32.8 C
Karnataka
Monday, May 4, 2026

ಸುದ್ದಿ

ಜ.19ರಂದು ಮಂಗಳೂರಿನಲ್ಲಿ “ವಿಶಿಷ್ಟರಿಗಾಗಿ ವಿಶಿಷ್ಟ ಮೇಳ”

0
ಮಂಗಳೂರು: ಸೇವಾ ಭಾರತಿ(ರಿ) ಮಂಗಳೂರು ಕಳೆದ 33 ವರ್ಷಗಳಿಂದ ದಿವ್ಯಾಂಗರ ಜೀವನ ಸ್ತರ ಸುಧಾರಿಸಲು ಶ್ರಮಿಸುತ್ತಿದೆ. ತನ್ನ ಅಂಗಸಂಸ್ಥೆಗಳ ಮೂಲಕ ಅವರಿಗೆ ಅವಶ್ಯವಿರುವ ಶಿಕ್ಷಣ, ತರಬೇತಿ, ಚಿಕಿತ್ಸೆ ಇತ್ಯಾದಿ ಈ ಪೈಕಿ 1998ರಲ್ಲಿ ಸೌಕರ್ಯಗಳನ್ನು ಒದಗಿಸಿಕೊಟ್ಟು ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಆರಂಭವಾದ “ಆಶಾಜ್ಯೋತಿ"ಯೂ ಒಂದು. ಆಶಾಜ್ಯೋತಿಯು ದಿವ್ಯಾಂಗರು ಮತ್ತು ಅವರ ಹೆತ್ತವರ ಒಂದು...

ಜ.17ರಂದು “ಕಣ್ಣಾಮುಚ್ಚೆ ಕಾಡೇ ಗೂಡೇ“ ಸಿನಿಮಾ ತೆರೆಗೆ

0
ಮಂಗಳೂರು: ಡಾರ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ತಯಾರಾಗಿರುವ “ಕಣ್ಣಾಮುಚ್ಚೆ ಕಾಡೇ ಗೂಡೇ“ ಸಿನಿಮಾ ಜನವರಿ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ವೀರೇಶ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.”ಸಿನಿಮಾದಲ್ಲಿ ಸಸ್ಪೆನ್ಸ್ ಕಥಾ ಹಂದರದ ಜೊತೆಗೆ ತಾಯಿಯ ಸೆಂಟಿಮೆಂಟ್ ಇದೆ. ನವಿರಾದ ಪ್ರೇಮಕತೆ, ಸುಂದರವಾದ ತಾಣಗಳಲ್ಲಿ ಸಿನಿಮಾ ಚಿತ್ರೀಕರಣಗೊಂಡಿದೆ. ಸಿನಿಮಾ ಕನ್ನಡಿಗರಿಗೆ ಖಂಡಿತ ಇಷ್ಟವಾಗುತ್ತದೆ. ನಾನು ಸಿನಿಮಾದಲ್ಲಿ...

ರಾಷ್ಟ್ರೀಯ ಯುವ ದಿನಾಚರಣೆ

0
ಮಂಗಳೂರು : ಮಾನವೀಯ ಸೇವೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಯುವ ಜನತೆ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸ್ವಾಮಿ ವಿವೇಕಾನಂದರ ಸಂದೇಶ ಸ್ಪೂರ್ತಿಯಾಗಿದೆ ಎಂದು ಶಾಸಕ ಡಿ,.ವೇದವ್ಯಾಸ ಕಾಮತ್ ಹೇಳಿದರು.ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕ, ಯೂತ್ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಮತ್ತು ಯೇನೆಪೊಯ ಪರಿಗಣಿತ ವಿ.ವಿ. ವತಿಯಿಂದ ನಗರದ ವಿ.ವಿ. ಕಾಲೇಜಿನ ರವೀಂದ್ರ...

“ವೀರಕೇಸರಿ ಟ್ರೊಫಿ-2025” ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ

0
ಮ೦ಗಳೂರು: ವೀರಕೇಸರಿ (ರಿ) ತಡಂಬೈಲ್ ಸುರತ್ಕಲ್ ಇದರ ಆಶ್ರಯದಲ್ಲಿ ಡಾ|ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ ಮೇಯರ್ ರಜನಿ ದುಗ್ಗಣ್ಣ ಇವರ ಸ್ಮರಣಾರ್ಥ ಪುರುಷರ ಮುಕ್ತ ರಾಷ್ಟ್ರೀಯ ಮಟ್ಟದ ಆಹ್ವಾನಿತ ಆರು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ವೀರಕೇಸರಿ ಟ್ರೋಫಿ-2025 ಇದರ ಉದ್ಘಾಟನಾ ಸಮಾರಂಭ ಶನಿವಾರ ಸಂಜೆ ಸುರತ್ಕಲ್ ಬಂಟರ ಭವನದ ಬಳಿ...

ಮಂಗಳೂರಿನಲ್ಲಿ ಇಂಧನ ಭದ್ರತಾ ಶೃಂಗಸಭೆ ಆಯೋಜನೆಗೆ ಬೆ೦ಬಲ: ಸಚಿವಹರ್ದೀಪ್ ಸಿಂಗ್ ಪುರಿ

0
ಮಂಗಳೂರು: ದಕ್ಷಿಣ ಕನ್ನಡ ಪ್ರವಾಸದಲ್ಲಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವಹರ್ದೀಪ್ ಸಿಂಗ್ ಪುರಿ ಅವರು ಮಂಗಳೂರಿನಲ್ಲಿ ಇಂಧನ ಭದ್ರತಾ ಸಮ್ಮಿಟ್ ಆಯೋಜಿಸುವಂತೆ ದಕ್ಷಿಣ ಕನ್ನಡ ಸಂಸದಕ್ಯಾ. ಬ್ರಿಜೇಶ್ ಚೌಟ ಅವರಿಗೆ ಸಲಹೆ ನೀಡಿದ್ದು, ಇದಕ್ಕೆ ತಮ್ಮ ಕಡೆಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿಹೇಳಿದ್ದಾರೆ. ಮಂಗಳೂರಿನಲ್ಲಿ ನಡೆಯುತ್ತಿರುವ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿದ್ದ...

ಕಂಬಳ ಕ್ರೀಡೆ ಸರ್ವರ ಸಂಭ್ರಮ: ಸಿ.ಎಂ.ಸಿದ್ದರಾಮಯ್ಯ

0
ಮಂಗಳೂರು: ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮ, ಭಾಷೆಯ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ಸಂಸ್ಕೃತಿಯ ಒಂದು ಭಾಗ...

ಮಹಾನಗರಪಾಲಿಕೆ: ಜ.15ರಿಂದ ಉದ್ದಿಮೆದಾರರ ಲೈಸನ್ಸ್ ನವೀಕರಣ

0
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ 60 ವಾರ್ಡ್‍ಗಳ ಉದ್ದಿಮೆದಾರರ ಪರವಾನಿಗೆ ನವೀಕರಣ ಪ್ರಕ್ರಿಯೆಯು ಜನವರಿ 15 ರಿಂದ ಆರಂಭಗೊಳ್ಳಲಿದ್ದು ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು. ಆನ್‍ಲೈನ್ ತಂತ್ರಾಂಶದ ಮೂಲಕ ಹೊಸ /ನವೀಕರಣ ಉದ್ದಿಮೆ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಬಹುದು. ಪ್ರಸಕ್ತ (2025-26)ನೇ ಸಾಲಿನ ಆರ್ಥಿಕ ತೆರಿಗೆ ಪಾವತಿ ಆದ ತರುವಾಯ ಆರೋಗ್ಯ ನಿರೀಕ್ಷಕರು ಸ್ಥಳ ತನಿಖೆ ನಡೆಸಿದ...

“ಕೋಸ್ಟಲ್ ಬಿಗ್ ಭಾಷ್ ಲೀಗ್” ಕ್ರಿಕೆಟ್ ಪಂದ್ಯಾಟ, ಹರಾಜು ಮೂಲಕ ಆಟಗಾರರ ಆಯ್ಕೆ!

0
ಮಂಗಳೂರು: ಮಂಗಳೂರಿನಲ್ಲಿ ಜ. 25ರಿಂದ ಫೆ.1ರವರೆಗೆ ನಡೆಯಲಿರುವ ಕೋಸ್ಟಲ್ ಬಿಗ್ ಭಾಷ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ನಗರದ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಜರುಗಿತು.ಕುಳಾಯಿ ರೆಡ್ ಹಾಕ್ಸ್ ತಂಡಕ್ಕೆ ಕೆಸಿ ಕರಿಯಪ್ಪ, ನವೀನ್ ಎಂಜಿ, ಕಾರ್ತಿಕ್ ಎಸ್ ಯು, ಜಹಾನ್ ಪಿಸಿ, ಕೆಎಸ್ ದೇವಯ್ಯ, ನಿಖಿಲ್ ಐತಾಳ್, ನಿಶ್ಚಿತ್ ಎನ್...

ಜ.14: ಸ್ವರ ಸಂಕ್ರಾಂತಿ ಉತ್ಸವ-2025, ‘ಸ್ವರ ಸಾಧನಾ’ ಪ್ರಶಸ್ತಿ ಪ್ರದಾನ

0
ಮಂಗಳೂರು: ಸ್ವರಾಲಯ ಸಾಧನಾ ಫೌಂಡೇಶನ್‌ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸ್ವರ ಸಂಕ್ರಾಂತಿ ಉತ್ಸವ-2025 ಅನ್ನು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಜ.14ರಂದು ಜರುಗಲಿದೆ ಎಂದು ವಯಲನಿಸ್ಟ್ ವಿಶ್ವಾಸ್ ಕೃಷ್ಣ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಮಧ್ಯಾಹ್ನ 2 ಗಂಟೆಯಿಂದ ಕಲಾ ಶಾಲೆ ವಿದ್ಯಾರ್ಥಿಗಳಿಂದ ವಯಲಿನ್ ಪ್ರಸ್ತುತಿ ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ ಸಭಾಕಾರ್ಯಕ್ರಮ ಹಾಗೂ ಮೂವರು ಹಿರಿಯ...

ಮಂಗಳೂರು ತಾಲೂಕು ಲಸಿಕಾ ಕಾರ್ಯಪಡೆ ಸಭೆ

0
ಮಂಗಳೂರು : ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ಜನವರಿ 10 ರಂದು ಸಹಾಯಕ ಆಯುಕ್ತರ ಕಚೇರಿ ಸಭಾಂಗಣ ಮಂಗಳೂರು ಮಿನಿ ವಿಧಾನಸೌಧದಲ್ಲಿ ನಡೆಯಿತು.ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್ ಕುಮಾರ್ ಮಾತನಾಡಿ ದಡಾರ ರುಬೆಲ್ಲಾ ನಿರ್ಮೂಲನೆ ಮಾಡಲು ಎಮ್.ಆರ್ ಪ್ರಕರಣಗಳು ಶೂನ್ಯ ವಾಗಬೇಕು . ರುಬೆಲ್ಲಾ ವೈರಸ್‍ನಿಂದ ಉಂಟಾಗುವ ಸಾಂಕ್ರಾಮಿಕ ಸೋಂಕು. ಇದರಿಂದ...