ಮ೦ಗಳೂರು: ಲೇಖಕಿ ಡಾ ಅರುಣಾ ನಾಗರಾಜ್ ಅವರ ಅರಿಷಡ್ವೈರಿಗಳ ಗೊಂದಲಾಪುರದಾಚೆ ಎಂಬ ಚಿಂತನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ಮಂಗಳೂರಿನ ದೀಪಾಕಂಫರ್ಟ್ಸ್ ಸಭಾಂಗಣದಲ್ಲಿ ನಡೆಯಿತು
ಕೃತಿ ಬಿಡುಗಡೆ ಮಾಡಿದ ಬೆಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ. ಪ್ರಮಿಳಾ ಮಾಧವ್ ಅವರು ಅರಿಷಡ್ವೈರಿಗಳ ಗೊಂದಲಾಪುರದಾಚೆ ಯಂತಹ ಕೃತಿ ಗಳು ಮತ್ತಷ್ಟು ಬೆಳಕಿಗೆ ಬರಬೇಕು ಅಂತೆಯೇ ಡಾ ಅರುಣಾರವರಂತಹ ಚಿಂತಕಿಯರು ಇನ್ನಷ್ಟು ಬೆಳೆಯಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದರು
ಪಂಚಮಹಾಶಕ್ತಿ ಶ್ರೀ ಗಾಯತ್ರಿ ದೇವಿ ಸಿಧ್ದಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಕೃಷ್ಣ ಶೇಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ದರು.ಎಂ ಆರ್ ಪಿ ಎಲ್ ನ ನಿವೃತ್ತ ಮಹಾಪ್ರಬಂಧಕವೀಣಾ ಟಿ ಶೆಟ್ಟಿ ಕೃತಿ ಯ ಶೀರ್ಷಿಕೆಯೇ ಅದರ ಅಂತರಾಳದ ಮಹತ್ವವನ್ನು ತಿಳಿಸುತ್ತದೆ ಎಂದರು.ಪತ್ರಕರ್ತೆ ಡಾ. ಮಾಲತಿಶೆಟ್ಟಿ ಮಾಣೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಖ್ಯಾತ ವೈದ್ಯೆ ಡಾ .ಪ್ರಿಯಾಂಕಾ ಅರುಣ್ ಶಿರಾಲಿಯವರು ಪ್ರಚಲಿತ ಸಮಾಜಕ್ಕೆ ಇಂತಹ ಕೃತಿಗಳ ಅವಶ್ಯಕತೆ ಯನ್ನು ತಿಳಿಸಿದರು ವಕೀಲರಾದ ಪುಷ್ಪಲತಾ ಯು. ಕೆ. ಅವರು ಡಾ ಅರುಣಾ ನಾಗರಾಜ್ ಅವರ ಬಹುಮುಖ ಪ್ರತಿಭೆಯನ್ನು ಕೊಂಡಾಡಿದರು
ದೈವಜ್ಞ ಸೌರಭ ಮಾಸ ಪತ್ರಿಕೆಯ ಪ್ರಶಾಂತ್ ಶೇಟ್ ಸಮಾಜ ಇಂತಹ ಕೃತಿಗಳನ್ನು ಪ್ರೋತ್ಸಾಹಿಸಬೇಕೆಂದರು ಸಿಎ ಕಿರಣ್ ಶೇಟ್ ಲೇಖಕಿಯಿಂದ ಇಂತಹಾ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಶುಭಕೋರಿದರು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ಯ ನಿವೃತ್ತ ಅಧೀಕ್ಷಕ ನಾಗರಾಜ್ ಶೇಟ್ , ಮಂಜುನಾಥ್ ಶೇಟ್ ಸಹಕರಿಸಿದರು. ಸಿಂಧೂ ಮಂಜುನಾಥ್ ವಂದಿಸಿದರು ಅನಂತರ ಲೇಖಕಿಯ ಮೊಮ್ಮಗ ಜನಿತ್ ಎಂ .ಶೇಟ್ ಅವರ ಐದನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲಾಯಿತು.