೆಯ ನಂತರ ಆತನನ್ನು ನೋಡಿ ಆತನ ಪೋಷಕರು,
ಆತನ ಸಹೋದರಿ ಮತ್ತು ಚಿಕ್ಕಮ್ಮ ಭಾವಾತಿರೇಕದಲ್ಲಿ ಮುಳುಗಿಹೋದರು. ಈ ಪುನರ್ಮಿಲನವು ಒಂದು ಸ್ಮರಣೀಯ ಉಡುಗೊರೆಯಾಗಿ
ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ ಅವರ ವತಿಯಿಂದ ಇಮ್ತಿಯಾಸ್ ಕುಟುಂಬಕ್ಕೆ ನೀಡಲಾಯಿತು ಇಡೀ ಕುಟುಂಬವು
ಸಂತೋಷದಿಂದ ಆನಂದಬಾಷ್ಪಗಳನ್ನು ಸುರಿಸಿತು.


ಅವರು ತಮ್ಮ ಹೃದಯಾಂತರಾಳದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾ
ಅವರಿಗೆ, ಅವರು ಇಮ್ತಿಯಾಸ್ ಗೆ ನೀಡಿದ ಪೋಷಣೆ, ಆರೈಕೆ ಹಾಗೂ ಮಾತೃವಾತ್ಸಲ್ಯಕ್ಕಾಗಿ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು.
ಕುಟುಂಬವು ಸ್ನೇಹಾಲಯ ಮತ್ತು ಶ್ರದ್ಧಾ ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು, ತಮ್ಮ ಮಗನ ಯಶಸ್ವಿ ಪುನರೇಕೀಕರಣದಲ್ಲಿ
ಅವರ ದಣಿವರಿಯದ ಪ್ರಯತ್ನಗಳನ್ನು ಶ್ಲಾಘಿಸಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles