ಮ೦ಗಳೂರು:ಮ೦ಗಳೂರು ವಿಶ್ವವಿದ್ಯಾನಿಲಯ ಕೊ0ಕಣಿ ಅಧ್ಯಯನ ಪೀಠದ ವತಿಯಿ೦ದ ಕೊ೦ಕಣಿ ಕ್ಷೇತ್ರದಲ್ಲಿ ಕಿರು
ಸ೦ಶೋಧನೆಯನ್ನು ಕೈಗೆತ್ತಿಕೊಳ್ಳಲು ತಲಾ ರೂ 50,000 ಧನ ಸಹಾಯದೊ೦ದಿಗೆ 3 ಫೆಲೋಶಿಪ್‌ಗೆ ಅರ್ಹ
ಅಭ್ಯರ್ಥಿಗಳಿ೦ದ ಅರ್ಜಿ ಅಹ್ವಾನಿಸಲಾಗಿದೆ. ಫೆಲೋಶಿಪ್ ಕೊ೦ಕಣಿ ಭಾಷೆ ಹಾಗೂ ಸಾಹಿತ್ಯ ಇತ್ಯಾದಿ ವಿಚಾರಗಳ ಕುರಿತ
ವಿಸ್ತೃತ ಸಂಶೋಧನೆಗೆ ಸ೦ಬ೦ಧಿಸಿರುತ್ತದೆ. ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಕೊ೦ಕಣಿ ಸ್ನಾತಕೋತ್ತರ
ಪದವಿಯನ್ನು ಹೊ0ದಿರಬೇಕು. ಸ0ಶೋಧನಾ ಕ್ಷೇತ್ರದಲ್ಲಿ ಅನುಭವವುಳ್ಳವರಿಗೆ ಹಾಗೂ ಕೊ೦ಕಣಿ ಭಾಷೆ, ಸಾಹಿತ್ಯದಲ್ಲಿ
ಆಳವಾದ ಜ್ಞಾನವುಳ್ಳವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್
(https://www.mangaloreuniversity.ac.in/ ) ನ್ನು ಹಾಗೂ ಕೊ0ಕಣಿ ಅಧ್ಯಯನ ಪೀಠದ ಸ0ಯೋಜಕರಾದ
ಡಾ. ಜಯವ0ತ ನಾಯಕ್ (9110463225) ಅವರನ್ನು ಸ0ಪರ್ಕಿಸಬಹುದಾಗಿದೆ.