24.9 C
Karnataka
Friday, November 15, 2024

ಅರಳು 2024 : ಮಕ್ಕಳ ನಾಟಕೋತ್ಸವ

ಮಂಗಳೂರು:ಕಲಾಭಿ(ರಿ.) ಮಂಗಳೂರು ಹಾಗೂ ಕೆನರಾ ಕಲ್ಚರಲ್ ಅಕಾಡೆಮಿ ಯ ಜಂಟಿ ಆಶ್ರಯದಲ್ಲಿ ಮೂಡಿಬಂದ ,ಏಪ್ರಿಲ್ 11 ರಂದು ಪ್ರಾರಂಭಗೊಂಡ ”ಅರಳು 2024′ ಎಂಬ ಮಕ್ಕಳ ರಂಗಭೂಮಿಯ ವಿಶೇಷ ಕಾರ್ಯಾಗಾರವು ‘ಮಕ್ಕಳ ನಾಟಕೋತ್ಸವ’ವಾಗಿ , ಸಮಾರೋಪ ಕಾರ್ಯಕ್ರಮದೊಂದಿಗೆ ಏಪ್ರಿಲ್ 21ರಂದು ಕೆನರಾ ಪದವಿ ಪೂರ್ವ ಕಾಲೇಜು, ಮಂಗಳೂರು ಇಲ್ಲಿನ ಬಯಲು ರಂಗಮಂದಿರದಲ್ಲಿ ಸಂಪನ್ನವಾಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಟ್ಟದ ಜಾದೂಗಾರರು ಕುದ್ರೋಳಿ ಗಣೇಶ್ ರವರು ಸಮಾರೋಪ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕರು ಹಾಗೂ ನಟರಾಗಿರುವ ರಾಹುಲ್ ಅಮೀನ್ ಆಗಮಿಸಿದ್ದರು. ಅಶ್ವಿನಿ ಕಾಮತ್ ( ಸದಸ್ಯೆ, ಆಡಳಿತ ಮಂಡಳಿ, CHS ಅಸೋಸಿಯೇಶನ್ ), ಗೋಪಾಲ್ ಶೆಟ್ಟಿ ( Dean, ಕೆನರಾ ಪದವಿ ಪೂರ್ವ ಕಾಲೇಜು), ಕವಿತಾ ಮೌರ್ಯ ( ಮುಖ್ಯೋಪಾಧ್ಯಾಯಿನಿ,ಕೆನರಾ ಹಿರಿಯ ಪ್ರಾಥಮಿಕ ಶಾಲೆ), ಸುರೇಶ್ ವರ್ಕಾಡಿ (ಗೌರವಾಧ್ಯಕ್ಷರು, ಕಲಾಭಿ (ರಿ.)) , ಡಾ. ಮೀನಾಕ್ಷಿ ರಾಮಚಂದ್ರ ( ಅಧ್ಯಕ್ಷರು, ಕಲಾಭಿ (ರಿ.)) ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವು ಶಿಬಿರದ ಮಕ್ಕಳು, ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಅರಳು ಕಾರ್ಯಗಾರದಲ್ಲಿ ಭಾಗವಹಿಸಿದ ಕಲಾವಿದರು ಒಟ್ಟಾಗಿ ಹಾಡಿದ ರಂಗ ಸಂಗೀತಗಳೊಂದಿಗೆ ಶುರುವಾಯಿತು. ನಂತರ ಸಭಾಕಾರ್ಯಕ್ರಮದೊಂದಿಗೆ ಮುಂದುವರೆಯಿತು. ಶ್ರೇಯಸ್ ಸಾಲಿಯಾನ್ ನಿರೂಪಣೆ ಮಾಡಿದರು, ಕಾರ್ಯಗಾರ ಸಂಯೋಜಕರಾದ ಉಜ್ವಲ್ ಯು.ವಿ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ನಾಟಕೋತ್ಸವದ ಮುಖ್ಯ ಭಾಗವಾಗಿದ್ದ ಎರಡು ನಾಟಕಗಳಾದ, ರಾಜು ಮಣಿಪಾಲ್ ನಿರ್ದೇಶನದ ‘ಹಾಕ್ಕಿಹಾಡು’ ಹಾಗೂ ರಮೇಶ್ ಕೆ ನಿರ್ದೇಶನದ ‘ಕಪಟ ಸನ್ಯಾಸಿ ಮಾರ್ಜಾಲ ಮತ್ತು ಮೂಷಕ ಕುಲ’ ಎಂಬ ನಾಟಕಗಳನ್ನು ಕಾರ್ಯಗಾರದಲ್ಲಿ ಭಾಗವಹಿಸಿದ್ದ 30 ಮಕ್ಕಳು ಸೇರಿ ನಿರ್ದೇಶಕರ ಮಾರ್ಗದರ್ಶನದಲ್ಲಿ ತಮ್ಮ ಹೆತ್ತವರು ಹಾಗೂ ಪ್ರೇಕ್ಷಕರ ಮುಂದೆ ಪುಟ್ಟ ಕಲಾವಿದರಾಗಿ ಪ್ರಸ್ತುತಪಡಿಸಿದರು.
ಎರಡೂ ನಾಟಕಗಳು ಅದ್ಬುತವಾಗಿ ಮೂಡಿ ಬಂದಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles