22.9 C
Karnataka
Wednesday, January 22, 2025

ಲಂಚ ಪ್ರಕರಣ: ಗಂಗೊಳ್ಳಿ ಗ್ರಾ.ಪಂ.ಪಿ.ಡಿ.ಓ ಹಾಗೂ ದ್ವಿ.ದ.ಸ ಲೋಕಾಯುಕ್ತ ಬಲೆಗೆ

ಮ೦ಗಳೂರು: 9/11 ನ್ನು ನೀಡಲು 27,000 ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಗಂಗೊಳ್ಳಿ ಗ್ರಾಮ ಪಂಚಾಯತ್‌ ಪಿ.ಡಿ.ಓ ಉಮಾಶಂಕರ್ ಹಾಗೂ ದ್ವಿ.ದ.ಸ.ಶೇಖರ್ ಜಿ. ಪೊಲೀಸರ ಬಲೆಗೆ ಬಿದ್ದಿರುತ್ತಾರೆ

ಪಿ.ಡಿ.ಓ

ವ್ಯಕ್ತಿಯೋವ೯ರು ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಜಾಗದ ದಾಖಲೆಗಳೊಂದಿಗೆ 9/11 ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಅಲ್ಲಿನ ಪಿ.ಡಿ.ಓ ಉಮಾಶಂಕರ್ ಮತ್ತು ದ್ವಿ.ದ.ಸ ಶೇಖರ್ ಜಿ. ಅವರನ್ನು ಭೇಟಿ ಮಾಡಿ

ದ್ವಿ.ದ.ಸ

ವಿಚಾರಿಸಿದರು. ಆದರೆ ಅವರು 9/11 ನ್ನು ನೀಡಲು 27,000 ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಆ ವ್ಯಕ್ತಿ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಜ. 22ರ ಬೆಳಿಗ್ಗೆ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಪಿ.ಡಿ.ಓ ಉಮಾಶಂಕರ್ ಮತ್ತು ದ್ವಿ.ದ.ಸ ಶೇಖರ್ ಜಿ. ಲಂಚದ ಹಣವನ್ನು ಸ್ವೀಕರಿಸುವಾಗ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಅವರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಅಧೀಕ್ಷಕ ಎಂ.ಎ ನಟರಾಜ ಅವರ ಮಾರ್ಗದರ್ಶನದಲ್ಲಿ, ಪ್ರಭಾರ ಪೊಲೀಸ್ ಉಪಾಧೀಕ್ಷಕ ಮಂಜುನಾಥ, ಹಾಗೂ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ .ಅಮಾನುಲ್ಲಾ.ಎ, .ಚಂದ್ರಶೇಖ‌ರ್ ಕೆ.ಎನ್ . ಅವರು ಮಂಗಳೂರು ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿರುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles