ಮ೦ಗಳೂರು:ಕಾರು ಡಿಕ್ಕಿಯಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗಾಯಗೊ೦ಡ ಘಟನೆ ಮಂಗಳೂರು ಹೊರವಲಯದ ತೆಂಕ ಎಡಪದವುನಲ್ಲಿ ರವಿವಾರ ನಡೆದಿದೆ.
ಶಾಸಕ ರಾಜೇಶ್ ನಾಯ್ಕ್ ಅವರು ತೆಂಕ ಎಡಪದವು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮಧ್ಯಾಹ್ನ ಸುಮಾರು ೧.೩೦ ರ ವೇಳೆಗೆ ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿದ್ದಾಗ ಮೂಡಬಿದಿರೆ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರೊಂದು ಅವರಿಗೆ ಡಿಕ್ಕಿ ಹೊಡೆದಿದ್ದು ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. , ಕಾರು ಗುದ್ದಿದ ರಭಸಕ್ಕೆ ಶಾಸಕರು ಬಿದ್ದು ಅವರ ಮೊಣಕಾಲಿಗೆ ಗಾಯವಾಗಿದ್ದುಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ .ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು೧೧೨ ಹೊಯ್ಸಳ ನೆರವಿನೊ೦ದಿಗೆ ಗುರುಪುರ ಜ೦ಕ್ಷನ್ ನಲ್ಲಿ ಹಿಡಿದು ಬಜ್ಪೆ ಪೋಲೀಸ್ ಠಾಣೆಗೆ ತರಲಾಗಿದ್ದು ಕಾರು ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊ೦ಡು ವಿಚಾರಣೆ ನಡೆಸಲಾಗುತ್ತಿದೆ.