16.7 C
Karnataka
Saturday, November 23, 2024

ಸುಣ್ಣoಬಳ ಹಾಗೂ ವಾದಿರಾಜ ರಿಗೆ ಮಸ್ಕತ್ ನಲ್ಲಿ ಬಿರುದು ಪ್ರದಾನ

ಮಸ್ಕತ್: ” ಬಿರುವ ಜವಾಣೆರ್ ‘ಬಿರ್ಸೆರ್ ‘ ಕೂಡ ಹೌದು. ವಿದೇಶ ದಲ್ಲಿ ವಿಜೃಂಭಣೆ ಯ ಆಟ ಆಡಿಸಿದ ಅವರ ಈ ಸಾಹಸ ಮೆಚ್ಚುವಂತಹದು. ಎಂದು ” ಖ್ಯಾತ ಕಲಾವಿದ ಸುಣ್ಣಬoಳ ನುಡಿದರು.
ಮಸ್ಕತ್ ನಲ್ಲಿ ಶ್ರೀ ದೇವೀ ಮಹಾತ್ಮೆ” ಯಕ್ಷಗಾನ ಪ್ರದರ್ಶನ ವೇದಿಕೆಯಲ್ಲಿ ಖ್ಯಾತ ಯಕ್ಷಗಾನ ವೇಷಧಾರಿ, ಅರ್ಥಧಾರಿ ಹಾಗೂ ಶ್ರೀ ಕಟೀಲು ಮೇಳದ ಪ್ರಭಂದಕ ಸುಣ್ಣoಬಳ ವಿಶ್ವೇಶ್ವರ ಭಟ್ ಅವರಿಗೆ ” ಯಕ್ಷ ನಿಧಿ ” ಹಾಗೂ ಖ್ಯಾತ ನಿರೂಪಕ, ಉಪನ್ಯಾಸಕ, ಯಕ್ಷ ಕಲಾ ವ್ಯವಸಾಯಿ, ಅರ್ಥಧಾರಿ, ಮಿಮಿಕ್ರಿ ಕಲಾ ಪ್ರವೀಣ, ಕನ್ನಡ ಪದ ಪ್ರವೀರ ಡಾ. ವಾದಿರಾಜ ಕಲ್ಲುರಾಯ ಅವರಿಗೆ ” ಯುವ ಸಿರಿ ” ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಬಿರುವ ಜವಾನೆರ್ ಮಸ್ಕತ್ ಹಾಗೂ ಇನ್ಸ್ಪಿರೇಷನ್ ಡಿಸೈನ್ ಇವರು ಮಸ್ಕತ್ ನ ರೂಯಿ ಯ ಅಫಲಾಜ್ ಹೋಟೆಲ್ ನಡೆಸಿದ್ದ ಈ ಕಾರ್ಯಕ್ರಮವನ್ನು ಸುಮಾರು 1400 ಮಂದಿ ವೀಕ್ಷಿಸಿದ್ದಾರೆ. ಯಕ್ಷಗಾನ ಮುಗಿದ ನಂತರ ಜರಗಿದ್ದ ಕಲಾವಿದ ಗೌರವ ಕಲಾಪವನ್ನು ಸಭಾಂಗಣದಲ್ಲಿದ್ದ ಸಹಸ್ರಾರು ಯಕ್ಷಗಾನ ಅಭಿಮಾನಿಗಳು ಯಕ್ಷಗಾನ ವೀಕ್ಷಿಸಿ ಆನಂದಿಸಿದ್ದಾರೆ.
ರಕ್ತಬೀಜಾಸುರನಾಗಿ ವಿಜೃಂಭಿಸಿದ ತೆಂಕು ತಿಟ್ಟಿನ ಪ್ರಾತಿನಿಧಿಕ ವೇಷಧಾರಿ ಸುಣ್ಣoಬಳ ಅವರನ್ನು ಆನಂದ ಸನಿಲ್, ಗಂಗಾಧರ ಪೂಜಾರಿ, ಮಿತ್ರ ಹೆರಾಜೆ, ಶಶಿಧರ ಶೆಟ್ಟಿ ಮಲ್ಲಾರ್, ದಿವಾಕರ ಶೆಟ್ಟಿ ಮಲ್ಲಾರ್, ಡಾ. ಅಂಚನ್ ಸಿ ಕೆ ಅವರು ಸನ್ಮಾನಿಸಿದರು.
ಬ್ರಹ್ಮ ಹಾಗೂ ಸುಗ್ರೀವ ಪಾತ್ರ ನಿರ್ವಹಿಸಿ, ಕಲಾವಿದರ ಸಂಯೋಜಕರಾಗಿ ಯಕ್ಷಯಾನದ ಸಾರಥಿಯಾಗಿ ಸಹಕರಿಸಿದ್ದ ವಾದಿರಾಜ ಕಲ್ಲುರಾಯ ಅವರನ್ನು ನರೇಶ್ ಪೈ, ದಿನೇಶ್ ಪೂಜಾರಿ, ಎಸ್. ಡಿ. ಪ್ರಸಾದ್, ಸೂರ್ಯ ಕುಮಾರ್ ಸುವರ್ಣ, ಲೀಲಾಕ್ಷ ಬಿ ಕರ್ಕೇರ ಹಾಗೂ ಸುಚೇತನಾ ಅಂಚನ್ ಅವರು ಸನ್ಮಾನಗೈದರು.
ನಿತಿನ್ ಹುನ್ಸೆ ಕಟ್ಟೆ ಸನ್ಮಾನ ಪತ್ರ ವಾಚನ ಮಾಡಿದರು. ಕದ್ರಿ ನವನೀತ ಶೆಟ್ಟಿ ಅವರು ಅಭಿನಂದನೆ- ನಿರೂಪಣೆ ಮಾಡಿದರು.ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಸ್ವಾಗತಿಸಿದರು. ಇನ್ಸ್ಪಿರೇಷನ್ ಡಿಸೈನ್ ನ ಉತ್ತಮ್ ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು.ಯಕ್ಷಗಾನದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಪರಿಚಯಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles