19.1 C
Karnataka
Thursday, December 12, 2024

ಭಟ್ರಕುಮೇರು ಸ್ವಾಮಿ ಕೊರಗ ತನಿಯ ಕ್ಷೇತ್ರ :ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆ ಸಂಪನ್ನ

ಮಂಗಳೂರು : ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ದ್ವಿತೀಯ ವರ್ಷದ ಪ್ರತಿಷ್ಠಾವರ್ಧಂತಿ
ಹಾಗೂ ಕೋಲ ಸೇವೆಯು ಸಾನಿಧ್ಯದ ಯಜಮಾನರು ಹಾಗೂ ದೈವಾರಾಧಕರಾದ ಶ್ರೀ ಭಾಸ್ಕರ ಬಂಗೇರ ಇವರ ನೇತ್ರತ್ವದಲ್ಲಿ ತಾ| 08-12-2024ನೇ ಅದಿತ್ಯವಾರದಂದು
ಬೆಳಿಗ್ಗೆ 10 ಗಂಟೆಗೆ ತಂತ್ರಿಗಳಾದ ಶ್ರೀ ರವಿ ಆನಂದ ಶಾಂತಿ ಆಡುಮರೋಳಿ ಇವರ ಮಾರ್ಗದರ್ಶನದಲ್ಲಿ ಜರುಗಿತು.

ಬೆಳಿಗ್ಗೆ 6ರಿಂದ ಪಂಚಗವ್ಯಶುದ್ಧಿ, ಸ್ವಸ್ತಿಪುಣ್ಯಹ, ಮಹಾಗಣಪತಿ ಹೋಮ ಸಾನಿಧ್ಯಕಲಶ, ಪ್ರಸನ್ನ ಸೇವೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಗಂಧಕಾಡು ಇವರಿಂದ ಭಜನ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 12.30ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.

ಮಧ್ಯಾಹ್ನ 1 ಗಂಟೆಯಿಂದ ಶ್ರೀಮತಿ ವಿಜಯ ಭಾಸ್ಕರ್ ಮತ್ತು ಶ್ರೀ ಗಣೇಶ್ ಮಂಗಳೂರು ಇವರಿಂದ “ಭಕ್ತಿಗಾನ ಸುಧೆ” ಸಂಜೆ 4 ಗಂಟೆಯಿಂದ “ಸ್ಪೂರ್ತಿ ಮಹಿಳಾ ಭಜನಾ ಮಂಡಳಿ” ಪದವಿನಂಗಡಿ ಮತ್ತು ಶ್ರೀ ನಾರಾಯಣಗುರು ಸೇವಾಸಂಘ, ಮೇರಿಹಿಲ್, ಗುರುನಗರ ಇವರಿಂದ ” ಭಜನೆ ಹಾಗೂ ಹರಿನಾಮ ಸಂಕೀರ್ತನೆ ನಡೆಯಿತು. ಸಂಜೆ 7 ಗಂಟೆಗೆ ಅಗೆಲು ಸೇವೆ ನಡೆದು, ಬಳಿಕ ಅನ್ನಸಂತರ್ಪಣೆ ನೆರವೇರಿತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಪ್ರತಿಷ್ಠಾವರ್ಧಂತಿ ಹಾಗೂ ಕೋಲ ಸೇವೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ಕಮಲಾದೇವಿ ಅಸ್ರಣ ಅವರು ಆಶೀರ್ವಚನ ನೀಡಿದರು. ನಿರೂಪಕ ನವನೀತ್ ಶೆಟ್ಟಿ ಕದ್ರಿ, ಉದ್ಯಮಿಗಳಾದ ಲೀಲಾಕ್ಷ ಕರ್ಕೇರಾ, ಎಂ. ಅಶೋಕ್ ಶೇಟ್, ಲಚ್ಚು ಲಾಲ್, ಶ್ರೀ ಕ್ಷೇತ್ರದ ಸೇವಾಕರ್ತರುಗಳಾದ ಪೂಜ್ಯ ಮಾತಶ್ರೀ ವಿಮಲಾ ಹಾಗೂ ವಿಜಯ ಭಾಸ್ಕರ ಬಂಗೇರ ಮುಂತಾದವರು ಪಾಲ್ಗೊಂಡಿದ್ದರು.‌

Bhatrakumeru Swami Koraga Thaniya kshetra 

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles