23.4 C
Karnataka
Wednesday, November 20, 2024

ಜೂನ್ 29: ಸಿ.ಎಸ್.ಕೆ. ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ 30 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

ಮ೦ಗಳೂರು: ಕ್ಯಾಥೋಲಿಕ್ ಎಸೋಸಿಯೇಶನ್ ಆಫ್ ಸೌತ್ ಕೆನರಾ (ಸಿ.ಎಸ್.ಕೆ) ಹಾಗೂ ಸಿ.ಎಸ್.ಕೆ ಸೆಂಟನರಿ ಟ್ರಸ್ಟ್ ಜಂಟಿಯಾಗಿ ನಡೆಸುವ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, 30 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ವಿದ್ಯಾಥಿ೯ವೇತನ ವಿತರಿಸಲಾಗುವುದು. ಈ ವಿದ್ಯಾರ್ಥಿವೇತನವನ್ನು ಯಾವುದೇ ಧರ್ಮ, ಭಾಷೆ, ಅಂಕ ಪರಿಗಣಿಸದೆ ಅಜಿ೯ದಾರರ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ, ಮಂಜೂರು ಮಾಡಲಾಗುತ್ತದೆ.

ಕಾರ್ಯಕ್ರಮವು ಮಂಗಳೂರು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಸೆಂಟಿನರಿ ಆಡಿಟೋರಿಯಂನಲ್ಲಿ ಜೂನ್ 29ರಂದು
ನಡೆಯಲಿದೆ. ಸಿ.ಎಸ್.ಕೆಯ ಪೋಷಕರು – ಮಂಗಳೂರು ಧರ್ಮಾಧ್ಯಕ್ಷರಾದ ಅತೀ ವಂ| ಡಾ| ಪೀಟರ್ ಪೌಲ್ ಸಲ್ಡಾನ್ಹ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅನಿವಾಸಿ ಕೊಡುಗೈ ದಾನಿ ಮೈಕಲ್ ಡಿಸೋಜಾ ಅವರು ಮುಖ್ಯ ಅತಿಥಿಯಾಗಿರುತ್ತಾರೆ. ವಿದ್ಯಾರ್ಥಿವೇತನ ಪುರಸ್ಕೃತರು, ಅವರ ಪೋಷಕರು, ದಾನಿಗಳು ಮತ್ತು ಸಿ.ಎಸ್.ಕೆ./ಸಿ.ಎಸ್.ಕೆ. ಟ್ರಸ್ಟ್’ನ ಪೋಷಕರು ಭಾಗವಹಿಸಲಿದ್ದಾರೆ.
ಕ್ಯಾಥೋಲಿಕ್ ಎಸೋಸಿಯೇಶನ್ ಆಫ್ ಸೌತ್ ಕೆನರಾ ಸಂಘಟನೆಯು 1914ರ ಜುಲೈನಲ್ಲಿ ಸ್ಥಾಪನೆಯಾಗಿದ್ದು ಈ ವರ್ಷ 110 ವರ್ಷಗಳ ಸಮುದಾಯ ಸೇವೆಯನ್ನು ಪೂರ್ಣಗೊಳಿಸುತ್ತಿದೆ. ಸಿ.ಎಸ್.ಕೆ ಸಮಾಜದಲ್ಲಿಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ತಲುಪುವ ಹಾಗೂ ಮಂಗಳೂರಿನ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಮೂಲಕ ತನ್ನ ಕಾರ್ಯವನ್ನು ನಿರ್ವಹಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles