ಮಂಗಳೂರು: ಸಮನ್ವಯ ಶಿಕ್ಷಣದ ಕಾರ್ಯತಂತ್ರದಡಿಯಲ್ಲಿ 2024-25ನೇ ಸಾಲಿಗೆ ಜಿಲ್ಲೆಯಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಿಗೆ ವಿಶೇಷ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿಕಲಚೇತನ ಮಕ್ಕಳಿಗೆ ಬೋಧಿಸುವ ವಿಶೇಷ ಪ್ರೌಢ ಶಿಕ್ಷಕರು ಬಿ.ಇಡಿ ಹಾಗೂ ಪ್ರಾಥಮಿಕ ಹುದ್ದೆಗೆ ವಿಶೇಷ ಡಿ.ಇಡಿ ವಿದ್ಯಾರ್ಹತೆ ಪ್ರಮಾಣ ಪತ್ರ ಹೊಂದಿರಬೇಕು.
ಬಿ.ಐ.ಇ.ಆರ್.ಟಿ ಶಾಲೆಗಳು:
ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಮೂಡಬಿದ್ರೆ ಹಾಗೂ ಪುತ್ತೂರು ತಾಲೂಕಿನ ಪ್ರೌಢ ವಿಭಾಗದಲ್ಲಿ ತಲಾ 2 ಹುದ್ದೆಗಳು ಖಾಲಿ ಇದೆ. ಸುಳ್ಯ ತಾಲೂಕಿನ ಪ್ರಾರ್ಥಮಿಕ ವಿಭಾಗದಲ್ಲಿ 1, ಪ್ರೌಢ ವಿಭಾಗದಲ್ಲಿ 2 ಹುದ್ದೆ ಖಾಲಿ ಇದೆ. ಒಟ್ಟು ಪ್ರಾಥಮಿಕ ವಿಭಾಗದಲ್ಲಿ 1, ಪ್ರೌಢ ವಿಭಾಗದಲ್ಲಿ 14 ಹುದ್ದೆಗಳಿಗೆ 2025ನೇ ಸಾಲಿನ ಮಾರ್ಚ್ 31 ರ ವರೆಗೆ ನೇರ ಗುತ್ತಿಗೆ ಮೂಲಕ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.
ಅರ್ಹ ಅಭ್ಯರ್ಥಿಗಳು ಸೂಕ್ತ ದಾಖಲೆಯೊಂದಿಗೆ ನಗರದ ಕೊಟ್ಟಾರದಲ್ಲಿರುವ ಜಿಲ್ಲಾ ಪಂಚಾಯತ್ನ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಗೆ ಜೂನ್ 14 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 9480886934 ಸಂಪರ್ಕಿಸುವಂತೆ ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.