18 C
Karnataka
Friday, November 22, 2024

ಅಭೀಷ್ ಸ್ಕ್ವೇರ್‌ನಲ್ಲಿ ದೀಪಾವಳಿ ಕೊಡುಗೆ :ಮನೆ ಖರೀದಿಗೆ ವಿಶೇಷ ವಿನಾಯಿತಿ

ಮಂಗಳೂರು: ಈ ವರ್ಷ ‘ದೀಪಾವಳಿಗೆ ಮನೆ ಖರೀದಿಸಿ, ಬದುಕು ಬೆಳಗಿಸಿ’ ಎಂಬ ಪರಿಕಲ್ಪನೆಯಡಿ ರಿಯಲ್ ಎಸ್ಟೇಟ್ ಸಂಸ್ಥೆಗಳ ಪೈಕಿ ಮೊದಲ ಬಾರಿಗೆ ಎಂಬಂತೆ ಅಭೀಷ್ ಸ್ಕ್ವೇರ್ ವಸತಿ ಸಮುಚ್ಚಯದಲ್ಲಿ ಮನೆ ಖರೀದಿಗೆ ವಿಶೇಷ ವಿನಾಯಿತಿ ಘೋಷಿಸಿದೆ. ಈ ಯೋಜನೆಯು ನ.8ರಿಂದ 20ರವರೆಗೆ ಲಭ್ಯವಿದೆ.
ಎರಡು ರಾಷ್ಟ್ರೀಯ ಹೆದ್ದಾರಿಗಳು ಸಂಧಿಸುವ, ಮಂಗಳೂರು ನಗರದ ಪ್ರಮುಖ ಭಾಗದಲ್ಲಿ ಒಂದಾಗಿರುವ ಕೆಪಿಟಿ ಸಮೀಪ, ವಿಮಾನ ನಿಲ್ದಾಣ ರಸ್ತೆಯಲ್ಲಿ ‘ಅಭೀಷ್ ಸ್ವ್ಕೇರ್’ ನಿರ್ಮಾಣವಾಗುತ್ತಿದೆ. ಈ ಯೋಜನೆಯ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಿನಲ್ಲಿ ಗ್ರಾಹಕರಿಗೆ ಹಸ್ತಾಂತರವಾಗಲಿದೆ. ಗ್ರಾಹಕರು ವಸತಿ ಸಮುಚ್ಚಯದ ಬಗ್ಗೆ ಮಾಹಿತಿ ಪಡೆಯಲು ಸಂಸ್ಥೆಯ ಕಚೇರಿಗೆ ಭೇಟಿ ನೀಡಬಹುದಾಗಿದೆ ಎಂದು ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.
ಹಬ್ಬಗಳ ರಾಜ ದೀಪಾವಳಿ ಸಂದರ್ಭ ಹಲವು ಸಂಕಲ್ಪಗಳು ಇರುತ್ತವೆ. ಅದರಲ್ಲಿ ಮನೆ ಖರೀದಿಯೂ ಒಂದಾಗಿರುತ್ತದೆ. ಆದರೆ ಹಣಕಾಸಿನ ಹೊಂದಾಣಿಕೆ ಕೊರತೆಯಿಂದ ಅದೆಷ್ಟೋ ಮಂದಿಯ ಕನಸು ನನಸಾಗಿರುವುದಿಲ್ಲ. ಆದರೆ ಈ ವರ್ಷ ಕನಸು ನನಸಾಗಿಸುವ ಕ್ಷಣವನ್ನು ಅಭೀಷ್ ಸಂಸ್ಥೆಯು ಗ್ರಾಹಕರಿಗೆ ನೀಡುತ್ತಿದೆ ಎಂದು ತಿಳಿಸಿದರು.
ಕಟ್ಟಡದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, 2023ರ ಡಿಸೆಂಬರ್ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದ್ದು, ಗ್ರಾಹಕರಿಗೆ ಮನೆ ಹಸ್ತಾಂತರಿಸಲಾಗುವುದು. ಮನೆ ಖರೀದಿಸಿ ಕಾಯುವ ಅವಶ್ಯಕತೆಯೂ ಇರುವುದಿಲ್ಲ. ಅಭೀಷ್ ಸ್ಕ್ವೇರ್‌ನ ಬಹುತೇಕ ಮನೆಗಳು ಕಳೆದ ಬಾರಿ ವಿಶೇಷ ಮಾಸಿಕ ಕಂತು ಯೋಜನೆ ಘೋಷಣೆಯ ವೇಳೆ ಮಾರಾಟವಾಗಿದ್ದು, ಕೆಲವೇ ಮನೆಗಳು ಮಾತ್ರ ಉಳಿದಿವೆ.
ದೀಪಾವಳಿಗೆ ವಿಶೇಷ ಕೊಡುಗೆ
ದೀಪಾವಳಿ ಸಂದರ್ಭ ವಿಶೇಷ ಕೊಡುಗೆ ನೀಡುವ ಉದ್ದೇಶದಿಂದ ‘ದೀಪಾವಳಿಗೆ ಮನೆ ಖರೀದಿಸಿ, ಬದುಕು ಬೆಳಗಿಸಿ’ ಎಂಬ ಯೋಜನೆಯಡಿ ಈ ಕೊಡುಗೆ ಘೋಷಿಸಲಾಗಿದ್ದು, ಎರಡು ವಾರಗಳವರೆಗೆ ಲಭ್ಯವಿದೆ. ಈ ಯೋಜನೆಯಲ್ಲಿ ಸೀಮಿತ ಮನೆಗಳು ಮಾತ್ರ ಮಾರಾಟಕ್ಕೆ ಬಾಕಿ ಇದ್ದು, ಗ್ರಾಹಕರು ಮನೆ ಖರೀದಿಸಲು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು.ಈ ಯೋಜನೆಯಲ್ಲಿ ಮನೆ ಖರೀದಿಗೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಅಭೀಷ್ ಬಿಲ್ಡರ್ಸ್‌ ಸಂಸ್ಥೆಯು ಒಡಂಬಡಿಕೆ ಮಾಡಿಕೊಂಡಿದೆ. ಇದರಿಂದಾಗಿ ಮನೆ ಖರೀದಿಗೆ ಗ್ರಾಹಕರಿಗೆ ಸುಲಭವಾಗಿ ಹಣಕಾಸು ಸೌಲಭ್ಯ ಸಿಗಲಿದೆ. ಈ ಮೂಲಕ ಗ್ರಾಹಕರ ಮನೆ ಖರೀದಿ ಕನಸು ನನಸು ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದು ಅಭೀಷ್ ಸಂಸ್ಥೆ ತಿಳಿಸಿದೆ.
ಮಂಗಳೂರಿನ ಕೇಂದ್ರ ಭಾಗದಲ್ಲಿದ್ದು, ಸಾರ್ವಜನಿಕ ಸಾರಿಗೆ, ಉತ್ತಮ ಪರಿಸರ, ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆ, ವೃತ್ತಿಪರ ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜುಗಳು ಆಸುಪಾಸಿನಲ್ಲಿರುವ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ಸುಲಭವಾಗಿ ತಲುಪುವಂತಿರುವ ‘ಅಭೀಷ್ ಸ್ವ್ಕೇರ್’ನಲ್ಲಿ ಇದೀಗ ಗ್ರಾಹಕರು ವಿಶೇಷ ವಿನಾಯಿತಿಯಲ್ಲಿ ಮನೆ ಖರೀದಿ ಮಾಡಬಹುದಾಗಿದೆ.
ಗ್ರಾಹಕರು ಮನೆಗಳನ್ನು ಖರೀದಿಸಲು ಮಂಗಳೂರಿನ ಅಭೀಷ್ ಸ್ವ್ಕೇರ್ ಕಟ್ಟಡದಲ್ಲೇ ಕಚೇರಿ ತೆರೆಯಲಾಗಿದೆ. ಆಸಕ್ತ ಗ್ರಾಹಕರು ಕಚೇರಿಗೆ ಭೇಟಿ ನೀಡಿ ಮನೆಗಳನ್ನು ವೀಕ್ಷಿಸಿ ಸ್ಥಳದಲ್ಲೇ ಖರೀದಿ ಮಾಡಬಹುದಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles