20.5 C
Karnataka
Friday, November 15, 2024

ಕೆನರಾ ಶಾಲೆ ಆಶ್ರಯದಲ್ಲಿ ಅಷ್ಟಮಿ ಕಾರ್ಯಕ್ರಮ

ಮಂಗಳೂರು: ಕೆನರಾ ನಂದಗೋಕುಲ್ ಕೊಡಿಯಾಲ್ ಬೈಲ್ ಮತ್ತು ಪದವಿಂನಗಡಿ ಶಾಖೆ ಹಾಗೂ ಕೆನರಾ ಇಂಟರ್ನ್ಯಾಷನಲ್ ಶಾಲೆಯ ಆಶ್ರಯದಲ್ಲಿ ಶ್ರೀ ಸುಧೀಂದ್ರ ಸಭಾಂಗಣದಲ್ಲಿ ಅಷ್ಟಮಿ ಉತ್ಸವದ ಶುಭಕಾಮನೆಯೊಂದಿಗೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯು ಭಜನೆಯೊಂದಿಗೆ ಪ್ರಾರಂಭಗೊಂಡು, ಮಕ್ಕಳು ಮುದ್ದು ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಕಣ್ಮನಸಿಗೆ ಹತ್ತಿದ ನೃತ್ಯ ಪ್ರದರ್ಶಿಸಿದರು. ಮಕ್ಕಳಿಂದ ಕೃಷ್ಣನ ಹಾಡುಗಳ ಮೇಲೆ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮವು ಆರತಿ ಮತ್ತು ಪ್ರಸಾದ ವಿತರಣೆಯೊಂದಿಗೆ ಸಾಂಪ್ರದಾಯಿಕವಾಗಿ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆನರಾ ಹೈಸ್ಕೂಲ್ ಸಂಸ್ಥೆ ಅಧ್ಯಕ್ಷ ವಾಸುದೇವ ಕಾಮತ್, ಉಪಾಧ್ಯಕ್ಷ ಸುರೇಶ್ ಕಾಮತ್, ಕೆನರಾ ನಂದಗೋಕುಲ್ ಮತ್ತು ಕೆನರಾ ಇಂಟರ್ನ್ಯಾಷನಲ್ ಶಾಲೆ ಸಂಚಾಲಕರು ನರೇಶ ಶೆಣೈ, ಕೆನರಾ ಹೈಸ್ಕೂಲ್ ಸಂಸ್ಥೆ ಸದಸ್ಯರು ಕುಮಾರಿ ಅಶ್ವಿನಿ, ಪುರುಷೋತ್ತಮ ಶೆಣೈ, ಕೆನರಾ ನಂದಗೋಕುಲ್ ಮತ್ತು ಕೆನರಾ ಇಂಟರ್ನ್ಯಾಷನಲ್ ಶಾಲೆ ನಿರ್ದೇಶಕರಾದ ಅಂಜನಾ ಕಾಮತ, ಕೆನರಾ ಹೈಸ್ಕೂಲ್ ಸಂಸ್ಥೆ ಸಾರ್ವಜನಿಕ ಸಂಪರ್ಕಾಧಿಕಾರಿ ಉಜ್ವಲ ಮಲ್ಲ್ಯ, ಕೆನರಾ ನಂದಗೋಕುಲ್ ಶಾಲೆಯ ಸಂಯೋಜಕಿ ಕುಮಾರಿ ವಂದನಾ, ಪೂರ್ಣಿಮಾ ನಾಯಕ್ ಮತ್ತು ಶಾಲೆಯ ಶಿಕ್ಷಕ ಮತ್ತು ಬೋಧಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles