ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ನಗರ ಬಡತನ ನಿರ್ಮೂಲ ಕೋಶದಲ್ಲಿ ಶೇ. ೫% ಮೀಸಲು ನಿಧಿಯ ವಿಕಲಚೇತನರ ಕಲ್ಯಾಣ ಕಾರ್ಯಕ್ರಮದಡಿ ೨೦೨೪-೨೫ನೇ ಸಾಲಿನ ವ್ಯಕ್ತಿ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕುಟುಂಬದ ವಾರ್ಷಿಕ ಆದಾಯ ಸಾಮಾನ್ಯ ಸೌಲಭ್ಯ ಪಡೆಯಲು ರೂ.೩ ಲಕ್ಷ ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಸೌಲಭ್ಯ ಪಡೆಯಲು ರೂ. ೨.೫೦ ಲಕ್ಷ ಮೀರಿರಬಾರದು.
ದಾಖಲೆಗಳು:
ಅರ್ಜಿದಾರರು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾಸ್ತವ್ಯ ಹೊಂದಿರಬೇಕು, ಪಡಿತರ ಚೀಟಿಯನ್ನು ಹೊಂದಿರಬೇಕು, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಮತ್ತು ವಿಕಲಚೇತನ ಗುರುತಿನ ಚೀಟಿಯನ್ನು ಹೊಂದಿರಬೇಕು.
೫% ವಿಕಲಚೇತನ ಕಲ್ಯಾಣ ಕಾರ್ಯಕ್ರಮದ ಸೌಲಭ್ಯಗಳು :
ಸಣ್ಣ ಉದ್ದಿಮೆಗೆ ಸಹಾಯಧನ, ಪಕ್ಕ ಮನೆ ನಿರ್ಮಾಣ ಧನ ಸಹಾಯ, ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ದುರಸ್ತಿಗೆ ಧನ ಸಹಾಯ, ಯಂತ್ರ ಚಾಲಿತ ದ್ವಿಚಕ್ರ ವಾಹನ, ವೀಲ್ ಚೇರ್, ಕೃತಕ ಕಾಲು, ಶ್ರವಣ ಸಾಧನ ಮತ್ತು ವೈದ್ಯಕೀಯ ವೆಚ್ಚ, ಶಸ್ತ್ರಚಿಕಿತ್ಸೆಗೆ ಧನಸಹಾಯ, ಪೋಷಣ ಭತ್ಯೆ ಒದಗಿಸಲಾಗುತ್ತದೆ. ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ಮತ್ತು ಕ್ರೀಡಾ ಪ್ರೋತ್ಸಾಹ ಧನ – ಎಸ್ ಎಸ್ ಎಲ್ ಸಿ ಇಂದ ಸ್ನಾತಕೋತ್ತರ, ಡಾಕ್ಟರೇಟ್ ತನಕ ವಿದ್ಯಾ ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ನವೆಂಬರ್ ೩೦ ಕೊನೆಯ ದಿನ. ಅರ್ಜಿ ನಮೂನೆ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗೆ ಮಂಗಳೂರು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನ ಕೋಶವನ್ನು ಸಂಪರ್ಕಿಸುವಂತೆ ಮಹಾನಗರಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.