ಲೋಕಸಭಾ ಚುನಾವಣಾ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು: ಏ. 26ರಂದು 17 - ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಚುನಾವಣಾ ಮತದಾನಕ್ಕೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ತಿಳಿಸಿದರು.
ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಏ. 23ರ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜಿಲ್ಲೆಯಾದ್ಯಂತ...
ತಾಪಮಾನ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳು
ಮಂಗಳೂರು:ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳ ಕೆಲವು ಭಾಗಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿಗಳಷ್ಟು ಅಧಿಕ ತಾಪಮಾನ ದಾಖಲಾಗುತ್ತಿದ್ದು, ಇದು ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ.ಭಾರತೀಯ ಹವಾಮಾನ ಇಲಾಖೆಯು 2024ರ ಏಪ್ರಿಲ್ 1 ರಂದು ಬಿಡುಗಡೆ ಮಾಡಿದ ಹವಾಮಾನ ಮಾಹೆಯಿಂದ ಮೇ 2024ರ ಅವಧಿಯಲ್ಲಿ ಮುಂಬರುವ ಬಿಸಿ ವಾತಾವರಣವು...
ಗುಡುಗು – ಸಿಡಿಲು : ಸಲಹೆ/ಸೂಚನೆಗಳು
ಮಂಗಳೂರು:ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು - ಸಿಡಿಲು ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. 'ಗುಡುಗು ಸಿಡಿಲಿನಿಂದಾಗುವ ಅಪಾಯಗಳನ್ನು ತಗ್ಗಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ:
ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಸಾರ್ವಜನಿಕರು ಪಾಲಿಸಬೇಕಾದ ಸಲಹೆ...
ಏಪ್ರಿಲ್ 24ರಿ೦ದ ಮದ್ಯ ನಿಷೇಧ
ಮಂಗಳೂರು:ಲೋಕಸಭಾ ಸಾರ್ವತ್ರಿಕ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಚುನಾವಣಾ ಮತದಾನ ಹಾಗೂ ಮತ ಎಣಿಕಾ ಕಾರ್ಯ ನಡೆಯುವ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏಪ್ರಿಲ್ 24ರ ಸಂಜೆ 6 ಗಂಟೆಯಿಂದ ಏಪ್ರಿಲ್ 26ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತ ಎಣಿಕೆಯ ದಿನ ಜೂನ್ 3ರಂದು ಮಧ್ಯರಾತ್ರಿ 12...
ಹಸಿ ಕಸದಿಂದ ಗೊಬ್ಬರ ತಯಾರಿ, ಬಯೋ ಎಂಜೈಮ್ ಬಗ್ಗೆ ಪ್ರಾತ್ಯಕ್ಷಿಕೆ
ಮ೦ಗಳೂರು: ಏಪ್ರಿಲ್ 22 ರ ವಿಶ್ವ ಭೂದಿನದ ಪ್ರಯುಕ್ತ 'ಪರಿಸರಕ್ಕಾಗಿ ನಾವು' ಗುಂಪಿನ ದಕ್ಷಿಣ ಕನ್ನಡ ಉಡುಪಿ ಘಟಕದವರಾದ ಸರೋಜಾ ಪ್ರಕಾಶ್- ಪ್ರಕಾಶ್ ದಂಪತಿಯವರು, ಅಶ್ವಿನಿ ಕೆ ಭಟ್ ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಭಾನುವಾರ ಸಂಜೆ ಎರಡು ತಾಸು ಸಾರ್ವಜನಿಕರಿಗೆ ಪ್ಲಾಸ್ಟಿಕ್ ಮಿತ ಬಳಕೆ, ಹಸಿ ಕಸದಿಂದ ಗೊಬ್ಬರ ತಯಾರಿ, ಬಯೋ ಎಂಜೈಮ್...
ಮತದಾನದ ಮಹತ್ವವನ್ನು ಯುವಜನತೆ ಅರಿಯಬೇಕು: ಪಿ.ಎಸ್ ವಸ್ತ್ರದ್
ಮಂಗಳೂರು, : ಯುವ ಮತದಾರರು ಮತದಾನದ ಮಹತ್ವವನ್ನು ಅರಿತುಕೊಂಡು ತಮ್ಮ ಮತವನ್ನು ಚಲಾಯಿಸಬೇಕು ಹಾಗೂ ಸಮಾಜದ ಇತರ ಜನರೂ ಮತದಾನದಲ್ಲಿ ಭಾಗವಹಿಸುವಂತೆ ಪ್ರೇರೇಪಣೆ ಮಾಡಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಹಾಗೂ ನಿವೃತ್ತ ಐ.ಎ.ಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ್ ಹಾಗೂ...
ಕೇರಳದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ: ಅಂಚೆ ಮತಪತ್ರದ ಮೂಲಕ ಮತದಾನಕ್ಕೆ ಎ.24ರವರೆಗೆಅನುಮತಿ
ಮಂಗಳೂರು:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುವ ಏಪ್ರಿಲ್ 26ರಂದೇ ಕೇರಳ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಲೋಕಸಭೆಗೆ ಚುನಾವಣಾ ಮತದಾನ ನಡೆಯಲಿದೆ.ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅರ್ಹ ಮತದಾರರಾಗಿರುವ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೇರಳ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದಲ್ಲಿ ಅವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು ವಿ...
1.42 ಲಕ್ಷ ಲೀಟರ್ ಮದ್ಯ ವಶ
ಮಂಗಳೂರು:ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಏ.20ರವರೆಗೆ ಜಿಲ್ಲೆಯಲ್ಲಿ 5,66,33,513 ರೂಪಾಯಿ ಮೌಲ್ಯದ 1,42,631 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ ಹಾಗೂ 8,69,950 ರೂ. ಮೌಲ್ಯದ 15.5 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ನಿಯಮ ಉಲ್ಲಂಘನೆ ಹಾಗೂ ಇತರೆ ಸೇರಿದಂತೆ ಒಟ್ಟು 1136ಎಫ್.ಐ.ಆರ್ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ...
ಚುನಾವಣೆ: ಅ.24 ರಿಂದ ಪ್ರತಿಬಂಧಕಾಜ್ಞೆ ಜಾರಿ
ಮಂಗಳೂರು:ಭಾರತೀಯ ಸಾರ್ವತ್ರಿಕ ಲೋಕಸಭಾ ಚುನಾವಣಾ ಹಿನ್ನಲೆ 17- ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಮುಕ್ತ ಮತ್ತು ನ್ಯಾಯೋಜಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಏ.24 ಬುಧವಾರ ಸಂಜೆ 6 ಗಂಟೆಯಿಂದ ಏ.26 ಶುಕ್ರವಾರ ರಾತ್ರಿ 10 ಗಂಟೆಯವರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ.ಜಿಲ್ಲೆಯಾದ್ಯಂತ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ಮೆರವಣಿಗೆ...
ಹೋಟೇಲ್ ವುಡ್‌ಲ್ಯಾಂಡ್ಸ್: ರಾಜಸ್ಥಾನಿ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ ಆರಂಭ
ಮಂಗಳೂರು : ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ ರಾಜಸ್ಥಾನ ಆರ್ಟ್ ಹಾಗೂ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಹಾಗೂ ಅಭರಣಗಳು ಮತ್ತು ಕಲಾಕೃತಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ "ರಾಜಸ್ಥಾನಿ ಬೃಹತ್ ಮಾರಾಟ ಮೇಳ" ತಾ ಶನಿವಾರದಂದು ನಗರದ ಬಂಟ್ಸ್ ಹಾಸ್ಟೇಲ್ ರಸ್ತೆಯ ಹೋಟೇಲ್ ವುಡ್‌ಲ್ಯಾಂಡ್ಸ್...



