ಮ೦ಗಳೂರು: ಕೆನರಾ ವಿಕಾಸ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪದವಿ ದಿನವನ್ನು ಮಂಗಳೂರಿನ ಟಿವಿ ರಾಮನ್ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿದ್ದ ಮಣಿಪಾಲದ ಎಚ್.ಪಿ.ಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರಿಪ್ರಸಾದ್ ರೈ ಅವರು ವೃತ್ತಿ ಜೀವನದಲ್ಲಿ ಪರಿಶ್ರಮ ಮತ್ತು ಸಮರ್ಪಣೆಯ ಮಹತ್ವವನ್ನು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷ ಟಿ ಗೋಪಾಲಕೃಷ್ಣ ಶೆಣೈ ಅವರು ವಿದ್ಯಾರ್ಥಿಗಳ ಸಾಧನೆಗಳನ್ನು ಅಭಿನಂದಿಸಿ, ಆತ್ಮವಿಶ್ವಾಸ ಮತ್ತು ಬದ್ಧತೆಯಿಂದ ತಮ್ಮ ಪ್ರಯಾಣವನ್ನು ಮುಂದುವರಿಸಬೇಕು ಎಂದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ನ ಆಡಳಿತ ಮಂಡಳಿಯ ಸದಸ್ಯ ಸಿಎ ಎಂ ವಾಮನ್ ಕಾಮತ್ ಮತ್ತು ಬಸ್ತಿ ಪುರುಷೋತ್ತಮ ಶೆಣೈ ಅವರು ಅನುಭವಗಳನ್ನು ಹಂಚಿಕೊಂಡರು.ಕೆನರಾ ವಿಕಾಸ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲರಾದ ಡಾ.ಎನ್.ನಿತಿನ್ ಚಂದ್ರ ಕಿಣಿ ಸ್ವಾಗತಿಸಿದರು.ಡಾ.ಪ್ರೇಮ್ ರವರು ಧನ್ಯವಾದ ಸಮರ್ಪಿಸಿದರು. ಡಾ. ವೆನೆಸ್ಸಾ ಕಾರ್ಯಕ್ರಮ ನಿರೂಪಿಸಿದರು.