ಬದಿಯಡ್ಕ:ಕಾಸರಗೋಡು ಜಿಲ್ಲೆಯ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ಇದರ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯುವ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾ ಯಾಗದ ಪ್ರಯುಕ್ತ ಶುಕ್ರವಾರ ರುದ್ರಹೋಮ ಪೂರ್ಣಾಹುತಿ ನಡೆಯಿತು.
ವಿಶೇಷ ದ್ರವ್ಯ ಕಲಶದ ಪ್ರಯುಕ್ತ ಬೆಳಗ್ಗೆ ಉಷ: ಪೂಜೆ, ದ್ರವ್ಯ ಕಲಶ ಅಭಿಷೇಕ ಮತ್ತು ಮಧ್ಯಾಹ್ನದ ಮಹಾಪೂಜೆ ಹಾಗೂ ಶ್ರೀ ಭೂತಬಲಿ ನಡೆಯಿತು. ಯಾಗ ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ ರುದ್ರ ಹೋಮ ಆರಂಭ ಹಾಗೂ ಸಹಸ್ರ ಚಂಡಿಕಾಯಾಗಶಾಲಾ ಪ್ರವೇಶ, ಗುರುಗಣಪತಿ ಪೂಜೆ, ಮಹಾ ಸಂಕಲ್ಪ, ಆಚಾರ್ಯಾದಿ ಋತ್ವಿಕ್‍ವರಣ, ಮಂಟಪ ಸಂಸ್ಕಾರ, ಪ್ರಧಾನ ಧ್ವಜಾರೋಹಣ, ಪ್ರಧಾನ ಪೀಠದಲ್ಲಿ ಕಲಶ ಸ್ಥಾಪನೆ, ದುರ್ಗಾ ಸಪ್ತಶತೀ ಪಾರಾಯಣ ಆರಂಭ ನಡೆದು ಮಧ್ಯಾಹ್ನ ರುದ್ರ ಹೋಮ ಪೂರ್ಣಾಹುತಿ ನಡೆಯಿತು.

ಯಾಗದ ಪ್ರಯುಕ್ತ ಕುಮಾರೀ, ಸುವಾಸಿನೀ ಹಾಗೂ ದಂಪತಿ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಬಳಿಕ ಮಹಾ ಮಂತ್ರಾಕ್ಷತೆ ನಡೆಯಿತು. ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಎ.ಜಿ.ಶರ್ಮಾ ಕೋಳಿಕ್ಕೆಜೆ, ಅಗಲ್ಪಾಡಿ ವೇದಮಾತಾ ಟ್ರಸ್ಟ್ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್, ಕ್ಷೇತ್ರದ ಅನುವಂಶಿಕ ಮೊಕ್ತೇಸರರು, ನಾನಾ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ರಿಂದ ಪುತ್ತೂರಿನ ಯೋಗೀಶ್ವರಿ ಜಯಪ್ರಕಾಶ್ ಅವರ ವೈಷ್ಣವಿ ನಾಟ್ಯಾಲಯದ ಬದಿಯಡ್ಕ ಶಾಖೆ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ಕಾರ್ಯಕ್ರಮ ನಡೆಯಿತು.
ಮಾ.30ರ ಕಾರ್ಯಕ್ರಮಗಳು
ಮಾ.30ರಂದು ಮುಂಜಾನೆ 6ರಿಂದ ಧನ್ವಂತರಿ ಹೋಮ ಪ್ರಾರಂಭ, ಬೆಳಗ್ಗೆ 10.30ಕ್ಕೆ ಪೂರ್ಣಾಹುತಿ, ದುರ್ಗಾ ಸಪ್ತಶತೀ ಪಾರಾಯಣ, ಬೆಳಗ್ಗೆ 11.30ಕ್ಕೆ ಕಲಶಪೀಠದಲ್ಲಿ ಮಹಾಪೂಜೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮದ ಪ್ರಯುಕ್ತ ಮಾ.30ರಂದು ರಾತ್ರಿ 8 ರಿಂದ ಅಭಿಜ್ಞಾ ಭಟ್ ಬೊಳುಂಬು ಅವರಿಂದ ಹರಿಕಥೆ, ರಾತ್ರಿ 8.30ರಿಂದ ಎಂ.ಎಸ್.ಗಿರಿಧರ್ ಮತ್ತು ವಸುಧಾ ಮಂಗಳೂರು ಹಾಗೂ ಬಳಗದವರಿಂದ ದಾಸ ಸಿಂಚನ, ರಾತ್ರಿ 9.30ರಿಂದ ಕಾಞಂಗಾಡ್ ನಾಟ್ಯಧ್ವನಿ ಕಲಾಕ್ಷೇತ್ರ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿದೆ.
