ಬೆಂಗಳೂರು: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಮೊದಲ ಬ್ಯಾಚ್ ಪೋಸ್ಟ್ ಗ್ರಾಜ್ಯುಯೇಟ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಸೆಪ್ಟೆಂಬರ್ 27ರ೦ದು ಜರಗಿತು.
ಒಟ್ಟು 694 ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆದರು.
ಪದವಿಪ್ರದಾನ ಸಮಾರಂಭ ಮೆರವಣಿಗೆಯ ರೆಜಿಸ್ಟ್ರಾರ್ ಡಾ. ಮೆಲ್ವಿನ್ ಕೊಲಾಸೊ ಮತ್ತು ಪರೀಕ್ಷಾ ನಿಯಂತ್ರಕ ಡಾ. ಸಿ ಮೋಹನ ದಾಸ್ ನೇತೃತ್ವ ವಹಿಸಿದ್ದರು. ವಿಶ್ವವಿದ್ಯಾಲಯದ ಉಪಕುಲಪತಿ ರೆ| ಡಾ. ವಿಕ್ಟರ್ ಲೋಬೋ ಎಸ್.ಜೆ. ಅವರು
ಸ್ವಾಗತಿಸಿದರು. ಉನ್ನತ ಶಿಕ್ಷಣ ಮತ್ತು ಪ್ರೋ-ವಿಜಿಟರ್ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರುಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದರು. ಪದವಿಪ್ರದಾನ ಸಮಾರಂಭದ ಭಾಷಣವನ್ನು ಹಳೆಯ ವಿದ್ಯಾರ್ಥಿ,ಪ್ರಸಿದ್ಧ ನರಶಸ್ತ್ರ ಚಿಕಿತ್ಸಕ ಮತ್ತು, ಬೆಂಗಳೂರಿನ ನಾರಾಯಣ ನರವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ತಿಮ್ಮಪ್ಪ ಹೆಗ್ಡೆ, ನೀಡಿದರು. ವಿಶ್ವವಿದ್ಯಾಲಯದ ಕುಲಪತಿ ರೆ| ಫಾ| ಡಿಯೋನಿಸಿಯಸ್ ವಾಜ್ ಎಸ್.ಜೆ. ಉಪಸ್ಥಿತರಿದ್ದರು. ಉಪಕುಲಪತಿ ಡಾ. ರೋನಾಲ್ಡ್ ಮಸ್ಕರೇನ್ಹಸ್ ವ೦ದಿಸಿದರು.