29.5 C
Karnataka
Thursday, May 22, 2025
Home ಕಲೆ-ಸಂಸ್ಕ್ರತಿ

ಕಲೆ-ಸಂಸ್ಕ್ರತಿ

ಪಟ್ಲ ಫೌಂಡೇಶನ್ ಟ್ರಸ್ಟ್ ದಶಮ ಸಂಭ್ರಮ : 10 ಕೋಟಿ ದೇಣಿಗೆ ಸಂಗ್ರಹದ ಗುರಿ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ದಶಮ ಸಂಭ್ರಮದ ಹಿನ್ನಲೆಯಲ್ಲಿ ಈ ಬಾರಿ ದಾನಿಗಳಿಂದ, ಕಲಾ ಪೋಷಕರಿಂದ ಕನಿಷ್ಠ 10 ಕೋಟಿ ದೇಣಿಗೆಯನ್ನು ಸಂಗ್ರಹಿಸಿಡಲು ತೀರ್ಮಾನಿಸಿದೆ. ಬಳಿಕ ಇದೇ ಹಣದಿಂದ ಕಲಾವಿದರಿಗೆ ನೆರವು ನೀಡಲಾಗುವುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.ಜೂನ್ 1 ರಂದು ಅಡ್ಯಾರ್...

“ಗಂಟ್ ಕಲ್ವೆರ್” ತುಳು ಚಿತ್ರ ಮೇ 23 ರಂದು ರಾಜ್ಯಾದ್ಯಾಂತ ಬಿಡುಗಡೆ

ಮಂಗಳೂರು: ಬಹು ನಿರೀಕ್ಷೆಯ "ಗಂಟ್ ಕಲ್ವೆರ್" ತುಳು ಚಿತ್ರ ಮೇ 23 ರಂದು ರಾಜ್ಯಾದ್ಯಾಂತ ಬಿಡುಗಡೆ‌ ಆಗಲಿದೆ. ಚಿತ್ರ ಈಗಾಗಲೇ ಸೆನ್ಸಾರ್ ಆಗಿದೆ ಎಂದು ಸಿನಿಮಾದ ನಿರ್ದೇಶಕ ಸುಧಾಕರ ಬನ್ನಂಜೆ ‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ತುಳು ನಾಟಕ ಧಾರಾವಾಹಿ ಸಿನಿಮಾಗಳಲ್ಲಿ ತುಳುನಾಡಿನ ಕೀರ್ತಿಯನ್ನು ಎತ್ತಿಹಿಡಿದ ಸುಧಾಕರ್ ಬನ್ನಂಜೆಯವರು ಕತೆ ಚಿತ್ರಕತೆ ಸಂಭಾಷಣೆ ಹಾಡು ಬರೆದು ನಿರ್ದೇಶನ...

ಬೆಳ್ಳಿತೆರೆಯಲ್ಲಿ ಯಕ್ಷಗಾನ ‘ವೀರಚಂದ್ರಹಾಸ’ ಚಿತ್ರದ ಮೂಲಕ ಹೊಸ ಪ್ರಯೋಗ: ರವಿ ಬಸ್ರೂರು

ಮಂಗಳೂರು: ಪ್ರಪಂಚದ ಚಿತ್ರರಂಗದ ಇತಿಹಾಸದಲ್ಲಿ ಪ್ರಥಮ ಬಾರಿ, ಕರಾವಳಿ ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನವನ್ನು 'ವೀರ ಚಂದ್ರಹಾಸ' ಚಿತ್ರದ ಮೂಲಕ ಬೆಳ್ಳಿಪರದೆಗೆ ತರಲಾಗಿದೆ. ಏ.18ರಂದು ಇದನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಕರವಾಳಿಯಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಕಡೆಗಳಲ್ಲೂ ಹಂತಹಂತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಖ್ಯಾತ ಸಂಗೀತ,...

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ : ಹವ್ಯಾಸಿ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶ್ ಟ್ರಸ್ಟ್ ನ ಹವ್ಯಾಸಿ ಘಟಕದ ಸಭೆ ಬಲ್ಲಾಲ್ ಬಾಗ್‌ನಲ್ಲಿರುವ ಪತ್ತುಮುಡಿ ಸೌಧದಲ್ಲಿ ನಡೆಯಿತು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹವ್ಯಾಸಿ ಘಟಕದ ನೂತನ ಪದಾಧಿಕಾರಿಗಳ ನೇಮಕ ನಡೆಯಿತು.ಗೌರವಾಧ್ಯಕ್ಷರಾಗಿ ಮಧುಕರ ಭಾಗವತ ಕುಳಾಯಿ, ಅಧ್ಯಕ್ಷರಾಗಿ ರಾಜಾರಾಮ ಹೊಳ್ಳ ಕೈರಂಗಳ, ಉಪಾಧ್ಯಕ್ಷರಾಗಿ...

ಮಹಿಳಾ ಪ್ರಧಾನ “ಮೀರಾ” ತುಳು ಸಿನಿಮಾ ಬಿಡುಗಡೆ

ಮಂಗಳೂರು: ಅಸ್ತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಲಂಚು ಲಾಲ್ ಕೆ.ಎಸ್. ನಿರ್ಮಿಸಿರುವ, ಅಶ್ವಥ್ ನಿರ್ದೇಶನದ 'ಮೀರಾ' ತುಳು ಚಲನಚಿತ್ರ ಮಂಗಳೂರಿನ ಭಾರತ್ ಮಾಲ್ ನ‌ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು.ಮಾಜಿ ಮೇಯರ್ ಮನೋಜ್ ಕುಮಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಬಿಡುಗಡೆ ಗೊಳಿಸಿದರು. ತುಳುವಿನಲ್ಲಿ ಬಿಡುಗಡೆ ಗೊಂಡಿರುವ ಮೀರಾ ಸಿನಿಮಾದಲ್ಲಿ ನಮ್ಮ ಮನೆಯ ಸುತ್ತಮುತ್ತಲಿನ...

ಯಕ್ಷಧ್ರುವ ಪಟ್ಲ ಫೌಂಡೇಶನ್ “ದಶಮ ಸಂಭ್ರಮ” ಆಮಂತ್ರಣ ಪತ್ರ ಬಿಡುಗಡೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ದಶಮ ಸಂಭ್ರಮದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ನಗರದ ಪುರಭವನದಲ್ಲಿ ಜರುಗಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಅವರು ಮಾತನಾಡಿ , “ನಾನು ಯಕ್ಷಧ್ರುವ ಪಟ್ಲ ಫೌಂಡೇಶನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮತ್ತಿತರ...

ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವ

ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಸುರತ್ಕಲ್ ಘಟಕದ ಪಂಚಮ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಸಂಜೆ ಬಂಟರ ಭವನ ವಠಾರದಲ್ಲಿ ಜರುಗಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅವರು,ಮಾತನಾಡಿ “ಪಟ್ಲ ಫೌಂಡೇಶನ್ ಸುರತ್ಕಲ್ ಘಟಕ ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತ ಬಂದಿದೆ....

“ವೈಲ್ಡ್ ಟೈಗರ್ ಸಫಾರಿ“ ಸಿನಿಮಾಕ್ಕೆ ಮುಹೂರ್ತ

ಮಂಗಳೂರು: ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಲಿರುವ ”ವೈಲ್ಡ್ ಟೈಗರ್ ಸಫಾರಿ“ ಸಿನಿಮಾದ ಮುಹೂರ್ತ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಕದ್ರಿ ದೇವಸ್ಥಾನದಲ್ಲಿ ಜರುಗಿತು.ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಚಿತ್ರದ ನಿರ್ದೇಶಕ ಚಂದ್ರಮೌಳಿ ಅವರು, ”ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಕಥಾಹಂದರವನ್ನು ಈ ಸಿನಿಮಾ ಹೊಂದಿದ್ದು ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು ನಡೆದಿದೆ. ಮಂಗಳೂರು ಮೂಲದ ಕಥೆಯಲ್ಲಿ...

ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ “ಆರಾಟ” ಸಿನಿಮಾ ಪ್ರದರ್ಶನಕ್ಕೆ ಆಯ್ಕೆ

ಮಂಗಳೂರು: ಪಿಎನ್ಆರ್ ಪ್ರೊಡಕ್ಷನ್ ನ ತಿಂಬರ ರಾಘವೇಂದ್ರ ಹೊಳ್ಳ ನಿರ್ಮಾಣದ ಪುಷ್ಪರಾಜ್ ರೈ ಮಲಾರಬೀಡು ನಿರ್ದೇಶನದ "ಆರಾಟ" ಕನ್ನಡ ಚಲನಚಿತ್ರವು ಮಾರ್ಚ್ 1 ರಿಂದ 8 ರ ತನಕ ನಡೆಯುವ ಹದಿನಾರನೇ ಬೆಂಗಳೂರು ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ ಕನ್ನಡ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುತ್ತದೆ. ಆರಾಟ ಚಿತ್ರವು ಕಳೆದ ಜೂನ್ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ...

ಶಿವಾಜಿ: ಶಿವದೂತೆ ಗುಳಿಗನ ಬಳಿಕ ಮತ್ತೊಂದು ಅದ್ದೂರಿ ಚಾರಿತ್ರಿಕ ನಾಟಕ

ಮ೦ಗಳೂರು: ತುಳು ರಂಗಭೂಮಿಯಲ್ಲೇ ಹೊಸ ದಾಖಲೆ ಬರೆದಿರುವ ಶಿವದೂತೆ ಗುಳಿಗೆ'ಯ ರೂವಾರಿ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌ ಅವರು ಈಗ ಮತ್ತೊಂದು ಹೊಸ ಚಾರಿತ್ರಿಕ ನಾಟಕವನ್ನು ಪ್ರೇಕ್ಷಕರ ಮುಂದಿಡಲು ಮುಂದಾಗಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿರುವ ಈ ನಾಟಕವೇಶಿವಾಜಿ'.ಈ ನಾಟಕವು ಮಾ. 6ರಂದು ಕಟೀಲಿನಲ್ಲಿ ಮೊದಲ ಪ್ರದರ್ಶನ ಕಾಣಲಿದ್ದು, ಮಾರ್ಚ್‌ 13ರಂದು ಮಂಗಳೂರಿನ ಪುರಭವನದಲ್ಲಿ ಪ್ರದರ್ಶನ ನಡೆಯಲಿದೆ....