ಜ.23 ರಂದು ಉಸ್ತುವಾರಿ ಸಚಿವರಿಂದ ಸುಳ್ಯದಲ್ಲಿ ಬೃಹತ್ ಜನತಾದರ್ಶನ
ಮಂಗಳೂರು: ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜ. 23 ರಂದು ಸುಳ್ಯದಲ್ಲಿ ಬೃಹತ್ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಿದ್ದಾರೆ.ಸುಳ್ಯ ಕೆವಿಜಿ ಪುರಭವನದಲ್ಲಿ ನಡೆಯುವ ಈ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾರ್ವಜನಿಕರ ಕುಂದುಕೊರತೆ, ಅಹವಾಲುಗಳನ್ನು ಉಸ್ತುವಾರಿ ಸಚಿವರು ಸ್ವೀಕರಿಸಿ, ಪರಿಹಾರ ಒದಗಿಸಲು ವ್ಯವಸ್ಥೆ ಮಾಡಲಾಗಿದೆ.ಜಿಲ್ಲಾ ಉಸ್ತುವಾರಿ...
ಅಕ್ವೇರಿಯಂ ಜೋಡಣೆ ಮತ್ತು ನಿರ್ವಹಣೆ ತರಬೇತಿ
ಮಂಗಳೂರು: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಹ್ಯೊಗೆಬಜಾರ್ ಆವರಣದಲ್ಲಿರುವ ಮಂಗಳೂರು ಸ್ಮಾರ್ಟ್ ಸಿಟಿ ಪ್ರಾಯೋಜಿತ ಯೋಜನೆಯಾದ ‘ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃಧ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರ’ ದಲ್ಲಿ ಫೆಬ್ರವರಿ 1 ರಿಂದ 30 ದಿನಗಳವರೆಗೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿರುತ್ತದೆ.ಈ ಮೊದಲನೇ ತರಬೇತಿಯಲ್ಲಿ ಅಕ್ವೇರಿಯಂ ಜೋಡಣೆ,...
ಅಗ್ನಿವೀರ್ ವಾಯುಪಡೆ ಪ್ರವೇಶ ಪರೀಕ್ಷೆ: ಅರ್ಜಿ ಆಹ್ವಾನ
ಮಂಗಳೂರು: ಭಾರತೀಯ ವಾಯುಪಡೆಯಿಂದ ಅಗ್ನಿಪಥ್ ಯೋಜನೆ ಅಡಿಯಲ್ಲಿ ಅಗ್ನಿವೀರ್ ವಾಯು ಪ್ರವೇಶ ಆಯ್ಕೆ ಪರೀಕ್ಷೆಗೆ ಆನ್‍ಲೈನ್ ಮೂಲಕ ಫೆಬ್ರವರಿ 6 ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.ಅಭ್ಯರ್ಥಿಗಳು ಪಿಯುಸಿ ವಿಜ್ಞಾನ ವಾಣಿಜ್ಯ, ಕಲಾವಿಭಾಗದಲ್ಲಿ ಅಥವಾ ಡಿಪ್ಲೋಮಾ ಕೋರ್ಸ್‍ಗಳಲ್ಲಿ ಶೇಕಡ 50ರಷ್ಟು ಅಂಕಗಳೊಂದಿಗೆ ಮತ್ತು ಇಂಗ್ಲಿಷ್ ವಿಷಯದಲ್ಲಿ ಶೇಕಡ 50ರಷ್ಟು ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು. 2004ರ ಜನವರಿ 2ರಿಂದ...
ಪರಿಸರಕ್ಕಾಗಿ ನಾವು: ದ. ಕ. , ಉಡುಪಿ ಜಿಲ್ಲಾ ಘಟಕದ ಮೊದಲ ಸಭೆ
ಕಿನ್ನಿಗೋಳಿ: ಅತಿಯಾದ ಕೈಗಾರಿಕೀಕರಣ,ನಗರೀಕರಣ ಮತ್ತು ಬದಲಾದ ಜೀವನ ಶೈಲಿಯ ಪರಿಣಾಮ ಹವಾಗುಣ ವೈಪರೀತ್ಯದ ತುರ್ತು ಸಮಸ್ಯೆ ಎದುರಾಗಿದೆ . ಈಗ ನಾವು ಎಚ್ಚೆತ್ತುಕೊಂಡು ಪರಿಸರದ ಸಮಸ್ಯೆಗಳಿಗೆಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ಜೀವ ಸಂಕುಲದ ಅಳಿವು ಇನ್ನು ಕೆಲವು ದಶಕಗಳಲ್ಲಿ ನಿಶ್ಚಿತ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ. ಈ ದಿಸೆಯಲ್ಲಿ ಪರಿಸರ ಪರ ಕೆಲಸ ಮಾಡಲು ರಾಜ್ಯಾದ್ಯಂತ ವಿವಿಧ...
ಅತ್ಯುತ್ತಮ ಯುವ ಸಮುದಾಯ ರೂಪಿಸಲು ಶಿಕ್ಷಕರಿಂದ ಮಾತ್ರ ಸಾಧ್ಯ: ಗೋವಿಂದನ್
ಮಂಗಳೂರು: ಯುವಜನತೆಯಲ್ಲಿ ಸೃಜನಾತ್ಮಕತೆಯನ್ನು ಬೆಳೆಸಿದಾಗ ಮಾತ್ರ ರಾಷ್ಟ್ರವನ್ನು ಪರಮ ವೈಭವದಲ್ಲಿ ಕಾಣುವುದಕ್ಕೆ ಸಾಧ್ಯ. ಈ ಕೆಲಸವನ್ನು ಶಿಕ್ಷಕರು ಮಾಡಬೇಕಾಗಿದೆ. ಆಗ ಮಾತ್ರ ರಾಷ್ಟ್ರದಲ್ಲಿ ವಿಶೇಷ ವ್ಯಕ್ತಿಗಳನ್ನು ರೂಪಿಸಲು ಸಾಧ್ಯ, ಎಂದು ತೆಲಂಗಾಣ ಭಾಗ್ಯನಗರದ ಸಾಮಾಜಿಕ ಕಾರ್ಯಕರ್ತ, ಇಂಜಿನಿಯರಿಂಗ್ ಕಾಲೇಜು ಮಾಜಿ ಪ್ರಾಧ್ಯಾಪಕ ಗೋವಿಂದನ್ ತಿಳಿಸಿದರು.ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಹಾವಿದ್ಯಾಲಯ...
ಜ.28 :ವಿಶ್ವಕರ್ಮ ಯಜ್ಞ-ಯುವ ಸಮಾವೇಶ
ಮ೦ಗಳೂರು: ವಿಶ್ವಕರ್ಮ ಯುವ ಮಿಲನ್(ರಿ.)ಕರ್ನಾಟಕ ರಾಜ್ಯ ಆಶ್ರಯದಲ್ಲಿ ವಿಶ್ವಕರ್ಮ ಯಜ್ಞ-ಯುವ ಸಮಾವೇಶ ಜ.28 ರಂದು ಬಂಗ್ರಕೂಳೂರಿನಲ್ಲಿ ಗೊಲ್ಡ್ ಫಿ೦ಚ್ ಸಿಟಿ ಮೈದಾನದಲ್ಲಿ ನಡೆಯಲಿದ್ದು ಸಮಾವೇಶದ ಚಪ್ಪರ ಮುಹೂರ್ತ ಕಾರ್ಯಕ್ರಮ ಗುರುವಾರ ನಡೆಯಿತು. ವಿಶ್ವಕರ್ಮ ಯುವ ಮಿಲನ್'ನ ರಾಜ್ಯಾಧ್ಯಕ್ಷ ವಿಕ್ರಮ್ .ಐ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಸಂದೀಪ್, ಕೋಶಾಧಿಕಾರಿ ಶ್ರವಣ್ ಹರೀಶ್, ವಿಶ್ವಕರ್ಮ ಯಜ್ಞ -...
ಕೃತಕ ಕಚ್ಚಾ ಮಣ್ಣಿನ ತೊಟ್ಟಿಗೆ ಬಿದ್ದು ಮಹಿಳೆ ಸಾವು
ಪುತ್ತೂರು : ತೋಟಕ್ಕೆ ನೀರು ಹಾಯಿಸಲು ನಿರ್ಮಿಸಿದ್ದ ಕೃತಕ ಕಚ್ಚಾ ಮಣ್ಣಿನ ತೊಟ್ಟಿಗೆ ಬಿದ್ದು ಪುತ್ತೂರು ಒಳಮೊಗ್ರು ಗ್ರಾಮ ಕೈಕಾರದ ಶುಭಲಕ್ಷ್ಮೀ (49) ಎ೦ಬವರು ಮೃತಪಟ್ಟ ಘಟನೆ ವರದಿಯಾಗಿದೆ. ಪತ್ನಿ ಶುಭಲಕ್ಷ್ಮೀ ಜ. 17ರಂದು ಬೆಳಿಗ್ಗೆ ಮನೆಯಲ್ಲಿದ್ದವರು ಕ೦ಡು ಬರಲಿಲ್ಲ. ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ ನಂತರ ತೋಟಕ್ಕೆ ನೀರು ಹಾಯಿಸಲು ನಿರ್ಮಿಸಿದ್ದ ಕೃತಕ...
ಪಚ್ಚನಾಡಿಗೆ ಸ್ವಚ್ಚ ಭಾರತ್ ಮಿಷನ್ ಅಭಿಯಾನ ನಿರ್ದೇಶಕರು ಭೇಟಿ
ಮ೦ಗಳೂರು: ಪಚ್ಚನಾಡಿ ಪ್ರದೇಶದಲ್ಲಿರುವ ಘನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ನಗರಾಭಿವೃದ್ದಿ ಇಲಾಖೆ ಬೆಂಗಳೂರು ಇದರ ಸ್ವಚ್ಚ ಭಾರತ್ ಮಿಷನ್ (ನಗರ) ರಾಜ್ಯ ಅಭಿಯಾನ ನಿರ್ದೇಶಕ ಲಕ್ಷ್ಮೀಕಾಂತ್ ರೆಡ್ಡಿ ಅವರುಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹಸಿ ತ್ಯಾಜ್ಯವನ್ನು Black Soldier Fly ಮೂಲಕ ಸಂಸ್ಕರಣೆ ಮಾಡುವ ಪ್ರಕ್ರಿಯೆಯನ್ನು, ಎಳನೀರು ತ್ಯಾಜ್ಯ ಮತ್ತು ಒಣ...
ಟಿಕೆಟ್ ರಹಿತ ಪ್ರಯಾಣ: ನೈರುತ್ಯ ರೈಲ್ವೆಯಿ೦ದ 46.31 ಕೋ. ರೂ.ದಂಡ ಸಂಗ್ರಹ
ಬೆ೦ಗಳೂರು: ನೈರುತ್ಯ ರೈಲ್ವೆಯು ಟಿಕೆಟ್ ರಹಿತ ಪ್ರಯಾಣದ 627014 ಪ್ರಕರಣಗಳನ್ನು ದಾಖಲಿಸಿದ್ದು ಈ ಹಣಕಾಸು ವರ್ಷದ 2023 ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗೆ 46.31 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ.ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು 368205 ಪ್ರಕರಣಗಳನ್ನು ದಾಖಲಿಸಿ, 28.26 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ.ನೈರುತ್ಯ ರೈಲ್ವೆಯ ಟಿಕೆಟ್ ತಪಾಸಣಾ...
ಅನಧಿಕೃತ ಬ್ಯಾನರ್, ಕಟೌಟ್- ಕ್ರಿಮಿನಲ್ ಕೇಸ್: ಮಹಾನಗರಪಾಲಿಕೆ ಎಚ್ಚರಿಕೆ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ವಿವಿಧ ಪ್ರದೇಶದ ರಸ್ತೆ ಬದಿಗಳಲ್ಲಿ ಕೆಲವೊಂದು ಜಾಹೀರಾತು ಸಂಸ್ಥೆಯವರು ಹಾಗೂ ಖಾಸÀಗಿ ವ್ಯಕ್ತಿಗಳು ವಾಣಿಜ್ಯ ಉದ್ದೇಶಗಳಿಗಾಗಿ ಹಾಗೂ ಹಾಗೂ ರಾಜಕೀಯ ಮತ್ತು ಧಾರ್ಮಿಕ ಮತ್ತು ಕೆಲವೊಂದು ಖಾಸಗಿ ಸಮಾರಂಭಗಳ ನಿಮಿತ್ತ ಆನಧಿಕೃತ ಬ್ಯಾನರ್‍ಗಳು, ಕಟೌಟ್, ಬಂಟಿಂಗ್ಸ್, ಮತ್ತು ಪ್ಲೆಕ್ಸ್ ಇತ್ಯಾದಿಗಳನ್ನು ವ್ಯಾಪಕವಾಗಿ ಅಳವಡಿಸುತ್ತಿರುವುದು ಕಂಡುಬಂದಿದೆ.ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಇದರಿಂದ...