17 C
Karnataka
Tuesday, November 26, 2024

ಅಗಲ್ಪಾಡಿ ಯಾಗದಲ್ಲಿ ದುರ್ಗಾ ಸಪ್ತಶತೀ ಪಾರಾಯಣ

ಅಗಲ್ಪಾಡಿ: ಕಾಸರಗೋಡು ಜಿಲ್ಲೆಯ ಉಬ್ರಂಗಳ ಗ್ರಾಮದ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್ ಅಗಲ್ಪಾಡಿ ವತಿಯಿಂದ ನಡೆಯುವ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾ ಯಾಗ ಪ್ರಯುಕ್ತ ಸೋಮವಾರ ದುರ್ಗಾ ಸಪ್ತಶತೀ ಪಾರಾಯಣ ಹಾಗೂ ಕಲಶಪೀಠದಲ್ಲಿ ಮಹಾಪೂಜೆ ನೆರವೇರಿತು.


ಯಾಗದ ಪ್ರಯುಕ್ತ ಕುಮಾರೀ, ಸುವಾಸಿನೀ ಹಾಗೂ ದಂಪತಿ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಬಳಿಕ ಮಹಾ ಮಂತ್ರಾಕ್ಷತೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ ವಿದ್ವಾನ್ ಚೆಂಗೋಟೈ ಹರಿಹರ ಸುಬ್ರಹ್ಮಣ್ಯ ಅಯ್ಯರ್ ಅವರಿಂದ ಸಂಗೀತ ಕಛೇರಿ ನಡೆಯಿತು.
ಏ.2ರ ಕಾರ್ಯಕ್ರಮ
ಬೆಳಗ್ಗೆ ದುರ್ಗಾ ಸಪ್ತಶತೀ ಪಾರಾಯಣ ಹಾಗೂ ಮಧ್ಯಾಹ್ನ 11.30ಕ್ಕೆ ಕಲಶಪೀಠದಲ್ಲಿ ಮಹಾಪೂಜೆ, ಕುಮಾರೀ, ಸುವಾಸಿನೀ ಹಾಗೂ ದಂಪತಿ ಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ 7 ರಿಂದ ಮಣಿಪಾಲ `ವಿಪಂಚಿ’ ಬಳಗದವರಿಂದ ಪಂಚ ವೀಣಾವಾದನ, ರಾತ್ರಿ 8ರಿಂದ ತೇಜಸ್ವಿ ಕೆ.ಎಂ. ಅಗಲ್ಪಾಡಿ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಛೇರಿ, ರಾತ್ರಿ 8.45ರಿಂದ ಗಾನಭೂಷಣ ಮುರಳಿ ಮಾಧವ ಪೆರಿಂಜೆ ಮತ್ತು ಬಳಗದವರಿಂದ ಭಕ್ತಿ ಸಂಗೀತ, ರಾತ್ರಿ 9.15ರಿಂದ ನಿವೇದ್ಯ ಸಿ.ಕೋಟೂರು ಅವರಿಂದ ಭರತನಾಟ್ಯ, ರಾತ್ರಿ 9.30ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles