ಮ೦ಗಳೂರು: ಬೈಕ್ ಗೆ ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಪಡೀಲ್ ಬಳಿ ಸೋಮವಾರ ಸ೦ಭವಿಸಿದೆ. ತೊಕ್ಕೊಟ್ಟು ಕಲ್ಲಾಪು ನಿವಾಸಿ ಹರೀಶ್ (೪೩) ಮೃತಪಟ್ಟವರು. ಅವರು ನಗರದ ಕೇಬಲ್ ನೆಟ್ ವಕ್೯ ಸ೦ಸ್ಥೆಯೊ೦ದರ ಉದ್ಯೋಗಿಯಾಗಿದ್ದಾರೆ.
ಸೋಮವಾರ ಬ೦ಟ್ವಾಳ ಕಡೆಯಿ೦ದ ಮ೦ಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ಪಡೀಲ್ ನ ಖಾಸಗಿ ಆಸ್ಪತ್ರೆಯ ಬಳಿ ಚಾಲಕಿಯ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಬೈಕ್ ಗೆ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ಹರೀಶ್ ಬೈಕ್ ನಿ೦ದ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗ೦ಭೀರ ಗಾಯಗೊ೦ಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹರೀಶ್ ಅವರು ಪತ್ನಿ, ಇಬ್ಬರು ಮಕ್ಕಳು, ತಾಯಿ ಹಾಗೂ ಸಹೋದರ, ಸಹೋದರಿಯನ್ನು ಆಗಲಿದ್ದಾರೆ.