ಮ೦ಗಳೂರು: ಕಣಾ೯ಟಕ ಬ್ಯಾ೦ಕಿನ ಹಿರಿಯ ಅಧಿಕಾರಿ ವಾದಿರಾಜ್ ಕೆ.ಎ.(5೧) ಅವರು ಕತ್ತು ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದುಕೊ೦ಡು ಆತ್ಮಹತ್ಯೆ ಮಾಡಿಕೊ೦ಡಿರುವ ಘಟನೆ ಗುರುವಾರ ನಡೆದಿದೆ.
ಕಣಾ೯ಟಕ ಬ್ಯಾ೦ಕಿನ ಕೇ೦ದ್ರ ಕಚೇರಿಯಲ್ಲಿ ಚೀಫ್ ಕ೦ಪ್ಲೆಯೆನ್ಸ್ ಅಫೀಸರ್ ಆಗಿರುವ ವಾದಿರಾಜ್ ಕೆ.ಎ.(5೧) ನಗರದ ಬೋ೦ದೇಲ್ ನ ಅಪಾಟ್೯ಮೆ೦ಟ್ ವೊ೦ದರಲ್ಲಿ ವಾಸಿಸುತ್ತಿದ್ದರು. ಗುರುವಾರ ಬೆಳಗ್ಗೆ ಬ್ಯಾ೦ಕಿನ ವಾಹನ ಚಾಲಕ ಎ೦ದಿನ೦ತೆ ಅಪಾಟ್೯ಮೆ೦ಟ್ ಗೆ ಬಂದು ಅವರಿಗಾಗಿ ಕಾಯುತ್ತಿದ್ದರು. ಕಚೇರಿಗೆ ಹೊರಡುವ ವೇಳೆಯಾದರೂ ಅವರು ಕೆಳಗಡೆ ಬಾರದಿದ್ದಾಗ ಕಾರಿನ ಚಾಲಕ ಅಪಾಟ್೯ಮೆ೦ಟ್ ಗೆ ಹೋಗಿ ನೋಡಿದಾಗ ವಾದಿರಾಜ್ ಕತ್ತು ಕೊಯ್ದುಕೊ೦ಡ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ.ವಾದಿರಾಜ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನೆ ವೇಳೆ ಅವರ ಪತ್ನಿ ಕಾಯ೯ನಿಮಿತ್ತ ಹೊರಗಡ ಹೋಗಿದ್ದರು . ಮ೦ಗಳೂರು ಗ್ರಾಮಾ೦ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕ೦ಡು ತನಿಖೆ ನಡೆಸಲಾಗುತ್ತಿದೆ.