ಪದವಿಪೂರ್ವ ಶಿಕ್ಷಣ ನಿರ್ದೇಶಕರಿಂದ ವಿವಿಧ ಕಾಲೇಜುಗಳಿಗೆ ಭೇಟಿ
ಮಂಗಳೂರು:ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ನಿರ್ದೇಶಕರಾದ ಸಿಂಧು. ಬಿ.ರೂಪೇಶ್ ಅವರು ಶನಿವಾರ ಮಂಗಳೂರು ನಗರದ ವಿವಿಧ ಪದವಿಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಮೊದಲು ಬಲ್ಮಠ ಮಹಿಳಾ ಪದವಿಪೂರ್ವ ಕಾಲೇಜಿಗೆ ಆಗಮಿಸಿದ ಅವರು, ಕಾಲೇಜಿನ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಕಾಲೇಜಿನ ಶೈಕ್ಷಣಿಕ ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ ನಗರದ ಬಿ.ಎಡ್....
ಮಹಾನಗರಪಾಲಿಕೆ: ಮಧ್ಯವರ್ತಿಗಳಿಲ್ಲದೇ ಖಾತಾ ನೋಂದಣಿ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಆಸ್ತಿಗಳ ಖಾತೆಗಳನ್ನು ಇ-ಆಸ್ತಿ ಆನ್‍ಲೈನ್ ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಪ್ರಸ್ತುತ ಆನ್‍ಲೈನ್ ವ್ಯವಸ್ಥೆಯಡಿ ಖಾತಾ ನೋಂದಣಿ, ವರ್ಗಾವಣೆ ಕೋರಿ ಅರ್ಜಿ ಸಲ್ಲಿಸುವಿಕೆ ಅತ್ಯಂತ ಸರಳ ರೀತಿಯಲ್ಲಿ ನಾಗರಿಕರೇ ಸಲ್ಲಿಸಬಹುದಾಗಿದ್ದು ಮಧ್ಯವರ್ತಿಗಳ ಸಹಾಯ ಪಡೆಯುವ ಅವಶ್ಯಕತೆ ಇರುವುದಿಲ್ಲ.ಇ-ಆಸ್ತಿ ತಂತ್ರಾಂಶದ ಮೂಲಕ ನಾಗರೀಕರು ಆಸ್ತಿಗಳ ಖಾತೆ ನೊಂದಾವಣೆ, ವರ್ಗಾವಣೆ ಅರ್ಜಿ...
ಡಿ.18ರಂದು ಶಾಸಕ ರಾಜೇಶ್ ನಾಯ್ಕ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಡಿ.18ರಂದು ಬೆಳಗ್ಗೆ 11.30 ಕ್ಕೆ ನಗರದ ಪತ್ರಿಕಾ ಭವನದಲ್ಲಿ ನಡೆಯುವ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ, ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ ಭಾಗವಹಿಸಿ ಗೌರವ ಸ್ವೀಕರಿಸಲಿದ್ದಾರೆ. ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ...
ಮಾತೃ ಭಾಷೆಯ ಜತೆಗೆ ಇತರ ಭಾಷೆಯನ್ನೂ ಕಲಿಯುವುದು ಉತ್ತಮ : ಕುಲದೀಪ್ ಸಿಂಗ್
ಮಂಗಳೂರು,:ಹಿಂದಿ ಭಾಷೆ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ವಿಶ್ವ ಮಾನ್ಯಭಾಷೆಯಾಗಿದೆ. ಯಾವುದೇ ಭಾಷೆ ಕಲಿಯುತ್ತಿದ್ದೇವೆ ಎಂದಾದರೆ ಅದರ ಸಂಸ್ಕೃತಿಯನ್ನೂ ಕೂಡ ಕಲಿತಂತೆ ಆಗುತ್ತದೆ. ಆದರೆ ಮಾತೃಭಾಷೆಗೆ ಮೊದಲ ಆದ್ಯತೆ ಇರಲಿ. ಅದರ ಜೊತೆಗೆ ಹಿಂದಿ ಭಾಷೆಯನ್ನೂ ಕಲಿಯುವಲ್ಲಿ ಒಲವು ತೋರಿಸಿದರೆ ಉತ್ತಮ ಎಂದು ಎನ್. ಎಂ. ಪಿ. ಟಿ.ಯ ಹಿಂದಿ ಅಧಿಕಾರಿ ಕುಲದೀಪ್ ಸಿಂಗ್ ಹೇಳಿದರು.ನಗರದ...
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಜಿಲ್ಲಾ ಬಿಜೆಪಿ ವತಿಯಿ೦ದ ಸ್ವಾಗತ
ಮ೦ಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಕಾಯ೯ಕ್ರಮದ ನಿಮಿತ್ತ ಡಿ.15ರ೦ದು ಆಗಮಿಸಿದ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಜಿಲ್ಲಾ ಬಿಜೆಪಿ ವತಿಯಿ೦ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸುದರ್ಶನ್ ಎಂ., ಉಪ ಮೇಯರ್ ಸುನಿತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ರಾಮದಾಸ್ ಬಂಟ್ವಾಳ, ಬ್ಯಾಂಕ್ ಆಫ್...
ಪಿಂಚಣಿ ಯೋಜನೆ: ದ.ಕ. ಜಿಲ್ಲೆಯಲ್ಲಿ 1.77 ಲಕ್ಷ ಫಲಾನುಭವಿಗಳು
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳ ಮೂಲಕ ಪ್ರತಿ ತಿಂಗಳು 177026 ಫಲಾನುಭವಿಗಳು ಹಣಕಾಸು ನೆರವು ಪಡೆದು ಆರ್ಥಿಕ ಭದ್ರತೆ ಹೊಂದಿರುತ್ತಾರೆ. ದುರ್ಬಲರಿಗೆ ಆಶಾಕಿರಣವಾಗಿರುವ ವಿವಿಧ ಪಿಂಚಣಿ ಯೋಜನೆಗಳಿಂದ ಬಹಳಷ್ಟು ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ವಿಕಲಚೇತನರಿಗೆ ಸೇರಿದಂತೆ ಸಮಾಜದ ವಿವಿಧ ದುರ್ಬಲರಿಗೆ...
ಮಂಗಳೂರಿನ ಸಹ್ಯಾದ್ರಿ ಕಾಲೇಜ್ ನಲ್ಲಿ ಕೇಂದ್ರೀಕೃತ ವಾಕ್-ಇನ್-ಇಂಟರ್ವ್ಯೂ
ಮಂಗಳೂರು: ಬೆಂಗಳೂರಿನ ತಾಂತ್ರಿಕ ಶಿಕ್ಷಣ, ಕರ್ನಾಟಕ ಸರ್ಕಾರ ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರುಜಂಟಿಯಾಗಿ ಮಂಗಳೂರಿನ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಡಿಸೆಂಬರ್ 21 ಗುರುವಾರದ೦ದು ಪದವೀಧರರು, ಎಂಜಿನಿಯರುಗಳು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಕೇಂದ್ರೀಕೃತ ವಾಕ್-ಇನ್ ಸಂದರ್ಶನವನ್ನು ಆಯೋಜಿಸಿರುತ್ತಾರೆ.ಬೋರ್ಡ್ ಆಫ್ ಅಪ್ರೆಂಟಿಸ್‌ಶಿಪ್ ತರಬೇತಿ, ಸೌತ್ ರೀಜನ (SR) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ...
ಮಂಗಳೂರು: ಅಂತರಾಜ್ಯ ದಂತ ವೈದ್ಯಕೀಯ ಮಹಾ ಸಮ್ಮೇಳನ
ಮಂಗಳೂರು: ದ.ಕ ಜಿಲ್ಲಾ ಇಂಡಿಯನ್ ಡೆಂಟಲ್ ಎಸೋಸಿಯೇಷನ್ ಅತಿಥೇಯದಲ್ಲಿ 49ನೇ ರಾಜ್ಯ, 8ನೇ ಅಂತರಾಜ್ಯ ದಂತ ವೈದ್ಯಕೀಯ ಮಹಾ ಸಮ್ಮೇಳನವು ಅತ್ತಾವರ ಕಾಪ್ರಿಗುಡ್ಡದಲ್ಲಿರುವ ಮರೆನ ಗ್ರೀನ್ಸ್‌ನಲ್ಲಿ ಡಿ.15 ಮತ್ತು 16 ಮತ್ತು 17 ರಂದು ಜರುಗಲಿದೆ.
ಡಿ.15ರಂದು ಬೆಳಗ್ಗೆ 10 ಗಂಟೆಗೆ ಮಾಹೆಯ ವೈಸ್ ಚಾನ್ಸಲರ್ ಲೆ.ಜ. ಡಾ. ವೆಂಕಟೇಶ್ ಉದ್ಘಾಟಿಸುವರು. ಮಾಹೆಯ ಪ್ರೊ.ಚಾನ್ಸಲರ್ ಡಾ.ಶರತ್...
ಆಳ್ವಾಸ್ ವಿರಾಸತ್ : ಮಾಧ್ಯಮ ಕೇ೦ದ್ರ ಉದ್ಘಾಟನೆ
ಮೂಡುಬಿದಿರೆ: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೀಗ 29 ನೇ ವರ್ಷದ ಸಡಗರಕ್ಕೆ ಸಜ್ಜಾಗಿದೆ. ಡಿ.೧೪ರಿ೦ದ ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಲಾಸಕ್ತರಿಗೆ ರಸದೌತಣ ನೀಡಲಿದ್ದು ಆಳ್ವಾಸ್ ವಿರಾಸತ್ ನ ಮಾಧ್ಯಮ ಕೇ೦ದ್ರ ಬುಧವಾರ ಉದ್ಘಾಟನೆಗೊ೦ಡಿತು.ದೀಪ ಬೆಳಗಿಸಿದ ಆಳ್ವಾಸ್ ವಿರಾಸತ್ ರೂವಾರಿ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ...
ಮತದಾರರ ದಿನಾಚರಣೆ: ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು
ಮಂಗಳೂರು: ಚುನಾವಣಾ ಆಯೋಗ, ಕಾಲೇಜು ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಭಿತ್ತಿ ಚಿತ್ರ ರಚನಾ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯನ್ನು ಕಾರ್‍ಸ್ಟ್ರೀಟ್ ಸರ್ಕಾರಿ...