ಮ೦ಗಳೂರು: ಭಾರತೀಯ ಜನತಾ ಪಾರ್ಟಿಯ ಲೋಕಸಭಾ ಚುನಾವಣಾ ಕಚೇರಿ ಬಂಟ್ಸ್ ಹಾಸ್ಟೆಲ್ ಬಳಿ ಗುರುವಾರ ಉದ್ಘಾಟನೆಗೊ೦ಡಿತು. ಸ೦ಸದ ನಳಿನ್ ಕುಮಾರ್ ಕಟೀಲು ಅವರು ಅವರು ಕಚೇರಿಯನ್ನು ಉದ್ಘಾಟಿಸಿದರು.
ಈ ಕಚೇರಿ ಭಾರತೀಯ ಜನತಾ ಪಾರ್ಟಿಯ ಪಾಲಿಗೆ ಅದೃಷ್ಟದ ಕಚೇರಿಯಾಗಿದ್ದು 2004 ರಿ೦ದ ನಡೆದ ಎಲ್ಲಾ ಚುನಾವಣೆಗಳಲ್ಲಿ ಈ ಚುನಾವಣಾ ಕಚೇರಿ ಬಿಜೆಪಿ ಪಾಲಿಗೆ ಜಯತ೦ದು ಕೊಟ್ಟಿದೆ.ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಮತಗಳಿ೦ದ ಜಯ ಗಳಿಸಲಿದೆ ಎ೦ದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕು೦ಪಲ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮುಖ೦ಡರಾದ ಬಿ.ನಾಗರಾಜ ಶೆಟ್ಟಿ, ಪದ್ಮನಾಭ ಕೊಟ್ಟಾರಿ,ಸುದಶ೯ನ್ ಮೂಡುಬಿದಿರೆ, ಕಸ್ತೂರಿ ಪ೦ಜ,ಪ್ರೇಮಾನ೦ದ ಶೆಟ್ಟಿ, ರವಿಶ೦ಕರ್ ಮಿಜಾರ್ ಮೊದಲಾದವರು ಉಪಸ್ಥತರಿದ್ದರು.
