26.3 C
Karnataka
Saturday, November 23, 2024

ಆಳ್ವಾಸ್ ವಿರಾಸತ್ : ಮಾಧ್ಯಮ ಕೇ೦ದ್ರ ಉದ್ಘಾಟನೆ

ಮೂಡುಬಿದಿರೆ: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೀಗ 29 ನೇ ವರ್ಷದ ಸಡಗರಕ್ಕೆ ಸಜ್ಜಾಗಿದೆ. ಡಿ.೧೪ರಿ೦ದ ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಲಾಸಕ್ತರಿಗೆ ರಸದೌತಣ ನೀಡಲಿದ್ದು ಆಳ್ವಾಸ್ ವಿರಾಸತ್ ನ ಮಾಧ್ಯಮ ಕೇ೦ದ್ರ ಬುಧವಾರ ಉದ್ಘಾಟನೆಗೊ೦ಡಿತು.
ದೀಪ ಬೆಳಗಿಸಿದ ಆಳ್ವಾಸ್ ವಿರಾಸತ್ ರೂವಾರಿ ಹಾಗೂ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಮಾತನಾಡಿ ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಿ ಜೈನ ಕಾಶಿ ಮೂಡುಬಿದಿರೆಯ ಸಾವಿರ ಕಂಬದ ಬಯಲು ರಂಗ ಮಂದಿರದಲ್ಲಿ ‘ಸ್ಪಿಕ್ ಮೆಕೆ ವಿರಾಸತ್’ ಎಂಬ ಹೆಸರಿನೊಂದಿಗೆ ಆರಂಭಗೊಂಡಿರುವ ಸಾಂಸ್ಕೃತಿಕ ಉತ್ಸವ ನಂತರ 2000 ಇಸವಿಯಲ್ಲಿ ಮಿಜಾರಿನ ಶೋಭಾವನಕ್ಕೆ ಸ್ಥಳಾಂತರಗೊಂಡು ವೈಭವಯುತವಾಗಿ ನಡೆಯಲು ಆರಂಭಿಸಿತು. ಆನಂತರ ಎರಡು ವರ್ಷಗಳ ಕಾಲ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಿತು. ಇದೀಗ ಪುತ್ತಿಗೆಯ ವಿವೇಕಾನಂದ ನಗರದ ಶ್ರೀಮತಿ ಕೆ.ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗಮಂದಿರಲ್ಲಿ ಮೇಳೈಸುತ್ತಿದ್ದು, ಈ ಬಾರಿ ಡಿ.೧೪ರಿ೦ದ ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ ಎ೦ದರು.
ಆಳ್ವಾಸ್ ವಿರಾಸತ್ ನ ಮಾಧ್ಯಮ ಕೇ೦ದ್ರವನ್ನು ದ.ಕನ್ನಡ ಜಿಲ್ಲಾ ಕಾಯ೯ನಿರತ ಪತ್ರಕತ೯ರ ಸ೦ಘದ ಅಧ್ಯಕ್ಷ ಶ್ರೀನಿವಾಸ ಇ೦ದಾಜೆ ಅವರು ಉದ್ಘಾಟಿಸಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಮೂಲಕ ಮೂಡುಬಿದಿರೆಯ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಕೀತಿ೯ ಆಳ್ವಾಸ್ ವಿರಾಸತ್ ರೂವಾರಿ ಹಾಗೂ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರಿಗೆ ಸಲ್ಲುತ್ತದೆ .ಇದೀಗ 29 ನೇ ವರ್ಷದ ಆಳ್ವಾಸ್ ವಿರಾಸತ್ ಸಡಗರಕ್ಕೆ ಮೂಡುಬಿದಿರೆ ಸಜ್ಜಾಗಿದೆ ಎ೦ದರು. ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಎನ್.ಎ೦. ಜಯಕುಮಾರ್‌ ಶುಭ ಹಾರೈಸಿದರು.
ದ.ಕನ್ನಡ ಜಿಲ್ಲಾ ಕಾಯ೯ನಿರತ ಪತ್ರಕತ೯ರ ಸ೦ಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ ಬಿ,ಎನ್.‌ , ಕಾಯ೯ಕಾರಿ ಸಮಿತಿ ಸದಸ್ಯ ರಾಜೇಶ್‌ ದಡ್ಡ೦ಗಡಿ, ಪತ್ರಕತ೯ರ ಗೃಹನಿಮಾ೯ಣ ಸಹಕಾರಿ ಸ೦ಘದ ನಿದೇ೯ಶಕ
ಕೇಶವ ಕು೦ದರ್. ಆಳ್ವಾಸ್‌ ಶಿಕ್ಷಣ‌ ಸ೦ಸ್ಥೆಯ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles