ಬ೦ಟ್ವಾಳ: ಸ್ಕೂಟರ್ ಮರಕ್ಕೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ದೇವಸ್ಯಪಡೂರು ಗ್ರಾಮದ ಮರಾಯಿದೊಟ್ಟು ಕ್ರಾಸ್ ಕೊಡ್ಯಮಲೆ ಎಂಬಲ್ಲಿ ಎ೦ಬಲ್ಲಿ ಡಿ.31ರಂದು ಬೆಳಗ್ಗಿನ ಜಾವ ಸ೦ಭವಿಸಿದೆ.
ಗೌತಮ್ (27) ಮೃತಪಟ್ಟವರು.
ಸರಪಾಡಿ ನಿವಾಸಿ ಪ್ರವೀಣ್ ಕುಮಾರ್ ಡಿ.31ರಂದು ಬೆಳಗ್ಗಿನ ಜಾವ ಮೋಟಾರ್ ಸೈಕಲ್ ನಲ್ಲಿ ತೆರಳುತ್ತಾ, ಮರಾಯಿದೊಟ್ಟು ಕ್ರಾಸ್ ಕೊಡ್ಯಮಲೆಗೆ ತಲುಪಿದಾಗ, ಸ್ಕೂಟರ್ ಸವಾರನೊಬ್ಬ ಸ್ಕೂಟರ್ ಮರಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿ ಬಿದ್ದಿರುವುದನ್ನು ಕಂಡು ಬ೦ದಿದೆ.ಹತ್ತಿರ ಹೋಗಿ ನೋಡಲಾಗಿ ಆ ವ್ಯಕ್ತಿಯು ಅವರ ಪರಿಚಯದ ಗೌತಮ್ ಆಗಿದ್ದರು.ಅಪಘಾತದಿಂದ ಅವರ ತಲೆಗೆ ತೀವ್ರ ತರಹದ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ.
ಅಪಘಾತದ ಬಗ್ಗೆ ಗೌತಮ್ ರವರ ಮನೆಯವರಿಗೆ ದೂರವಾಣಿ ಕರೆ ಮಾಡಿ ವಿಚಾರ ತಿಳಿಸಿದರು.ಸ್ಥಳಕ್ಕೆ 108 ಅಂಬ್ಯುಲೆನ್ಸ್ ನ್ನು ಕರೆಸಿಕೊ೦ಡು ಚಿಕಿತ್ಸೆಯ ಬಗ್ಗೆ ಗೌತಮ್ ರವರನ್ನು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಬೆಳಿಗ್ಗೆ 6.15 ಗಂಟೆಗೆ ಕರೆದುಕೊಂಡು ಬಂದಿದ್ದು ಅಲ್ಲಿಯ ವೈದ್ಯರು ಪರೀಕ್ಷಿಸಿ ಗೌತಮ್ ರವರು ಮೃತಪಟ್ಟಿರುವುದಾಗಿ ತಿಳಿಸಿದರು. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
