ಮಂಗಳೂರು: ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರ ತ್ಯಾಗ, ಪರಿಶ್ರಮದಿಂದ ಪಕ್ಷವು ಇಂದು ದೇಶದಾದ್ಯಂತ ಬಲಿಷ್ಠವಾಗಿ ಬೆಳೆದು ನಿಂತಿದ್ದು ಮಾತ್ರವಲ್ಲದೇ ಜಗತ್ತಿನಲ್ಲಿಯೇ ಅತಿ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ. ಇಂಥಹ ಸಂದರ್ಭದಲ್ಲಿ ಅವರೆಲ್ಲರನ್ನು ಸ್ಮರಿಸುವುದು, ಅವರು ತೋರಿದ ಹಾದಿಯಲ್ಲಿ ಸಾಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಕಾರ್ಯಕರ್ತ ಮಾ.ಚಂದ್ರಹಾಸರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದರು.
ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ಹಿರಿಯ ಕಾರ್ಯಕರ್ತರ ಮನೆಗೆ ಭೇಟಿ ನೀಡಲಾಯಿತು. ಜನಸಂಘದ ಕಾಲದಿಂದಲೂ ಪಕ್ಷದ ಕಾರ್ಯಕರ್ತರಾದ ಮಾ.ಚಂದ್ರಹಾಸ ಅವರು ತುರ್ತು ಪರಿಸ್ಥಿತಿಯ ಕರಾಳ ದಿನಗಳು, 1992ರ ಕರ ಸೇವೆ, ರಾಮ ಮಂದಿರ ನಿರ್ಮಾಣ ಹೋರಾಟ, ಬಿಜೆಪಿಯ ಆರಂಭಿಕ ದಿನಗಳಲ್ಲಿನ ಪಕ್ಷ ಸಂಘಟನೆ, ಸೇರಿದಂತೆ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದರು.
ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲದ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ,ಮ.ನ.ಪಾ ಸದಸ್ಯರಾದ ಪೂರ್ಣಿಮ, ಗಣೇಶ್ ಕುಲಾಲ್, ಲೀಲಾವತಿ, ಜಯಲಕ್ಷ್ಮಿ ಶೆಟ್ಟಿ, ಲೋಕಸಭಾ ಚುನಾವಣೆಯ ಜಿಲ್ಲಾ ಸಂಚಾಲಕ ನಿತಿನ್ ಕುಮಾರ್, ರೂಪಾ.ಡಿ ಬಂಗೇರ, ರಾಜಗೋಪಾಲ್ ರೈ, ರಮೇಶ್ ಹೆಗ್ಡೆ, ಕಿರಣ್ ರೈ, ಅಜಯ್ ಕುಮಾರ್, ಅನಿಲ್ ಹೊಯ್ಗೆ ಬಜಾರ್, ಮೋಹನ್ ಪೂಜಾರಿ, ವಿನೋದ್ ಮೆಂಡನ್, ಲಲ್ಲೇಶ್ , ಸಚಿನ್ ರೈ, ಪೂರ್ಣಿಮಾ ರಾವ್, ನಿಲೇಶ್ ಕಾಮತ್, ಅಶ್ವಿನ್, ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮಾ.ಚಂದ್ರಹಾಸ್ ಕುಟುಂಬಸ್ಥರು ಉಪಸ್ಥಿತರಿದ್ದರು