20.5 C
Karnataka
Friday, November 15, 2024

ಬೇಗನೆ ಗುರುತಿಸುವಿಕೆ, ಸೂಕ್ತ ಚಿಕಿತ್ಸೆಯಿಂದ ಕ್ಯಾನ್ಸರ್ ಹಿಮ್ಮೆಟ್ಟಿಸಲು ಸಾಧ್ಯ“:ಡಾ. ಶಾಂತಾರಾಮ್ ಶೆಟ್ಟಿ

ಮಂಗಳೂರು: ತಪಸ್ಯ ಫೌಂಡೇಶನ್, ಎಲ್ ಸಿಐಎಫ್, ಲಯನ್ಸ್ ಇಂಟರ್ ನ್ಯಾಷನಲ್ ಮತ್ತು ಕೆಎಂಸಿ ಆಸ್ಪತ್ರೆ ಸಹಯೋಗದೊಂದಿಗೆ ಬಾಲ್ಯದ ಕ್ಯಾನ್ಸರ್ ಆರೈಕೆ ಕಾರ್ಯಕ್ರಮ “ಶೌರ್ಯ” ಇದರ ಉದ್ಘಾಟನಾ ಸಮಾರಂಭ ಗುರುವಾರ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಜರುಗಿತು.

ದೀಪ ಬೆಳಗಿಸಿದ ನಿಟ್ಟೆ ಯೂನಿವರ್ಸಿಟಿ ಸಹಕುಲಾಧಿಪತಿ ಡಾ. ಶಾಂತಾರಾಮ್ ಶೆಟ್ಟಿ ಅವರು, ” ವೈಜ್ಞಾನಿಕವಾಗಿ ಕ್ಯಾನ್ಸರ್ ರೋಗವನ್ನು ಸರಿಯಾದ ಚಿಕಿತ್ಸೆಯಿಂದಷ್ಟೇ ಹಿಮ್ಮೆಟ್ಟಿಸಬಹುದು ಎನ್ನುವುದು ದೃಢ ಪಟ್ಟಿದೆ. ಸರಿಯಾದ ಚಿಕಿತ್ಸೆ, ಸೂಕ್ತ ಸ್ಥಳ ಮತ್ತು ಆರೈಕೆಯಿಂದ ಕ್ಯಾನ್ಸರ್ ಗುಣಪಡಿಸಲು ಸಾಧ್ಯ“ ಎಂದರು.
”ಕ್ಯಾನ್ಸರ್ ಚಿಕಿತ್ಸೆ ಇಂದು ದುಬಾರಿಯಾಗಿದೆ. ಈ ಕಾರಣಕ್ಕೆ ಬಡ ಅಥವಾ ಮಧ್ಯಮ ಕುಟುಂಬಗಳು ಚಿಕಿತ್ಸೆಯಿಂದ ದೂರ ಉಳಿಯುತ್ತವೆ. ಕ್ಯಾನ್ಸರ್ ಪೀಡಿತ ಮಕ್ಕಳು ಇಂದು ಗುಣಮುಖರಾಗಿ ಜೀವನದಲ್ಲಿ ಸಾಧನೆ ಮಾಡುತ್ತ ನಮ್ಮೆದುರು ಇದ್ದಾರೆ. ನಾವು ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಸಬಿತಾ ಶೆಟ್ಟಿಯವರಿಂದಾಗಿ ನಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದೇವೆ. ಕ್ಯಾನ್ಸರ್ ಅನ್ನುವ ಶಬ್ಧ ಮನೆ ಮಾತ್ರವಲ್ಲದೆ ಇಡೀ ಪರಿಸರದಲ್ಲಿ ನೋವಿನ ವಾತಾವರಣ ಸೃಷ್ಟಿಸುತ್ತೆ. ಕ್ಯಾನ್ಸರ್ ಅನ್ನುವ ಭಯಾನಕ ರೋಗ ಇಂದು ಯಾರನ್ನು ಬೇಕಾದರೂ ಬಾಧಿಸಬಹುದು. ಪ್ರತೀ ಸುರಂಗ ಮಾರ್ಗ ಮುಗಿದ ಬಳಿಕ ಅಲ್ಲೊಂದು ಬೆಳಕು ಕಾಣಿಸುತ್ತದೆ ಅಂತಹ ಕೆಲಸವನ್ನು ತಪಸ್ಯ ಫೌಂಡೇಶನ್ ಮಾಡುತ್ತ ಬಂದಿದೆ“ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
. ತಪಸ್ಯ ಫೌಂಡೇಶನ್ ಸ್ಥಾಪಕರಾದ ಸಬಿತಾ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿ ಸ್ವಾಗತಿಸಿದರು.
ಲಯನ್ ವಸಂತ ಶೆಟ್ಟಿ ಮಾತಾಡಿ, ”ಲಯನ್ಸ್ ಸಂಘಟನೆ ಮತ್ತು ದಾನಿಗಳ ನೆರವಿನಿಂದ 1.60 ಕೋಟಿ ರೂ. ವೆಚ್ಚದಲ್ಲಿ ಮುಡಿಪು ಬಳಿ ಮಕ್ಕಳ ಕ್ಯಾನ್ಸರ್ ಕೇರ್ ಸೆಂಟರ್ ಪ್ರಾರಂಭವಾಗಲಿದೆ. ಅದರ ಸಂಪೂರ್ಣ ಕೆಲಸವನ್ನು ತಪಸ್ಯ ಫೌಂಡೇಶನ್ ಮೂಲಕ ಸಬಿತಾ ಮತ್ತವರ ತಂಡ ಮಾಡುತ್ತಿದೆ. ಅದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದರು.
ಕೆಎಂಸಿ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ತಜ್ಞ ಡಾ.ಹರ್ಷ ಪ್ರಸಾದ್ ಎಲ್. ಮಾತನಾಡಿ, “ಕ್ಯಾನ್ಸರ್ ಚಿಕಿತ್ಸೆ ಪಡೆಯದೇ ಇರಲು ಆರ್ಥಿಕ ಸಂಕಷ್ಟ ಒಂದು ಕಾರಣವಾದರೆ ಕ್ಯಾನ್ಸರ್ ಪೀಡಿತರ ಮನೆ ಮತ್ತು ಸಮಾಜದ ತಿರಸ್ಕಾರ ಕೂಡಾ ಇನ್ನೊಂದು ಕಾರಣ. ಕ್ಯಾನ್ಸರ್ ಲಕ್ಷಣಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ಪಡೆಯುವುದೇ ರೋಗವನ್ನು ಹಿಮ್ಮೆಟ್ಟಿಸಲು ಇರುವ ಸೂಕ್ತ ಮಾರ್ಗವಾಗಿದೆ” ಎಂದರು.
ವೇದಿಕೆಯಲ್ಲಿ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಾಗೀರ್ ಸಿದ್ದಿಕಿ, ತಪಸ್ಯ ಟ್ರಸ್ಟಿ ಲಯನ್ ಮೋಹನ್ ಶೆಟ್ಟಿ, ಲಯನ್ ಅನಿಲ್, ಲಯನ್ ವಿಶ್ವಾಸ್ ರಾವ್, ಲಯನ್ ರಮಾನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles