17.9 C
Karnataka
Saturday, November 23, 2024

ಜೂನ್ 7 -8; ಆವೃತ್ತಿಯ ಆಳ್ವಾಸ್ ಪ್ರಗತಿ-2024:300 ಕಂಪೆನಿಗಳು ಭಾಗವಹಿಸುವಿಕೆ ನಿರೀಕ್ಷೆ

ಮಂಗಳೂರು: 2007 ರಲ್ಲಿ ಪ್ರಾರಂಭವಾದ ಆಳ್ವಾಸ್ ಪ್ರಗತಿ-ಬೃಹತ್ ಉದ್ಯೋಗ ಮೇಳವು ಈ ವರ್ಷ, ನೇಮಕಾತಿ ಕಂಪನಿಗಳ ಪ್ರತಿಕ್ರಿಯೆ ಅಭೂತ ಪೂರ್ವವಾಗಿದ್ದು, ಇಲ್ಲಿಯವರೆಗೆ 300 ಕ್ಕೂ ಹೆಚ್ಚು ಕಂಪನಿಗಳು ನೋಂದಾಯಿಸಲ್ಪಟ್ಟಿವೆ ಮತ್ತು ಉದ್ಯೋಗ ಮೇಳದ ಸಂಘಟನಾ ಸಮಿತಿಯು 254 ಪ್ರಮುಖ ನೇಮಕಾತಿದಾರರ ಭಾಗವಹಿಸು ವಿಕೆಯನ್ನು ಅಂತಿಮಗೊಳಿಸಿದೆ.ಕಳೆದ ಆಳ್ವಾಸ್ ಪ್ರಗತಿ 7 ಉದ್ಯೋಗ ಮೇಳಗಳಲ್ಲಿ ಒಟ್ಟು 31, 896 ಉದ್ಯೋಗಾವ ಕಾಶವ ನ್ನು ನೀಡಿದೆ ಎಂದು ಮೂಡಬಿ ದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ.
ಅವರು ಸೋಮವಾರ ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.ಈ ಮೇಳವು ವಿಶೇಷವಾಗಿ ಗ್ರಾಮೀಣ ಮತ್ತು ಸವಲತ್ತುಗಳಿಲ್ಲದ ವರ್ಗಗಳ ಪ್ರತಿಭೆಗಳಿಗೆ ಅವಕಾಶ ಕೊಡಿಸುವ ಮಹತ್ಕಾಯವನ್ನು ಸಾಂಗವಾಗಿ ನಡೆಸುತ್ತಿದೆ. ಎರಡು ದಶಕಗಳಿಂದ ಪ್ರಗತಿ ಮೇಳವು ತನ್ನ ನಿಖರವಾದ ಯೋಜನೆ, ಉತ್ತಮ ಆತಿಥ್ಯ ಮತ್ತು ಉನ್ನತ ಮಟ್ಟದ ಅವಕಾಶಗಳೊಂದಿಗೆ ಪ್ರತಿಷ್ಠಿತ ಉದ್ಯೋಗ ಮೇಳವಾಗಿ ರಾಷ್ಟ್ರಮಟ್ಟದಲ್ಲಿ 12 ಗುರುತಿಸಿಕೊಂಡಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತನ್ನ ಸಿಎಸ್‌ಆರ್ ಚಟುವಟಿಕೆಯ ಅಡಿಯಲ್ಲಿ ಉದ್ಯೋಗ ಮೇಳದ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ. ಈ ಮೇಳವು, ಭಾಗವಹಿಸುವವರಿಗೆ ಮತ್ತು ನೇಮಕಾತಿ ನಡೆಸುವ ಕಂಪನಿಗಳಿಗೆ ಸಂಪೂರ್ಣವಾಗಿ ಉಚಿತವಾಗಿದೆ. ಎ೦ದರು.
ಆಳ್ವಾಸ್ ಪ್ರಗತಿ 2024 ರ 14 ನೇ ಆವೃತ್ತಿಯ ಉದ್ಘಾಟನೆಯು ಜೂನ್ 7 ರಂದು ವಿದ್ಯಾಗಿರಿಯಲ್ಲಿ ಬೆಳಿಗ್ಗೆ 9.30 ಕ್ಕೆ ನಡೆಯಲಿದ್ದು, ಎಂಆರ್‌ಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಶೆಟ್ಟಿ ನೆರವೇರಿಸಲಿದ್ದಾರೆ. ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿರುವರು.
ಗ್ಲೋಟೆಕ್ ಟೆಕ್ನಾಲಜೀಸ್, ಅಧ್ಯಕ್ಷರು, ವಿದ್ಯಾ ರವಿಚಂದ್ರನ್, ನೀವಿಯಸ್ ಸೊಲ್ಯೂಷನ್ಸ್ ಸಿಇಒ ಸುಯೋಗ್ ಶೆಟ್ಟಿ, ಇಜಿ ಇಂಡಿಯಾ ಪ್ರೈ. ಲಿಮಿಟೆಡ್ ಸಿಇಒ ಮತ್ತು ನಿರ್ದೇಶಕ, ಆನಂದ್ ಫೆನಾರ್ಂಡಿಸ್‌, ಬಿಪಿಎಂ ಆಪರೇಷನ್ಸ್ ಇನ್ಫೋಸಿಸ್, ಮಂಗಳೂರು, ಮುಖ್ಯಸ್ಥ, ಲಲಿತ್ ರೈ, 99ಗೇಮ್ಸ್/ರೋಬೋಸಾಫ್ಟ್ ಸಂಸ್ಥಾಪಕ, ಟಿಐಇ ಮಂಗಳೂರಿನ ಸ್ಥಾಪಕ ಅಧ್ಯಕ್ಷ, ರೋಹಿತ್ ಭಟ್, ಜುಗೊ ಸ್ಟುಡಿಯೋಸ್ ಪ್ರೈ. ಲಿಮಿಟೆಡ್. ಡೆಲಿವರಿ- ಉಪಾಧ್ಯಕ್ಷ, ಅಭಿಜಿತ್ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಮೋಹನ್ ಆಳ್ವಾ ತಿಳಿಸಿದರು.
ಆಳ್ವಾಸ್ ಪ್ರಗತಿ 2024:-
ಎರಡು ದಿನಗಳ ಕಾಲ ನಡೆಯುವ ಆಳ್ವಾಸ್ ಪ್ರಗತಿಯ 14 ನೇ ಆವೃತ್ತಿಯಲ್ಲಿ ಐಟಿ, ಐಟಿಇಎಸ್, ಉತ್ಪಾದನೆ, ಬಿಎಫ್‌ಎಸ್‌ಐ, ಮಾರಾಟ ಮತ್ತು ಚಿಲ್ಲರೆ, ಹಾಸ್ಪಿಟಾಲಿಟಿ, ಟೆಲಿಕಾಂ, ಆರೋಗ್ಯ, ಮಾಧ್ಯಮ, ನಿರ್ಮಾಣ, ಶಿಕ್ಷಣ ಮತ್ತು ಎನ್‌ಜಿಒಗಳಂತಹ ಪ್ರಮುಖ ವಲಯಗಳನ್ನು ಪ್ರತಿನಿಧಿಸುವ ಉನ್ನತ ನೇಮಕಾತಿದಾರರು ಭಾಗವಹಿಸಲಿದ್ದಾರೆ.ವೈದ್ಯಕೀಯ ಮತ್ತು ಪ್ಯಾರಾ-ಮೆಡಿಕಲ್, ಎಂಜಿನಿಯರಿಂಗ್, ಕಲೆ, ವಾಣಿಜ್ಯ ಮತ್ತು ನಿರ್ವಹಣೆ, ವಿಜ್ಞಾನ, ನಸಿರ್ಂಗ್ ಜೊತೆಗೆ ಐಟಿಐ, ಡಿಪ್ಲೊಮಾ, ಪಿಯುಸಿ ಮತ್ತು ಎಸ್ಎಸ್ಎಲ್‌ಸಿ ಮತ್ತು ಇತರ ಅರ್ಹ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಈ ವಲಯಗಳು ಹೆಚ್ಚಿನ ಸಂಖ್ಯೆಯ ಅವಕಾಶಗಳನ್ನು ನೀಡಲಿದೆ. ಇದಲ್ಲದೆ, ಅಂತಿಮ ಸೆಮಿಸ್ಟರ್ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಹಾಗೆಯೇ ಅನುಭವಿ ಅಭ್ಯರ್ಥಿಗಳನ್ನು ಈ ಅವಕಾಶವನ್ನುಬಳಸಿಕೊಳ್ಳಲು ಆಹ್ವಾನಿಸಲಾಗಿದೆ.ವಿವಿಧ ಕ್ಷೇತ್ರಗಳಲ್ಲಿ ಒಟ್ಟು 20,000 ಕ್ಕೂ ಹೆಚ್ಚು ಉದ್ಯೋಗಾ ವಕಾಶಗಳನ್ನು ಹೊಂದಿರುವ ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಪ್ರತಿಯೊಬ್ಬ ರಿಗೂ ಉದ್ಯೋಗ ಸಿಗುವ ಭರವಸೆ ಇದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9008907716/9663190590/7975223865/9741440490
ಉದ್ಯೋಗಾಕಾಂಕ್ಷಿಗಳ ಉಚಿತ ನೋಂದಣಿಗಾಗಿ:
http://alvaspragati.com/CandidateRegistration Page
ಸೂಚನೆ: ಐಟಿಐ, ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಮತ್ತು ಅದಕ್ಕಿಂತ ಕಡಿಮೆ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಹೊರತು ಪಡಿಸಿ, ಎಲ್ಲರಿಗೂ ನೋಂದಣಿ ಕಡ್ಡಾಯವಾಗಿದೆ.
ಆಳ್ವಾಸ್ ಪ್ರಗತಿ 2024ರ ನೋಂದಣಿ ಮತ್ತು ಪಾಲ್ಗೊಳ್ಳುವ ಕಂಪೆನಿಗಳ ಮಾಹಿತಿ www.alvaspragati.com ನಲ್ಲಿ ದೊರೆಯಲಿದೆ
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ ಇದರ ತರಬೇತಿ ಮತ್ತು ನಿಯೋಜನೆ ವಿಭಾಗದ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೊ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಪ್ರೊಡಕ್ಷನ್ ವಿಭಾಗದ ಮುಖ್ಯಸ್ಥ ಡಾ ಕುಮಾರಸ್ವಾಮಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles