ಮ೦ಗಳೂರು: ಚಾಮರ ಫೌಂಡೇಶನ್ ಮತ್ತು ಹಿಂದೂ ವಿದ್ಯಾದಾಯಿನಿ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಲಾದ “ಬೇಸಿಗೆಗೊಂದು ಚಾಮರ 2025” ಶಿಬಿರದ ಐದನೇ ಆವೃತ್ತಿ ಉದ್ಘಾಟನೆ ನಡೆಯಿತು. ಸರಕಾರಿ ಶಾಲಾ ಮಕ್ಕಳಿಗಾಗಿ ಉಚಿತವಾಗಿ ಆಯೋಜಿಸಲಾದ ಈ ಶಿಬಿರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ.
ಉದ್ಘಾಟನೆಯನ್ನು ಯಶಸ್ ಶೆಟ್ಟಿ ಮತ್ತು ಮಮತಾ ವೈ. ಶೆಟ್ಟಿ ನಡೆಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಿರುತೆರೆ ನಟಿ ಗೌತಮಿ ಜಾಧವ್ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಕನಸುಗಳನ್ನು ಬೆಳೆಸುವ ಪ್ರೇರಣೆಯನ್ನು ನೀಡಿದರು.
ಅತಿಥಿಯಾಗಿ ಹಿಂದೂ ವಿದ್ಯಾದಾಯಿನಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಬಾಲಚಂದ್ರ ಕೆ, ಚಾಮರ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ರಚನಾ, ವಿಶೇಷ ಅತಿಥಿಗಳಾಗಿ ಅಭಿಷೇಕ್ ಜಿ. ಕಾಸರಗೋಡು (ಚಿತ್ರಗ್ರಾಹಕ), ಕೃಷ್ಣಮೂರ್ತಿ ಜಿ. (ನಿವೃತ್ತ ಪ್ರಾಂಶುಪಾಲರು, ಗೋವಿಂದಾಸ್ ಕಾಲೇಜ್), ಮತ್ತು ಪ್ರಸಿದ್ಧ ಕಲಾವಿದ ಕರಣ್ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಚಾರುಷಿ ಮಾಡಿದರು. ಚಾಮರ ಫೌಂಡೇಶನ್‌ನ ಟ್ರಸ್ಟಿ ಮಣಿಷ್ ಕೆ. ಸಲಿಯನ್ ಸ್ವಾಗತಿಸಿದರು . ರತನ್ ಅವರು ಧನ್ಯವಾದ ನೀಡಿದರು.ಶಿಬಿರ ಏಪ್ರಿಲ್ 18,ರವರೆಗೆ ನಡೆಯಲಿದೆ.
