ಮಂಗಳೂರು : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಬಿಜೆಪಿ ಉತ್ತರ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಚುನಾವಣಾ ಪೂರ್ವಭಾವಿ ಸಭೆಯನ್ನು ಜಿಲ್ಲಾ ಕಾರ್ಯಾಲಯದಲ್ಲಿ ನಡೆಸಲಾಯಿತು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ರವರು, ದೇಶದ ವಿಚಾರದಲ್ಲಿ ಭಾರತೀಯ ಜನತಾ ಪಾರ್ಟಿಯ ಬದ್ಧತೆ ಎಂದಿಗೂ ಅಚಲವಾದದ್ದು. ನಮ್ಮದೇನಿದ್ದರೂ ದೇಶವೇ ಮೊದಲು ಎನ್ನುವ ಸಿದ್ದಾಂತ. ಆ ನಿಟ್ಟಿನಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಯಂತಹ ಹಿರಿಯರ ಆಶಯದಂತೆ ದೇಶವನ್ನು
ಸಮರ್ಥವಾಗಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತವನ್ನು ದೇಶ ಮಾತ್ರವಲ್ಲದೇ ಇಡೀ ಜಗತ್ತು ಗಮನಿಸಿದೆ. ಹಾಗಾಗಿ ಸಹಜವಾಗಿ ದೇಶಾದ್ಯಂತ ಬಿಜೆಪಿ ಪರ ವಾತಾವರಣವಿದ್ದು, ನಮ್ಮ ಕ್ಷೇತ್ರದಲ್ಲಿ ಪಕ್ಷಕ್ಕೆ ಭಾರೀ ಮುನ್ನಡೆ ದೊರಕಿಸಿಕೊಡುವ ಮೂಲಕ ಬ್ರಜೇಶ್ ಚೌಟ ರವರನ್ನು ಗೆಲ್ಲಿಸಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಅದಕ್ಕಾಗಿ ಮುಂದಿನ ಒಂದು ತಿಂಗಳುಗಳ ಕಾಲ ಇನ್ನೂ ಹೆಚ್ಚಿನ ಉತ್ಸಾಹದಿಂದ ಹಗಲಿರುಳು ಕೆಲಸ ಮಾಡೋಣವೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಉಪಾಧ್ಯಕ್ಷರು ಹಾಗೂ ಮಂಡಲದ ಚುನಾವಣಾ ಪ್ರಭಾರಿಗಳಾದ ರಾಕೇಶ್ ರೈ, ಲೋಕಸಭಾ ಚುನಾವಣಾ ಮಂಡಲ ಪ್ರಭಾರಿಗಳಾದ ರವಿಶಂಕರ್ ಮಿಜಾರ್, ಲೋಕಸಭಾ ಚುನಾವಣಾ ಮಂಡಲ ಸಂಚಾಲಕರಾದ ವಿಜಯ್ ಕುಮಾರ್ ಶೆಟ್ಟಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಲಲ್ಲೇಶ್ ಕುಮಾರ್ ಹಾಗೂ ರಮೇಶ್ ಹೆಗ್ಡೆ, ಉತ್ತರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಹುಲ್ ಶೆಟ್ಟಿ ಹಾಗೂ ಕಾರ್ಯದರ್ಶಿಗಳಾದ ಭವಾನಿ ಶಂಕರ್ ಸೇರಿದಂತೆ ಉತ್ತರ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರು
ಉಪಸ್ಥಿತರಿದ್ದರು