ಮ೦ಗಳೂರು: ರಸ್ತೆ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದು ಸಹಸವಾರ ಗಂಭೀರ ಗಾಯಗೊ೦ಡ ಘಟನೆ ಜಪ್ಪಿನಮೊಗೆರು ಬಸ್ ಸ್ಟಾಪ್ ಬಳಿ ಸ೦ಭವಿಸಿದೆ.ಜೆರೊಮ್ ಲೋಬೊ ಗಂಭೀರ ಗಾಯಗೊ೦ಡವರಾಗಿದ್ದು ಸವಾರ ಜೆವೆಲ್ ಸನ್ ಡೆರಿಲ್ ಲೋಬೊ ಅವರಿಗೆ ಎಡಕೈಗೆ ಮೂಳೆ ಮುರಿತದ ಗಾಯವಾಗಿದೆ.
ರಾತ್ರಿಸುಮಾರು 7.40 ಗಂಟೆಗೆ ತೊಕ್ಕೊಟ್ಟು ಕಡೆಯಿಂದ ಪಂಪವೆಲ್ ಕಡೆಗೆ ಹೋಗುತ್ತಿದ್ದಾಗ ಜಪ್ಪಿನಮೊಗೆರು ಬಸ್ ಸ್ಟಾಫ್ ಎದುರಿದ್ದ ಡಿವೈಡರ್ ಗೆ ಬೈಕ್ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
