ಮಂಗಳೂರು : 2023ರಲ್ಲಿ ಜರಗಿದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅವರ
ಗೆಲುವಿಗಾಗಿ ಹಾಗೂ 2024ನೇ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಾಗ ಬೇಕೆಂದು ಪ್ರಾರ್ಥಿಸಿ ಮಿಲಾಗ್ರಿಸ್ ವಾರ್ಡಿನ ಬಿಜೆಪಿ ಕಾರ್ಯಕರ್ತರು ಸಂಕಲ್ಪ ಮಾಡಿಕೊಂಡಂತೆ ರವಿವಾರ ಬೆಳಿಗ್ಗೆ 5 ಗಂಟೆಗೆ ಮೇಲಿನಮೊಗರು ಬಳಿಯಿಂದ ಹೊರಟು ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ತೆರಳಿ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಉಪಸ್ಥಿತಿಯಲ್ಲಿ ಪೂಜೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಉಪಾಧ್ಯಕ್ಷರಮೇಶ ಹೆಗ್ಡೆ ,ಮಂಡಲ ಕಾರ್ಯಕಾರಿ ಸದಸ್ಯ ಮೋಹನ್ ಪೂಜಾರಿ ಮಂಡಲ ಕಾರ್ಯದರ್ಶಿ ಲಲೇಶ್ ಕುಮಾರ ಬಿಜೆಪಿ ಪ್ರಮುಖರಾದ ನಿಲೇಶ್ ಕಾಮತ್, ಪ್ರಶಾಂತ್ ಮರೋಳಿ, ಮಿಲಾಗ್ರಿಸ್ ವಾರ್ಡ್ ಶಕ್ತಿ ಕೇಂದ್ರ ಪ್ರಮುಖ ಮಂಜುನಾಥ ಅತ್ತಾವರ, ಮಿಲಾಗ್ರಿಸ್ ವಾರ್ಡ್ ಬಿಜೆಪಿ ಪ್ರಮುಖರಾದ ಶಬರೀಶ್ , ಶಿವಪ್ರಸಾದ್ ಕಿಲ್ಲೆ, ಶರತ್ ಕುಮಾರ್ , ಅಶೋಕ್ ಕುಮಾರ್, ನರೇಂದ್ರ ಸುವರ್ಣ , ಗಿರೀಶ್,ಶ್ರೀ ರಾಹುಲ್,ಹಾಗೂ ಸಂಧ್ಯಾ ಮೋಹನ್ , ಶೈಲಾ ಚಂದ್ರಹಾಸ್ , ಸಾಯಿರಾ ವಿಜಯ್, ಭುವನ್ , ಹೃಷಿಕೇಶ್, ಕಾರ್ತಿಕ್, ನಿಖಿಲ್,ಶ್ರೀ ಸೂರಜ್ ಮತ್ತು ಅರ್ಜುನ್ ಉಪಸ್ಥಿತರಿದ್ದರು