ಮಂಗಳೂರು: ಉದ್ಯೋಗ ನಿರತ ಮಹಿಳೆಯರಿಗಾಗಿ, ಜಿಲ್ಲೆಯ ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಂಚಾಡಿ ಮತ್ತು ಕಂಕನಾಡಿಯಲ್ಲಿ ಮಹಿಳಾ ವಸತಿ ನಿಲಯಗಳನ್ನು ಅನುಷ್ಠಾನಗೊಳಿಸಲಾಗಿದೆ.
ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ, ದಿನದ 24 ಗಂಟೆಯೂ ಬಿಸಿನೀರು ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಪ್ರತ್ಯೇಕ ಶೌಚಾಲಯಗಳು ಹಾಗೂ ಸ್ನಾನಗೃಹದ ವ್ಯವಸ್ಥೆ ಹೊಂದಿರುವ ಪ್ರತ್ಯೇಕ ಕೊಠಡಿಗಳು ಹಾಗೂ ವಿದ್ಯುತ್ ವ್ಯವಸ್ಥೆ ಮತ್ತು ಸಿಸಿ ಕ್ಯಾಮೆರಾ ಮುಂತಾದ ಮೂಲಭೂತ ಸೌಕರ್ಯಗಳನ್ನು ಹೊಂದಿದೆ.
ಪ್ರಸ್ತುತ ಕೊಂಚಾಡಿ ವಸತಿ ನಿಲಯದಲ್ಲಿ 50 ವಾಸ್ತವ್ಯ ಸಾಮಥ್ಯ೯ ಹೊಂದಿದ್ದು, 12 ಫಲಾನುಭವಿಗಳ ದಾಖಲಾತಿಗೆ ಅವಕಾಶವಿದೆ. ಹಾಗೂ ಕಂಕನಾಡಿಯಲ್ಲಿ 50 ಫಲಾನುಭವಿಗಳು ವಾಸ್ತವ್ಯ ಇರಬಹುದು, ಈಗಾಗಲೇ 33 ಉದ್ಯೋಗಸ್ಥ ಮಹಿಳೆಯರು ವಾಸ್ತವ್ಯವಿದ್ದು 17 ಫಲಾನುಭವಿಗಳ ದಾಖಲಾತಿಗೆ ಅವಕಾಶವಿದೆ.
ನಿವಾಸಿಗಳು ಮಾಸಿಕ ರೂ.1,200 ಬಾಡಿಗೆ ಹಾಗೂ ರೂ. 1,500 ಆಹಾರದ ಮೊತ್ತವನ್ನು ಪಾವತಿಸಬೇಕು. ಮಾಸಿಕ ರೂ.50,000 ಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವವರು ಹಾಗೂ ಮಂಗಳೂರು ನಗರ ವ್ಯಾಪ್ತಿಯವರನ್ನು ಹೊರತುಪಡಿಸಿ ದೂರದ ಊರಿನವರು ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸ್ತ್ರೀ ಶಕ್ತಿ ಭವನ, 2ನೇ ಮಹಡಿ, ಮೆಸ್ಕಾಂ ಭವನ ಹತ್ತಿರ, ಬಿಜೈ, ಮಂಗಳೂರು. ದೂರವಾಣಿ ಸಂಖ್ಯೆ: 0824-2451254, 2001154 ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಂಗಳೂರು ನಗರ, ವೇಲೆನ್ಸಿಯಾ ಕಂಕನಾಡಿ. ದೂರವಾಣಿ ಸಂಖ್ಯೆ: 0824-2959809 ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.