37.1 C
Karnataka
Saturday, April 26, 2025

ದೇರಳಕಟ್ಟೆಯಲ್ಲಿ ‘ಬ್ಯಾರೀಸ್ ಟರ್ನಿಂಗ್ ಪಾಯಿಂಟ್’ ಮಾಲ್ ಎ. 26 ರಂದು ಲೋಕಾರ್ಪಣೆ

ಮ೦ಗಳೂರು : ಪ್ರತಿಷ್ಠಿತ ಬ್ಯಾರೀಸ್ ಗ್ರೂಪ್ ನ ಬಹು ನಿರೀಕ್ಷಿತ ನಗರ ಜೀವನ ಶೈಲಿಯ ವಾಣಿಜ್ಯ ಹಾಗು ವಸತಿ ಯೋಜನೆ ದೇರಳಕಟ್ಟೆಯ ‘ಬ್ಯಾರೀಸ್ ಟರ್ನಿಂಗ್ ಪಾಯಿಂಟ್’ ಎ.26 ರಂದು ಸಂಜೆ 4.30 ಗಂಟೆಗೆ ಉದ್ಘಾಟನೆಯಾಗಲಿದೆ ಎಂದು ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ರಿಟೈಲ್ ಹೆಡ್ ಕೆ.ನಂದ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ದೇರಳಕಟ್ಟೆ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಬ್ಯಾರೀಸ್ ಸಿಟಿ ಸೆಂಟರ್ ಮಾಲ್ ನಲ್ಲಿ ಯಶಸ್ಸು ಸಾಧಿಸಿದ ಬಳಿಕ ಇದೀಗ ದೇರಳಕಟ್ಟೆಯಲ್ಲಿ ನಗರ ಜೀವನ ಶೈಲಿಯ ಈ ವಿಶಿಷ್ಟ ಯೋಜನೆ ಶುಭಾರಂಭವಾಗುತ್ತಿದೆ. ಈ ಯೋಜನೆಯ ಹೃದಯ ಭಾಗದಲ್ಲಿ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಸೆಂಟರ್, ಆಧುನಿಕ ನಾಲ್ಕು ಪರದೆಗಳ ಮಲ್ಟಿಪ್ಲೆಕ್ಸ್, ವಿವಿಧ ಪಾಕ ವಿಧಾನಗಳನ್ನು ಒಳಗೊಂಡ ಸೊಗಸಾದ ಫುಡ್ ಕೋರ್ಟ್, ಜತೆಗೆ ಇಂಟರಾಕ್ಟಿವ್ ಆಟಗಳು, ನಾಲ್ಕು ಲೇನ್ ಬೌಲಿಂಗ್ ಅಲೈ, ದೊಡ್ಡ ಕ್ಲೈಂಬಿಂಗ್ ವಾಲ್, ಬಂಪರ್ ಕಾರುಗಳು, ಇಂಡೋರ್ ಕ್ರಿಕೆಟ್, ಮಕ್ಕಳಿಗಾಗಿ ಸಾಫ್ಟ್ ಏರಿಯಾ ಹಾಗೂ ಇತರ ವೈವಿಧ್ಯಮಯ ಆಟ ಹಾಗು ಮನೋರಂಜನೆಗಳು ಲಭ್ಯ ಇವೆ. ಗ್ರಾಹಕರಿಗೆ ಈ ಆಟಗಳಲ್ಲಿ ಭಾಗವಹಿಸಿ , ಫುಡ್ ಕೋರ್ಟ್ ನಲ್ಲಿ ರುಚಿ ರುಚಿಯಾದ ಆಹಾರ ಖಾದ್ಯಗಳನ್ನು ಸವಿದು ಖುಷಿ ಪಡೆಯಲು ಶೀಘ್ರ ಅವಕಾಶ ಸಿಗಲಿದೆ ಎಂದು ನಂದ ಕುಮಾರ್ ಹೇಳಿದರು.

ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ಮಾಲ್ ನ ಮನೋರಂಜನಾ ಪ್ರದೇಶವು ವಿಶಿಷ್ಟ ಹಾಗೂ ನೈಸರ್ಗಿಕ ವಿನ್ಯಾಸದೊಂದಿಗೆ ರೂಪುಗೊಂಡಿದೆ. ಮಲ್ಟಿಪ್ಲೆಕ್ಸ್, ಎಂಟರ್ ಟೈನ್ಮೆಂಟ್ ಸೆಂಟರ್ ಹಾಗೂ ಫುಡ್ ಕೋರ್ಟ್ ಒಂದೇ ಜಾಗದಲ್ಲಿ ಸಂಯೋಜನೆ ಆಗಿದೆ. ಎತ್ತರದ ಇಂಟೀರಿಯರ್ ಗಳು ಮತ್ತು ಗಾಜಿನ ಭಿತ್ತಿಗಳ ಮೂಲಕ ಆಂತರಿಕ ಹಾಗೂ ಬಾಹ್ಯ ಭಾವವನ್ನು ಒದಗಿಸುತ್ತದೆ. ಪ್ರತಿದಿನ ಬೆಳಗ್ಗಿನಿಂದ ರಾತ್ರಿ ವರೆಗೆ ವಿಭಿನ್ನ ವಾತಾವರಣ ಅನುಭವಿಸಬಹುದು. ಇಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಐದು ಬಾರಿ ನಮಾಝ್ ನಿರ್ವಹಣೆಗೆ ಪ್ರತ್ಯೇಕ ‌ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ನ ಈ ಹೊಸ ಯೋಜನೆಯು ದೇರಳಕಟ್ಟೆ ಪರಿಸರದ ಪ್ರಗತಿ, ಬದಲಾವಣೆ ಹಾಗೂ ಹೊಸ ದಿಕ್ಕನ್ನು ಸೂಚಿಸುತ್ತದೆ. ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಗರಗಳನ್ನು ವಿಶ್ವದರ್ಜೆಗೆ ಏರಿಸಬೇಕು ಎಂಬ ಇಲ್ಲಿನ ಶಾಸಕ ಹಾಗು ರಾಜ್ಯ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಅವರ ದೂರದೃಷ್ಟಿಯಂತೆ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ರೂಪುಗೊಂಡಿದೆ. ಅಲ್ಲದೇ ಇದೇ ಜಾಗದಲ್ಲಿ ವಿಶಾಲ ಹೈಪರ್ ಮಾರ್ಕೆಟ್ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್ ಗಳ ಪ್ರಮುಖ ಔಟ್‌ಲೆಟ್ ಗಳು ಶೀಘ್ರ ಆರಂಭಗೊಳ್ಳಲಿವೆ. ಇದು ಶಾಪಿಂಗ್ ಹಾಗೂ ಮನರಂಜನೆಗೆ ಕೇಂದ್ರ ಬಿಂದು ಆಗಲಿದೆ. ಎಪ್ರಿಲ್ 26 ರಂದು ಸಂಜೆ 4.30 ಕ್ಕೆ ಇವುಗಳು ಗ್ರಾಹಕರಿಗಾಗಿ ಲೋಕಾರ್ಪಣೆ ಗೊಳ್ಳಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಇಂಟೀರಿಯರ್ ಮತ್ತು ಫಿಟ್ ಔಟ್ಸ್ ನ ಸೀನಿಯರ್ ಮ್ಯಾನೇಜರ್ ಕೋಡಿ ಮೊಹಮ್ಮದ್ ಇಕ್ಬಾಲ್, ಮಾರ್ಕೆಟಿಂಗ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ಪ್ರಫುಲ್ಲ ಪುಷ್ಪರಾಜ್, ಪಿಆರ್ ಒ ಬಾಪು ನೈನಾರ್ ಉಪಸ್ಥಿತರಿದ್ದರು.

ಕರಂಗಲ್ಪಾಡಿ/ಶಿವಭಾಗ್ : ವಿದ್ಯುತ್‌ ನಿಲುಗಡೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles