ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಆಂತರಿಕ ಗುಣಮಟ್ಟ ಖಾತರಿ ಕೋಶದಿಂದ ಪರಿಸರಸ್ನೇಹಿ ಜೀವನ ಮತ್ತು ಅರೋಗ್ಯಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿಲಾಗಿತ್ತು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಪ್ರಶಾಂತ್ ನಾಯಕ್, ಮಾನವನ
ಆಧುನಿಕ ಜೀವನ ಶೈಲಿ, ನಿರ್ಲಕ್ಷ್ಯತನ ಮತ್ತು ಹವಾಮಾನ ಬದಲಾವಣೆ ಬಗ್ಗೆ ಮಾತನಾಡಿದರು.ಭೂಮಿ ಮೇಲೆ ಕೋಟ್ಯಾಂತರ ಜೀವಿಗಳು ವಾಸವಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಭೂಮಿ ಜೊತೆಗೆ ನಂಟು ಹೊಂದಿರುವ ಜೀವರಾಶಿಗಳ ನಾಶಕ್ಕೆ ಮನುಷ್ಯನೇಕಾರಣವಾಗುತ್ತಿರುವುದು ವಿಷಾದನೀಯ. ಆರೋಗ್ಯಯುತ ಸಮಾಜಕ್ಕಾಗಿ ಪರಿಸರ ಸ್ನೇಹಿ ಜೀವನಶೈಲಿ ಅತ್ಯಗತ್ಯ ಎಂದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಸಿದ್ಧರಾಜು ಎಂ. ಎನ್. ಮತ್ತು ಬಂಟ್ವಾಳದ ವೆಂಕಟರಮಣ ಕಾಲೇಜಿನ ಉಪನ್ಯಾಸಕ ಡಾ. ವಿನಾಯಕ ಬರೆದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮಾಧಾರಿತ ಸಸ್ಯಶಾಸ್ತ್ರ ಮತ್ತು ಪರಿಸರ ಅಧ್ಯಯನಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ವಹಿಸಿದ್ದರು.ಐಕ್ಯೂಎಸಿ ಸಂಯೋಜಕ ಡಾ. ಸಿದ್ಧರಾಜು ಎಂ. ಎನ್. ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು.