26 C
Karnataka
Monday, May 4, 2026

ಸುದ್ದಿ

ಜಾತಿ – ಆದಾಯ ಪ್ರಮಾಣ ಪತ್ರ : ಸಹಾಯವಾಣಿ ಸಂಪರ್ಕಿಸಿರಿ

0
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಕಾಲದಲ್ಲಿ ಅರ್ಜಿ ಸಲ್ಲಿಸಲು / ಪಡೆಯಲು ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದಾಗಿ ಅಡಚಣೆ ಉಂಟಾದಲ್ಲಿ ಜಿಲ್ಲಾಧಿಕಾರಿಯವರ ಕಛೇರಿ ಹಾಗೂ ತಹಶೀಲ್ದಾರರ ಕಛೇರಿಯ ಸಹಾಯವಾಣಿಯನ್ನು ಸಂರ್ಪಕಿಸಬಹುದು.ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ ಸಂಖ್ಯೆ – 2220584, ದೂ.ಸಂ-0824 2220590,...

ಅಡ್ಯಾರ್ ಬ್ರಹ್ಮಕಲಶೋತ್ಸವ : ಧಾರ್ಮಿಕ ವಿಧಿ ಚಪ್ಪರ ಮುಹೂರ್ತ

0
ಮಂಗಳೂರು: ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಅಡ್ಯಾರ್ ಇಲ್ಲಿನಗ್ರಾಮಾಧಿಪತಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಾಚ್೯ 1 ರಿಂದ 9 ರ ತನಕ ನಡೆಯಲಿರುವ ಪುನ:ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಪ್ರಥಮ ಧಾರ್ಮಿಕ ವಿಧಿ ಚಪ್ಪರ ಮುಹೂರ್ತ ಕ್ಷೇತ್ರದ ತಂತ್ರಿವರೇಣ್ಯರಾದ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ನೆರವೇರಿತು. ಕ್ಷೇತ್ರದ ಆಡಳಿತ ಸಮಿತಿ, ಪುನಃ ನಿರ್ಮಾಣ ಸಮಿತಿ ಮತ್ತು...

ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ “ಆರಾಟ” ಸಿನಿಮಾ ಪ್ರದರ್ಶನಕ್ಕೆ ಆಯ್ಕೆ

0
ಮಂಗಳೂರು: ಪಿಎನ್ಆರ್ ಪ್ರೊಡಕ್ಷನ್ ನ ತಿಂಬರ ರಾಘವೇಂದ್ರ ಹೊಳ್ಳ ನಿರ್ಮಾಣದ ಪುಷ್ಪರಾಜ್ ರೈ ಮಲಾರಬೀಡು ನಿರ್ದೇಶನದ "ಆರಾಟ" ಕನ್ನಡ ಚಲನಚಿತ್ರವು ಮಾರ್ಚ್ 1 ರಿಂದ 8 ರ ತನಕ ನಡೆಯುವ ಹದಿನಾರನೇ ಬೆಂಗಳೂರು ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ ಗೆ ಕನ್ನಡ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿರುತ್ತದೆ. ಆರಾಟ ಚಿತ್ರವು ಕಳೆದ ಜೂನ್ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ...

ಫೆ.18ರಂದು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಪದಗ್ರಹಣ

0
ಮಂಗಳೂರು: ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಘಟಕದ ಪದಗ್ರಹಣ ಕಾರ್ಯಕ್ರಮ ಹಾಗೂ ಸಂವಿಧಾನ ಜಾಗೃತಿ ಸಮಾವೇಶ ಫೆ.18ರಂದು ನಗರದ ಊರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಮುಳೂರು ತಿಳಿಸಿದ್ದಾರೆ. ಗುರುವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಮಧ್ಯಾಹ್ನ...

ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ

0
ಬೆಂಗಳೂರು:ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ)...

ಶಿಷ್ಟಾಚಾರ ಉಲ್ಲಂಘನೆ: ಕ್ರಮಕ್ಕೆ ಉಸ್ತುವಾರಿ ಸಚಿವರ ಸೂಚನೆ

0
ಮಂಗಳೂರು: ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಸಹಭಾಗಿತ್ವದಲ್ಲಿ ಸುಮಾರು 7.85 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಮಂಗಳಾದೇವಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ...

ಶಿವಾಜಿ: ಶಿವದೂತೆ ಗುಳಿಗನ ಬಳಿಕ ಮತ್ತೊಂದು ಅದ್ದೂರಿ ಚಾರಿತ್ರಿಕ ನಾಟಕ

0
ಮ೦ಗಳೂರು: ತುಳು ರಂಗಭೂಮಿಯಲ್ಲೇ ಹೊಸ ದಾಖಲೆ ಬರೆದಿರುವ ಶಿವದೂತೆ ಗುಳಿಗೆ'ಯ ರೂವಾರಿ ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌ ಅವರು ಈಗ ಮತ್ತೊಂದು ಹೊಸ ಚಾರಿತ್ರಿಕ ನಾಟಕವನ್ನು ಪ್ರೇಕ್ಷಕರ ಮುಂದಿಡಲು ಮುಂದಾಗಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿರುವ ಈ ನಾಟಕವೇಶಿವಾಜಿ'.ಈ ನಾಟಕವು ಮಾ. 6ರಂದು ಕಟೀಲಿನಲ್ಲಿ ಮೊದಲ ಪ್ರದರ್ಶನ ಕಾಣಲಿದ್ದು, ಮಾರ್ಚ್‌ 13ರಂದು ಮಂಗಳೂರಿನ ಪುರಭವನದಲ್ಲಿ ಪ್ರದರ್ಶನ ನಡೆಯಲಿದೆ....

ಶರವು ಶ್ರೀ ಮಹಾಗಣಪತಿ ದೇವಸ್ಥಾನ: ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದ ಹೊರಕಾಣಿಕೆ ಸಂಗ್ರಹಣಾ ಕಚೇರಿ ಉದ್ಘಾಟನೆ

0
ಮಂಗಳೂರು : ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಹೊರೆಕಾಣಿಕೆ ಸಂಗ್ರಹಣಾ ಕಚೇರಿಯ ಉದ್ಘಾಟನೆ ನೆರವೇರಿತು. ಶರವು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿಗಳು ಉದ್ಘಾಟನೆ ನೆರವೇರಿಸಿ, ದೇವತಾ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ ಮಾರಿಯಮ್ಮನ ಕೃಪೆಗೆ ಪಾತ್ರರಾಗೋಣ. ಯಾವುದೇ ಕಾರ್ಯ ಆರಂಭ ಮಾಡುವಾಗ ಗಣಪತಿಯ ಸ್ಮರಣೆ ಅಗತ್ಯ....

ಫೆಬ್ರವರಿ 17 ರಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ‌

0
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಫೆಬ್ರವರಿ 17 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ.ಫೆಬ್ರವರಿ 17 ರಂದು ಬೆಳಿಗ್ಗೆ 7:10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ಆಗಮನ. 8 ಗಂಟೆಗೆ ಸಕ್ರ್ಯೂಟ್ ಹೌಸ್ ಆಗಮನ. 10:30 ಗಂಟೆಗೆ ನಗರದ ಯೆಯ್ಯಾಡಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ...

ಫೆ.16 : ಪಿಲಾರ್ ನಲ್ಲಿ ತುಳು ಪರ್ಬ : ಜಾನಪದ ಸಿರಿ ಪರಿಚಯ, ಗ್ರಾಮೀಣ ಆಟಕೂಟ

0
ಮಂಗಳೂರು, : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಉಳ್ಳಾಲ ತಾಲೂಕಿನ ಪಿಲಾರ್ ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಪಿಲಾರ್ ನ ಪಂಜಂದಾಯ ಸೇವಾ ಸನ್ನಿಧಿಯ ಮೈದಾನದಲ್ಲಿ ಫೆ.16 ರಂದು ಬೆಳಿಗ್ಗೆ 'ತುಳು ಪರ್ಬ' ಆಯೋಜಿಸಲಾಗಿದೆ.ಪಿಲಾರ್ ಯುವಕ ಮಂಡಲದ ಸ್ವರ್ಣ ಮಹೋತ್ಸವದ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮವನ್ನು ಭಾನುವಾರ ಬೆಳಿಗ್ಗೆ 9.00 ಗಂಟೆಗೆ ನಿವೃತ್ತ...