ಮ೦ಗಳೂರು: ಬಿಜೆಪಿ ದ.ಕ. ಜಿಲ್ಲಾ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಜರಗಿತು.
ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸಿದ ದ.ಕ. ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ದೇಶಕ್ಕೆ ಅನೇಕ ಮಹಾತ್ಮರು ಹಾಗೂ ಹುತಾತ್ಮರ ಬಲಿದಾನಗಳಿಂದ ನಮಗೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಹಾಗಂತ ನಮ್ಮ ದೇಶ 1947 ರಂದು ಪ್ರಾರಂಭ ಆದದ್ದು ಅನ್ನವುದು ಸರಿಯಲ್ಲಾ. ಇದು ಜಗತ್ತಿನ ಅತ್ಯಂತ ಪುರಾತನ ಹಾಗೂ ಭವ್ಯ ಪರಂಪರೆಯನ್ನು ಹೊಂದಿದ ದೇಶ. ಅನೇಕರು ನಮ್ಮ ದೇಶವನ್ನು ವಶಕ್ಕೆ ಪಡೆಯಲು ಪ್ರಯತ್ನಪಟ್ಟರು . ಅದನ್ನು ದಿಟ್ಟವಾಗಿ ಎದುರಿಸಿದರು ಕೊನೆಯಲ್ಲಿ ಬ್ರಿಟೀಷರ ವಿರುದ್ದದ ಸ್ವಾತಂತ್ರ್ಯ ಹೋರಾಟ ಅಧ್ಭುತವಾಗಿತ್ತು. ಇದರಲ್ಲಿ ಅಹಿಂಸಾತ್ಮಕ ಹೋರಾಟದ ಜೊತೆಜೊತೆಗೆ ಸಶಸ್ತ್ರ ಕ್ರಾಂತಿಯು ಬ್ರಿಟಿಷರ ನಿದ್ದಗೆಡಿಸಿತ್ತು. ಇಂತಹ ತ್ಯಾಗ ಬಲಿದಾನದ ಮೂಲಕ ಅಮೂಲ್ಯ ಸ್ವಾತಂತ್ರ್ಯವನ್ನು ಪಡೆದ ನಾವು, ಈ ರಾಷ್ಟ್ರವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯವಲ್ಲಿ ಈ ಕಾಲಘಟ್ಟದಲ್ಲಿ ನಮ್ಮೆಲ್ಲರ ಪಾತ್ರ ಅತ್ಯಂತ ಹಿರಿದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷರಾದ ಸತೀಶ ಕುಂಪಲ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಂಜುಳಾ ರಾವ್ ಹಾಗೂ ಬಿಜೆಪಿಯ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.