ಮಂಗಳೂರು : ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್ – ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ಅದ್ದೂರಿಯಿಂದ ಆಚರಿಸಲಾಗುವುದು ಎ೦ದು ಬಾಲಯೇಸು ಪುಣ್ಯಕ್ಷೇತ್ರದ ಗುರುಕುಲ ಮುಖ್ಯಸ್ಥರಾದ ವಂದನೀಯ ಮೆಲ್ವಿನ್ ಡಿಕುನ್ಹಾ ಅವರು ಮ೦ಗಳವಾರ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು.ಜನವರಿ 14ರಂದು ಸಂಜೆ 6.00 ಘಂಟೆಗೆ ಮಹೋತ್ಸವ ಸಂಭ್ರಮದ ಬಲಿಪೂಜೆಯನ್ನು ಜೈಪುರ ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಒಸ್ವಾಲ್ಡ್ ಜೋಸೆಫ್ ಲೂವಿಸ್ ನೆರವೇರಿಸುವರು. ಅದೇ ದಿನ ಬೆಳಿಗ್ಗೆ 10.30 ಘಂಟೆಗೆ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾ, ಅತ್ತೂರು-ಕಾರ್ಕಳ ಇದರ ರೆಕ್ಟರ್ ವಂದನೀಯ ಆಲ್ಬನ್ ಡಿಸೋಜಾರವರು ನೆರವೇರಿಸುವರು. ಇದು ಅನಾರೋಗ್ಯದಿಂದ ಬಳಲುವವರಿಗಾಗಿ ಹಾಗೂ ಹಿರಿಯರಿಗಾಗಿ ವಿಶೇಷ ಪ್ರಾರ್ಥನಾವಿಧಿಯಾಗಿರುವುದು.
ಜನವರಿ 15ರಂದು ಬೆಳಿಗ್ಗೆ 10.30 ಘಂಟೆಗೆ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಫ್ರಾನ್ಸಿಸ್ ಸೆರಾವೊ ಬಲಿಪೂಜೆಯನ್ನು ನೆರವೇರಿಸಲಿರುವರು. ಇದು ಮಕ್ಕಳಿಗಾಗಿ ನೆರವೇರಿಸುವ ವಿಶೇಷ ಬಲಿಪೂಜೆಯಾಗಿರುವುದು. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿಯು ಸಂಜೆ 6.00 ಘಂಟೆಗೆ ಕಾರ್ಮೆಲ್ ಸಭೆಯ ಸಹಾಯಕ ಪ್ರಾಂತ್ಯಾಧಿಕಾರಿಯಾದ ಅತೀ ವಂದನೀಯ ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಇವರು ನೆರವೇರಿಸಲಿರುವರು ಎ೦ದರು.
ಜನವರಿ 14ರಂದು ಜರಗುವ ಇತರ ಬಲಿಪೂಜೆಗಳ ವೇಳಾಪಟ್ಟಿ ಹೀಗಿದೆ:
ಬೆಳಿಗ್ಗೆ 6.00 (ಕೊಂಕಣಿ), 7.30 (ಇಂಗ್ಲಿಷ್), 9.00 (ಕೊಂಕಣಿ), 1.00 (ಕನ್ನಡ). ಅದೇ ದಿನ 10.30 ಘಂಟೆಗೆ ಅನಾರೋಗ್ಯದಿಂದ ಬಳಲುವವರಿಗಾಗಿ ವಿಶೇಷ ಬಲಿಪೂಜೆ ಕೊಂಕಣಿಯಲ್ಲಿ ನೆರವೇರಲಿರುವುದು.
ವಾರ್ಷಿಕ ಹಬ್ಬದ ಎರಡನೆಯ ದಿನ – ಜನವರಿ 15 ರಂದು ಬೆಳಿಗ್ಗೆ 6.30, 7.30, 9.00 ಘಂಟೆಗೆ ಕೊಂಕಣಿಯಲ್ಲಿ, 10.30ಗೆ ಮಕ್ಕಳಿಗಾಗಿ ವಿಶೇಷ ಪೂಜೆ ಹಾಗೂ 1.00 ಘಂಟೆಗೆ ಮಲಯಾಳಂ ಭಾಷೆಯಲ್ಲಿ ಪೂಜೆಯು ನೆರವೇರಲಿರುವುದು.
ಒಂಬತ್ತು ದಿನಗಳ ನೊವೇನಾ ಪ್ರಾರ್ಥನೆ:
ಈ ಎರಡು ದಿನಗಳ ವಾರ್ಷಿಕ ಮಹೋತ್ಸವಕ್ಕಾಗಿ ನವದಿನಗಳ ಸಿದ್ಧತೆ – ನೊವೇನಾ ಪ್ರಾರ್ಥನೆಯು ಜನವರಿ 5 ರಿಂದ ಜನವರಿ 13 ರ ವರೆಗೆ ನಡೆಯುವುದು. ಆ ದಿನಗಳಲ್ಲಿ ಪ್ರತಿದಿನ 9 ಬಲಿಪೂಜೆಗಳು ನಡೆಯುವುವು. ಬೆಳಿಗ್ಗೆ 6.00, 7.30, 9.00, 10.30 ಹಾಗೂ ಮಧ್ಯಾಹ್ನ 1.00 ಘಂಟೆಗೆ ಕೊಂಕಣಿ ಭಾಷೆಯಲ್ಲಿ, ಸಂಜೆ 4.00 ಘಂಟೆಗೆ ಮಲಯಾಳಂ, 5.00 ಘಂಟೆಗೆ ಇಂಗ್ಲಿಷ್ಹಾಗೂ 7.30 ಘಂಟೆಗೆ ಕನ್ನಡದಲ್ಲಿ ಬಲಿಪೂಜೆಯು ನಡೆಯಲಿರುವುದು. ಈ ಒಂಬತ್ತು ದಿನಗಳ ಪ್ರಮುಖ ಬಲಿಪೂಜೆಯು ಸಂಜೆ 6.00 ಘಂಟೆಗೆ ಪುಣ್ಯಕ್ಷೇತ್ರದ ಮೈದಾನದಲ್ಲಿ ನಡೆಯಲಿರುವುದು.
ಕ್ರಿಸ್ತ ಪ್ರಸಾದದ ಆರಾಧನೆ: ಪ್ರತಿ ನೋವೆನಾ ದಿನಗಳಲ್ಲಿ 11.30 ರಿಂದ 12.45 ಘಂಟೆಯ ವರೆಗೆ ನಡೆಯಲಿರುವುದು. ಈ ಸಂದರ್ಭದಲ್ಲಿ ವಿವಿಧ ಅಗತ್ಯಗಳಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು.
ಹೊರೆಕಾಣಿಕೆ: ಮಹೋತ್ಸವದ ಅಂಗವಾಗಿ ಹೊರೆಕಾಣಿಕೆಯು ಜನವರಿ 4 ರಂದು ಸಂಜೆ 4.30 ಘಂಟೆಗೆ ಕುಲಶೇಖರದ ಹೋಲಿಕ್ರಾಸ್ ಚರ್ಚಿನಿಂದ ಆರಂಭಗೊಳ್ಳುವುದು. ಹೊರೆಕಾಣಿಯ ಅಂತಿಮಭಾಗದಲ್ಲಿ ಸರ್ವಧರ್ಮ ಪ್ರಾರ್ಥನಾಕೂಟ ಹಾಗೂ ಧ್ವಜಾರೋಹಣ ಪುಣ್ಯಕ್ಷೇತ್ರದ ಅಂಗಳದಲ್ಲಿ ನಡೆಯುವುದು.
ನೊವೇನಾ ಹಾಗೂ ಹಬ್ಬದ ದಿನಗಳಲ್ಲಿ (ಜನವರಿ 5 ರಿಂದ 15ರ ವರೆಗೆ) ಪ್ರತೀ ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆಯು ನಡೆಯುವುದು.ಜನವರಿ 11 ಮತ್ತು 12 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ಘಂಟೆಯ ವರೆಗೆ ರಕ್ತದಾನ ಶಿಬಿರವನ್ನು ಕೂಡಾ ಏರ್ಪಡಿಸಲಾಗಿದೆ ಎ೦ದವರು ವಿವರಿಸಿದರು.
ಬಾಲಯೇಸುವಿನ ಪುಣ್ಯಕ್ಷೇತ್ರ ನಿರ್ದೇಶಕ ವಂದನೀಯ ಸ್ವೀಫನ್ ಪಿರೇರಾ, ಪ್ರಾಂತೀಯ ಪ್ರತಿನಿಧಿ, ಕಾರ್ಮೆಲ್ ಸಭೆಯ ವಂದನೀಯ ದೀಪ್ ಫೆರ್ನಾಂಡೀಸ್, ವಂದನೀಯ ರುಡೋಲ್ಫ್ ಡಿಸೋಜ .ಬಾಲಯೇಸುವಿನ ಪುಣ್ಯಕ್ಷೇತ್ರದ ಮಾಧ್ಯಮ ಪ್ರತಿನಿಧಿ ಸ್ಟ್ಯಾನ್ಲಿ ಬಂಟ್ವಾಳ ಉಪಸ್ಥಿತರಿದ್ದರು.