ಮಂಗಳೂರು: ನವೀಕರಿಸಿದ ಅನ್ವಿತಾ ಫೋಟೋಗ್ರಾಫಿ ಮತ್ತು ಆನ್ಸಿಟಾ ವಿಡಿಯೋಗ್ರಾಫಿ ಸ್ಟುಡಿಯೋ ಹಾಗೂ ಯುನಿವರ್ಸಲ್ ಮೆಲೋಡಿಯಸ್ ಆಡಿಯೋ ವಿಡಿಯೋ ಸ್ಟುಡಿಯೋ, ಸ್ಟ್ಯಾನ್ಲಿ ಬಂಟ್ವಾಳ್ ಮತ್ತು ಲಿಯೋ ರಾಣಿಪುರ ಅವರ ಮಾಲೀಕತ್ವದಲ್ಲಿ ಹಾಗೂ ನಿರ್ವಹಣೆಯಲ್ಲಿ ಬಿಕರ್ನಕಟ್ಟೆ ಜಂಕ್ಷನ್ ನಲ್ಲಿ ಉದ್ಘಾಟನೆಗೊ೦ಡಿದೆ.
ಎನ್.ಆರ್.ಐ. ಉದ್ಯಮಿ ಮೈಕಲ್ ಡಿಸೋಜಾ ಅನ್ವಿತಾ ಫೋಟೋಗ್ರಾಫಿ ಮತ್ತು ಆನ್ಸಿಟಾ ವಿಡಿಯೋಗ್ರಾಫಿ ಸ್ಟುಡಿಯೋವನ್ನು ಉದ್ಘಾಟಿಸಿದರು. ಯುನಿವರ್ಸಲ್ ಮೆಲೋಡಿಯಸ್ ಆಡಿಯೋ ವಿಡಿಯೋ ಸ್ಟುಡಿಯೋವನ್ನುಎನ್.ಆರ್.ಐ. ಉದ್ಯಮಿ ಜೇಮ್ಸ್ ಮೆಂಡೋನ್ಸಾ, ಅವರು ಉದ್ಘಾಟಿಸಿದರು. ರೆ. ಫಾ. ವಾಲ್ಟರ್ ಡಿಸೋಜಾ (ಓಸಿಡಿ) ಅವರು ಆಶೀರ್ವಾದ ಸಮಾರಂಭವನ್ನು ನಡೆಸಿದರು.
ಈ ವೇಳೆ, ಲಿಯೋ ರಾಣಿಪುರ ಅವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಟುವಟಿಕೆಗಳನ್ನು ವಿವರಿಸುವ ಕರಪತ್ರವನ್ನು ಉದ್ಘಾಟಿಸಲಾಯಿತು. ಕರಪತ್ರವನ್ನು ಮಂಗಳೂರು ಡಯೋಸಿಸ್’ನ PRO ಮತ್ತು ಮದರ್ ತೆರೆಸಾ ವಿಚಾರ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಅವರು ಬಿಡುಗಡೆ ಮಾಡಿದರು,
ಸಮಾರಂಭದಲ್ಲಿ ಇನ್ಫೆಂಟ್ ಮೇರಿ ಚರ್ಚ್, ಬಜ್ಜೋಡಿ ಧರ್ಮಗುರುಗಳಾದ ಫಾ. ಡೊಮಿನಿಕ್ ವಾಜ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಸ್ಟಾನಿ ಆಲ್ವಾರೆಸ್, ರಚನಾ ಮಂಗಳೂರು ಅಧ್ಯಕ್ಷ ಜೊನ್ ಮೊಂತೇರೊ, ; ಮಹಾರಾಷ್ಟ್ರ ಕರ್ನಾಟಕ ಕಾರ್ಯನಿರತ ಪ ತ್ರಕತ೯ರ ಸ೦ಘದ ಅಧ್ಯಕ್ಷ ರೊನ್ಸ್ ಬಂಟ್ವಾಳ್, ಸಂದೇಶ ಫೌಂಡೇಶನ್ ನ ಫಾ. ಸುದೀಪ್ ಪಾವ್ಲ್, ಸಿ.ಓ.ಡಿ.ಪಿಯ ಫಾ. ವಿನ್ಸೆಂಟ್ ಡಿಸೋಜಾ, ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ, ಕ್ಯಾಥೋಲಿಕ್ ಸಭಾದ ಅರುಣ್ ಡಿಸೋಜಾ, ನವೀನ್ ಲೋಬೋ, ಕಿಶೋರ್ ಫೆರ್ನಾಂಡಿಸ್, ಎ.ಪಿ. ಮೊಂತೇರೊ, ಫ್ಲಾಯ್ಡ್ ಕಾಸ್ಸಿಯಾ, ಡೋನಾಲ್ಡ್ ಪಿರೇರಾ, ನಾರ್ಬರ್ಟ್, ವಿಲಿಯಂ ರೆಬೆಲ್ಲೋ, ಅಕ್ಷತಾ ಜಯನ್, ಮುಂತಾದ ಗಣ್ಯರು ಭಾಗವಹಿಸಿದ್ದರು. ರೋಷನ್ ಕ್ರಾಸ್ತಾ ಕಾರ್ಯಕ್ರಮವನ್ನು ನಿರ್ವಹಿಸಿದರು., ಸ್ಟ್ಯಾನ್ಲಿ ಬಂಟ್ವಾಳ್ ಮತ್ತು ಲಿಯೋ ರಾಣಿಪುರ ಅವರು ವ೦ದಿಸಿದರು.