ಮಂಗಳೂರು: ಪುತ್ತೂರು ವಿಭಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಐಟಿಐ ಹಾಗೂ ಎಸ್.ಎಸ್.ಎಲ್.ಸಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನಿಯೋಜನೆಗೆ ಬಾಕಿ ಇರುವ ಖಾಲಿ ಸ್ಥಾನಗಳು: ಮೆಕ್ಯಾನಿಕಲ್ ಡಿಸೇಲ್ - 25 ಸ್ಥಾನ, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ – 10 ಸ್ಥಾನ, ಎಲೆಕ್ಟ್ರಿಷಿಯನ್ - 10 ಸ್ಥಾನ. ಮೋಟಾರ್ ಮೆಕ್ಯಾನಿಕ್ ವೆಹಿಕಲ್ - 5 ಸ್ಥಾನ, ವೆಲ್ಡರ್ - 5 ಸ್ಥಾನ, ಫಿಟ್ಟರ್ - 10 ಸ್ಥಾನ, ಮೋಟರ್ ವೆಹಿಕಲ್ ಬಾಡಿ ಬಿಲ್ಡರ್ - 4 ಸ್ಥಾನ, ಮೆಕ್ಯಾನಿಕ್ ಆಟೋಮೊಬೈಲ್ - 23 ಸ್ಥಾನ ಹಾಗೂ ಪಾಸಾ - 13 ಸ್ಥಾನಗಳು ಲಭ್ಯವಿದ್ದು, ತರಬೇತಿ ಅವಧಿ 1 ವರ್ಷ.
ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನಿಯೋಜನೆಗೆ ಬಾಕಿ ಇರುವ ಖಾಲಿ ಸ್ಥಾನಗಳ ವಿವರ: ಮೆಕ್ಯಾನಿಕ್ ಡೀಸೆಲ್ ನಲ್ಲಿ 30 ಸ್ಥಾನಗಳು ಲಭ್ಯವಿದ್ದು, ತರಬೇತಿ ಅವಧಿ 2 ವರ್ಷಗಳಾಗಿದೆ.
ಐ.ಟಿ.ಐ ಅಭ್ಯರ್ಥಿ ಅರ್ಜಿ ಸಲ್ಲಿಸುವಾಗ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಎಸ್.ಎಸ್.ಎಲ್.ಸಿ ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 21 ವರ್ಷ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸೈನಿಕರ ಮಕ್ಕಳಿಗೆ ನಿಯಮಾವಳಿಯನ್ವಯ ಮೀಸಲಾತಿ ನೀಡಲಾಗುತ್ತದೆ.