ಮಂಗಳೂರು : ಸರಕಾರಿ ಪ್ರೌಢ ಶಾಲೆ ಅತ್ತಾವರ ಮಂಗಳೂರು ದಕ್ಷಿಣವಲಯದ ವಾರ್ಷಿಕ ಕ್ರೀಡಾಕೂಟ ಅತ್ತಾವರ ಶಾಲಾ ಮೈದಾನದಲ್ಲಿ ಮಂಗಳವಾರ ನಡೆಯಿತು.
ಅತ್ತಾವರ ಚಕ್ರಪಾಣಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಮಂಗಳೂರು ಪೂರ್ವ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಒಂದು ನಾಣ್ಯದ ಎರಡು ಮುಖ ಇದ್ದಂತೆ, ಕ್ರೀಡಾ ಸ್ಪೂರ್ಥಿಯಿಂದ ಆಡಬೇಕು,, ಹಾಗೂ ಮಾದಕ ವ್ಯಸನದಿಂದ ದೂರ ಇದ್ದರೆ ಉತ್ತಮ ಜೀವನ ಕಟ್ಟಬಹುದು ಎಂದರು.
ಮಂಗಳೂರು ಲೇಡಿಹಿಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಲಿಡಿಯಾ ಡಿಕೋಷ್ಟ ಧ್ವಜಾರೋಹಣಗೈದರು, ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಮರೀನಾ ಕ್ರೀಡಾ ಕ್ರೀಡಾಜ್ಯೋತಿ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಪಥ ಸಂಚಲನ ನಡೆಯಿತು.
ರೋಟರಿ ಕ್ಲಬ್ ಮಾಜಿ ಸಹಾಯಕ ಗವನ೯ರ್ ಸದಾಶಿವ ಶೆಟ್ಟಿ ,ಅತ್ತಾವರ ಪ್ರೌಢ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಫಕೀರ್ ನಾಯಕ್, ಅತ್ತಾವರ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಖಾಸಿಂ, ರೋಟರಿ ಕ್ಲಬ್ ಪದಾಧಿಕಾರಿ ವಿನೋದ್ ಕುಡ್ವಾ, ಅತ್ತಾವರ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಮಾಯಾ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮರ್ಸಿ ವೀಣಾ ಡಿಸೋಜ, ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಮರೀನಾ, ಅತ್ತಾವರ ಶಾಲೆಯ ದಾನಿ ಜೂಡ್ ಫ್ಯೂಜಲ್, ಮಂಗಳೂರು ಲೇಡಿಹಿಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಲಿಡಿಯಾ ಡಿಕೋಷ್ಟ ಅವರನ್ನು ಸನ್ಮಾನಿಸಲಾಯಿತು. ಪ್ರೌಢ ಶಾಲೆಯ ಮುಖ್ಯೋಪದ್ಯಾಯರಾದ ಬಿ.ರಾಘವೇಂದ್ರ ಸ್ವಾಗತಿಸಿದರು, ಬಿಎಡ್ ಶಿಕ್ಷಾರ್ಥಿ ಮಹದೇವ ಕಾರ್ಯಕ್ರಮ ನಿರೂಪಿಸಿದರು, ದೈಹಿಕ ಶಿಕ್ಷಕಿ ಲಿಲ್ಲಿ ಪಾಯಸ್ ವಂದಿಸಿದರು.