ಇಂದು ವಿಜಯನಗರದಲ್ಲಿ ಪ್ರಗತಿಯತ್ತ ಕರ್ನಾಟಕ ಸಮರ್ಪಣೆಯ ಸಂಕಲ್ಪ ಕಾರ್ಯಕ್ರಮ
ಮಂಗಳೂರು: ಕಂದಾಯ ಇಲಾಖೆ ಮತ್ತು ವಿಜಯನಗರ ಜಿಲ್ಲಾಡಳಿತದ ವತಿಯಿಂದ ಪ್ರಗತಿಯತ್ತ ಕರ್ನಾಟಕ ಸಮರ್ಪಣೆ ಸಂಕಲ್ಪ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕು ಪತ್ರ ಸಮರ್ಪಣೆ ಮಾಡುವುದರೊಂದಿಗೆ ನೆಮ್ಮದಿ ಕಲ್ಪಿಸಲಾಗುತ್ತಿದೆ. ಎರಡು ವರ್ಷಗಳ ಸಾಧನೆಯನ್ನು ನಾಡಿನ ಜನರಿಗೆ ಸಮರ್ಪಣೆ ಮಾಡುವುದರೊಂದಿಗೆ ಮತ್ತಷ್ಟು ಜನಪರ ಸೇವೆಯ ಪ್ರತಿಜ್ಞೆಯನ್ನು ಈ...
ಮೇ 16: ಜಿಲ್ಲಾಧಿಕಾರಿಗಳ ನೂತನ ಕಚೇರಿ ”ಪ್ರಜಾ ಸೌಧ” ಉದ್ಘಾಟನೆ
ಮಂಗಳೂರು: ಪಡೀಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೂತನ ಕಚೇರಿ ''ಪ್ರಜಾ ಸೌಧ" ಶುಕ್ರವಾರ ಉದ್ಘಾಟನೆಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 16ರಂದು ಸಂಜೆ 4:15ಕ್ಕೆ ಜಿಲ್ಲಾಧಿಕಾರಿಗಳ ನೂತನ ಕಚೇರಿ ''ಪ್ರಜಾ ಸೌಧ" ಉದ್ಘಾಟಿಸುವರು.
ಒಳಾಂಗಣ ಕ್ರೀಡಾಂಗಣ
ಮಧಾಹ್ನ 3:20 ಕ್ಕೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಮೊದಲು ನಗರದ ಉರ್ವಾ ಮಾರ್ಕೆಟ್‍ನಲ್ಲಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣವನ್ನು...
ಐಟಿಐ ಪ್ರವೇಶ:ಅರ್ಜಿ ಆಹ್ವಾನ
ಮಂಗಳೂರು: ನಗರದ ಕೈಗಾರಿಕಾ ತರಬೇತಿ ಸಂಸ್ಥೆಗೆ ಆಗಸ್ಟ್ 2025ನೇ ಸಾಲಿಗೆÀ ಮೆರಿಟ್ ಕಂ ರಿಸರ್ವೇಶನ್ ಆಧಾರಿತ ಪ್ರವೇಶವÀನ್ನು ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್‍ಸೈಟ್ www.cite.karnataka.gov.in ಮೂಲಕ ಸ್ವತ: ಅಥವಾ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿರುವ ಹೆಲ್ಪ್‍ಡೆಸ್ಕ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 28 ಕೊನೆಯ ದಿನ. ಆನ್‍ಲೈನ್...
ಇಂದು ಜಿಲ್ಲೆಗೆ ಮುಖ್ಯಮಂತ್ರಿ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 16ರಂದು ಮಂಗಳೂರಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ಮಧ್ಯಾಹ್ನ 3:20 ಕ್ಕೆ ನಗರಕ್ಕೆ ಆಗಮಿಸುವ ಮುಖ್ಯಮಂತ್ರಿಗಳು ಮೊದಲು ನಗರದ ಉರ್ವಾ ಮಾರ್ಕೆಟ್‍ನಲ್ಲಿ ನಿರ್ಮಾಣಗೊಂಡಿರುವ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ.ನಂತರ ಸಂಜೆ 4:15 ಕ್ಕೆ ಪಡೀಲ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನೂತನ ಕಚೇರಿ "ಪ್ರಜಾಸೌಧ" ಉದ್ಘಾಟನೆ, ಐತಿಹಾಸಿಕ ದರ್ಖಾಸ್ತು ಪೋಡಿ ಅಭಿಯಾನದ...
ಮೇ 16 ರಿಂದ 18 ರವರೆಗೆ ಮಾವು ಮೇಳ
ಮಂಗಳೂರು: ತೋಟಗಾರಿಕಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ವತಿಯಿಂದ ನಗರದ ಕದ್ರಿ ಉದ್ಯಾನವನದಲ್ಲಿ ಮೇ 16 ರಿಂದ 18 ರವರೆಗೆ ಮಾವು ಮೇಳ ಆಯೋಜಿಸಲಾಗಿದ್ದು, ಉದ್ಘಾಟನಾ ಸಮಾರಂಭ ಮೇ 16ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಫರೀದ್ ಅವರ ಉಪಸ್ಥಿತಿಯಲ್ಲಿ, ಆರೋಗ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ...
ಕಡಲ ಕೊರೆತ ಕಾಮಗಾರಿ:ಸ್ಥಳೀಯರ ವಿಶ್ವಾಸ ತೆಗೆದುಕೊಳ್ಳಲು ಸ್ಪೀಕರ್ ಸೂಚನೆ
ಮಂಗಳೂರು: ಕಡಲ ಕೊರೆತ ಕಾಮಗಾರಿಗಳನ್ನು ನಡೆಸುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸುವಂತೆ ವಿಧಾನಸಭೆ ಸ್ಪೀಕರ್ ಸೂಚಿಸಿದರು.ಅವರು ಬುಧವಾರ ನಗರದ ಸಕ್ರ್ಯೂಟ್ ಹೌಸ್ ನಲ್ಲಿ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.ಕಡಲ ಕೊರೆತ ಕಾಮಗಾರಿ ನಡೆಸುವಾಗ ಅಧಿಕಾರಿಗಳು ಸ್ಥಳೀಯ ಪ್ರದೇಶಕ್ಕೆ ಸೂಕ್ತವಲ್ಲದ ತಂತ್ರಜ್ಞಾನದಿಂದ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪಣೆಗಳು ಬರುತ್ತಿದೆ....
ಮೇ 16 ರಂದು ಮುಖ್ಯಮಂತ್ರಿಗಳು ಜಿಲ್ಲೆಗೆ
ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 16ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.ಮೇ 16 ರಂದು ಮಧ್ಯಾಹ್ನ 3:15 - ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಗಮನ, 3:35- ನಗರದ ಉರ್ವಾ ಮಾರ್ಕೆಟ್‍ನಲ್ಲಿರುವ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ಹಾಗೂ ವೀಕ್ಷಣೆ, ಸಂಜೆ 4:15- ಪಡೀಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ನೂತನ ಕಚೇರಿ ''ಪ್ರಜಾ...
ವಿಧಾನಸಭಾ ಸ್ವೀಕರ್ ಗಳ ರಾಷ್ಟ್ರೀಯ ಸಮಿತಿಗೆ ಯು.ಟಿ.ಖಾದರ್ ನೇಮಕ
ಮ೦ಗಳೂರು: ಸಂವಿಧಾನದ ಹತ್ತನೇ ಅನುಸೂಚಿ ಅಡಿಯಲ್ಲಿ ಸಭಾಧ್ಯಕ್ಷರ ಅಧಿಕಾರಗಳನ್ನು ಮತ್ತು ನಿಯಮಗಳನ್ನು ಪರಿಶೀಲಿಸುವ ರಾಷ್ಟ್ರೀಯ ಸಮಿತಿಗೆ ಕರ್ನಾಟಕ ವಿಧಾನಸಭಾಧ್ಯಕ್ಷ ಹಾಗೂ ಮಂಗಳೂರು ಶಾಸಕರಾದ ಯು.ಟಿ.ಖಾದರ್ ಅವರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಿಶೇಷ ಅಂದರೆ ಈ ರಾಷ್ಟ್ರೀಯ ಸಮಿತಿಯಲ್ಲಿ ವಿವಿಧ ರಾಜ್ಯಗಳ ಕೇವಲ 4 ಮಂದಿ ಮಾತ್ರ ಸ್ಪೀಕರ್ ಗಳಿದ್ದು,...
ಲ೦ಚ ಪ್ರಕರಣ: ಬಂಟ್ವಾಳ ತಾಲೂಕು ಖಜಾನೆಯ ಅಧಿಕಾರಿ, ಸಿಬ್ಬ೦ದಿ ಬ೦ಧನ
ಮ೦ಗಳೂರು: ಲ೦ಚ ಪ್ರಕರಣದಲ್ಲಿ ಬಂಟ್ವಾಳ ತಾಲೂಕು ಖಜಾನೆಯ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬ೦ಧಿಸಿದ್ದಾರೆ. ಬಂಟ್ವಾಳ ತಾಲೂಕು ಖಜಾನೆಯ ಮುಖ್ಯ ಲೆಕ್ಕಿಗ ಭಾಸ್ಕರ್ ಖಜಾನೆಯ ಎಫ್.ಡಿ.ಎ ಬಸವೆ ಗೌಡ ಬಿ.ಎನ್.ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಅಧಿಕಾರಿ ಹಾಗೂ ಸಿಬ್ಬ೦ದಿ.
ಭಾಸ್ಕರ್
ಪಿರ್ಯಾದಿದಾರರ ಗಂಡ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ವೊ೦ದರಲ್ಲಿ ಕಾರ್ಯದರ್ಶಿ ಹುದ್ದೆಯಲ್ಲಿದ್ದು 2023ರ ಅಕ್ಟೋಬರ್...
ರವೀಂದ್ರನಾಥ ಠಾಗೋರ್ ಜನ್ಮ ದಿನಾಚರಣೆ
ಮಂಗಳೂರು: ಓದುವುದು ದಿನದಿಂದ ದಿನಕ್ಕೆ ಹೆಚ್ಚಾದರೆ ಲೋಕ ಜ್ಞಾನ ತಿಳಿಯಲು ಸಾಧ್ಯ. ಠಾಗೋರ್ವಲ ಬರಹಗಾರ ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟಗಾರ, ಚಿಂತಕ ಕೂಡ ಹೌದು. ಅವರ ವಿಚಾರಧಾರೆಗಳನ್ನುಅವರ ಬರಹಗಳಲ್ಲಿ ಕಾಣಬಹುದು ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಹೇಳಿದರು.ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ ಆಂತರಿಕ ಗುಣಮಟ್ಟ ಖಾತರಿಕೋಶ ಮತ್ತು ಇಂಗ್ಲಿಷ್ಸಂಘದ ವತಿಯಿಂದ ರವೀಂದ್ರನಾಥ...



