ಮಂಗಳೂರು: ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಡಾ. ಬಿ.ಆರ್. ಅಂಬೇಡ್ಕರ್/ ಇಂದಿರಾ ಗಾಂಧಿ/ ನಾರಾಯಣ ಗುರು 2025-26ನೇ ಸಾಲಿನ 6ನೇ ತರಗತಿ ಪ್ರವೇಶಾತಿಗಾಗಿ ಮಂಗಳೂರಿನ ನೆಲ್ಲಿತೀರ್ಥ, ಗುರುಪುರ ಮುಲ್ಕಿಯ ಕಮ್ಮಾಜೆ, ಮೂಡಬಿದ್ರೆಯ ಕಲ್ಲಬೆಟ್ಟು, ಬೆಳ್ತಂಗಡಿಯ ಮಚ್ಚಿನ, ಮುಂಡಾಜೆ, ಹೊಸಂಗಡಿ ಬಂಟ್ವಾಳದ ವಗ್ಗ, ಪುಂಜಾಲಕಟ್ಟೆ, ಪುತ್ತೂರಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯದ ಪಂಜ ಶಾಲೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ದ.ಕÀ ಜಿಲ್ಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 6 ರಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರ ಸಾವiಗ್ರಿಗಳನ್ನು ನೀಡಲಾಗುತ್ತದೆ.
2025ರ ಫೆಬ್ರವರಿ 15 ರಂದು ಮಧ್ಯಾಹ್ನ 2:30 ರಿಂದ 4:30ರವರೆಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಯು ತನ್ನ ಎಸ್‍ಎಟಿಎಸ್ ಸಂಖ್ಯೆ, ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಸಂಬಂಧಿತ ಇತರ ದಾಖಲೆಗಳೊಂದಿಗೆ ಹತ್ತಿರದ ವಸತಿ ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸಿ ಆನ್‍ಲೈನ್ ಮೂಲಕ ಜನವರಿ 25 ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ವಸತಿ ಶಾಲಾ ಪ್ರಾಂಶುಪಾಲರ ದೂ.ಸಂ: 0824-2451237 ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.