ನ್ಯಾಚುರಲ್ ಬಾಡಿ ಬಿಲ್ಡಿಂಗ್ ವರ್ಲ್ಡ್ ಕಪ್:2 ಚಿನ್ನ , 1 ಬೆಳ್ಳಿ ಗೆದ್ದ ಶೋಧನ್ ರೈ
ಮಂಗಳೂರು : ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡೆದ ನ್ಯಾಚುರಲ್ ಬಾಡಿ ಬಿಲ್ಡಿಂಗ್ ವರ್ಲ್ಡ್ ಕಪ್ -23 ಇದರಲ್ಲಿ ಬೆಂಗಳೂರಿನ ಶೋಧನ್ ರೈ 2 ಚಿನ್ನ ಹಾಗೂ 1 ಬೆಳ್ಳಿ ಗೆದ್ದಿದ್ದಾರೆ. 40 ದೇಶಗಳ 250ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. 2001ರಿಂದಭಾರತವನ್ನು ಪ್ರತಿನಿಧಿಸುತ್ತಿರುವ ಶೋಧನ್ ರೈ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದು, ಸತತ 4ನೇ ವರ್ಷದಿಂದ ಚಿನ್ನ...
ಪತ್ರ ಕರ್ತರು ಮತ್ತು ಪೊಲೀಸ್ ತಂಡಗಳ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯ
ಮಂಗಳೂರು:ನಗರದ ನೆಹರು ಮೈದಾನದಲ್ಲಿಂದು ನಡೆದ ಮಂಗಳೂರು ಪೊಲೀಸ್ ಮತ್ತು ಪತ್ರಕರ್ತರ ಸಂಘದ ನಡುವಿನ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ತಂಡ ಪ್ರಥಮ ಹಾಗೂ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ತಂಡ ದ್ವಿತೀಯ ಸ್ಥಾನ ಗಳಿಸಿದೆ.ನೆಹರು ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದ ಬಳಿಕ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಪ್ರಶಸ್ತಿ...
ಎಂಐಟಿಇ ತಾಂತ್ರಿಕ ಶಿಕ್ಷಣ ಸಂಸ್ಥೆ : ವಾರ್ಷಿಕ ಕ್ರೀಡಾಕೂಟ
ಮ೦ಗಳೂರು: ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಕ್ರೀಡಾಕೂಟವೂ ನಿಯಮಿತವಾಗಿ ನಡೆಯುತ್ತಿದ್ದರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾಗಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.ಪಂಪ್‌ವೆಲ್-ಬಿ.ಸಿ.ರೋಡ್‌ನ ಎಂಐಟಿಇ ತಾಂತ್ರಿಕ ಶಿಕ್ಷಣ ಸಂಸ್ಥೆ ವತಿಯಿಂದ ಎಕ್ಕೂರು ಮೈದಾನಿನಲ್ಲಿ ಮಂಗಳವಾರ ನಡೆದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಂತ್ರಿಕ ಶಿಕ್ಷಣಕ್ಕೆ ಇಂದಿನ ಕಾಲದಲ್ಲಿ ಹೆಚ್ಚು ಅವಕಾಶಗಳು...
ಪಿರಾನಾ ಹಂಟರ್ಸ್ ತೆಕ್ಕೆಗೆ ಸಿಪಿಎಲ್ 2023 ಕ್ರಿಕೆಟ್ ಟ್ರೋಫಿ
ಮಂಗಳೂರು : ಮಂಗಳೂರು ಪ್ರಾಂತ್ಯದ ಕಥೊಲಿಕ್ ಕ್ರಿಶ್ಚಿಯನ್ನರ ಕ್ರಿಕೆಟ್ ಪ೦ದ್ಯಾಟ ನಗರದ ಉರ್ವಾ ಮುನ್ಸಿಪಲ್ ಕ್ರಿಡಾಂಗಣದಲ್ಲಿ ನವಂಬರ್ 11 ಮತ್ತು 12ರ೦ದು ನಡೆಯಿತು.ನವಂಬರ್ 11 ಬೆಳಿಗ್ಗೆ ವಂದನೀಯ ಬೆಂಜಮಿನ್ ಪಿಂಟೋರವರು ಆಶೀರ್ವಚಿಸಿ ಎಲ್ಲಾ ಆಟಗಾರರಿಗೆ ಶುಭ ಹಾರೈಸಿದರುಮುಖ್ಯ ಅತಿಥಿಗಳಾದ ಉಮಾನಾಥ ಕೋಟ್ಯಾನ್ ರವರು ಮಾತನಾಡಿ ಇಂತಹ ಪಂದ್ಯಾಟದಿಂದ ಆಟಗಾರರ ದೈಹಿಕ, ಮಾನಸಿಕ ಸಾಮರ್ಥ್ಯವು ವೃದ್ಧಿಯಾಗಿ...
ಸ್ಕೇಟಿಂಗ್: ಅನಘಾ ಮತ್ತು ಆರ್ನಾ ಸಾಧನೆ
ಮಂಗಳೂರು: ದಕ್ಷಿಣ ಕನ್ನಡ ರೋಲರ್ ಸ್ಪೋಟ್ಸ್ ಅಸೋಸಿಯೇಶನ್ ಮಂಗಳೂರು ನೇತೃತ್ವದಲ್ಲಿ ನ. 9ರಿಂದ 12ರ ವರೆಗೆ ಮಂಗಳೂರಿನಲ್ಲಿ ನಡೆದ 11ರಿಂದ 14 ವಯೋಮಿತಿಯ 39ನೇ ಕರ್ನಾಟಕ ಸ್ಟೇಟ್ ಸೆಲೆಕ್ಷನ್ ಟ್ರೇಲ್ಸ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅನಘಾ ರಾಜೇಶ್ ಅವರು 3,000 ಮೀ ರೋಡ್ ರೇಸ್ ಹಾಗೂ 1000 ಮೀ. ರಿಂಕ್ ರೇಸ್‌ನಲ್ಲಿ 2 ಬೆಳ್ಳಿ,...
ಹಿರಿಯರ ಕ್ರೀಡಾಕೂಟದಲ್ಲಿ 2 ಚಿನ್ನ ಪದಕ; ರಾಜ್ಯಮಟ್ಟಕ್ಕೆ ಆಯ್ಕೆ
ಮಹಾನಗರ :ಇತ್ತೀಚೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ ಆಥ್ಲೇಟಿಕ್ ಹಿರಿಯರ ಕ್ರೀಡಾಕೂಟದಲ್ಲಿ ಬಿಕರ್ನಕಟ್ಟೆ ಕಲಾಯಿಗುತ್ತು ಕೆ. ಜಗದೀಶ ಸೇಮಿತ ಅವರು 5000 ಮೀ. ವೇಗದ ನಡಿಗೆಯಲ್ಲಿ ಚಿನ್ನದ ಪದಕ, ಗುಂಡು
ಎಸೆತದಲ್ಲಿ ಚಿನ್ನದ ಪದಕ ಮತ್ತು ಚಕ್ರ ಎಸೆತದಲ್ಲಿ ಬೆಳ್ಳಿಪದಕ ಪಡೆದಿದ್ದಾರೆ. ಡಿಸೆಂಬರ್‌ನಲ್ಲಿ ಹೊಸಕೋಟೆಯಲ್ಲಿ ನಡೆಯಲಿರುವರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯಮಟ್ಟದ ಸ್ಕೇಟಿಂಗ್ ಪಂದ್ಯಾಟ
ಮಂಗಳೂರು : 39 ನೇ ಕರ್ನಾಟಕ ರಾಜ್ಯ ಸ್ಫೀಡ್ ರೋಲರ್ ಸ್ಕೇಟಿಂಗ್ ಪಂದ್ಯಾಟ ನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ನ.9 ರಿಂದ 12 ರ ವರೆಗೆ ಜರಗಲಿದೆ.ಒಟ್ಟು 5 ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ.ನ.9 ರಂದು ಸಂಜೆ 5 ಗಂಟೆಗೆ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ.ಶಾಸಕ ವೇದವ್ಯಾಸ ಕಾಮತ್ ಅವರು ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಪೊಲೀಸ್...
ಜ.5-7 : ಮಂಗಳೂರಿನಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ
ಮಂಗಳೂರು: ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಜ. 5,6ಮತ್ತು 7 ರಂದು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಮ೦ಗಳೂರಿನಲಲಿ ನಡೆಯಲಿದೆ.ಈ ಹಿನ್ನೆಲೆಯಲ್ಲಿ ಮಂಗಳೂರು ಪತ್ರಿಕಾ ಭವನದಲ್ಲಿ ಮ೦ಗಳವಾರ ಜರಗಿದ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭೆ ಸಂಘದ...
ಅಖಿಲ ಭಾರತ ಜಿಎಸ್ ಬಿ ಚೆಸ್ ಟೂರ್ನಮೆಂಟ್
ಬೆ೦ಗಳೂರು: ಆಭರಣ ಟೈಮ್ ಲೆಸ್ ಜ್ಯುವೆಲ್ಲರಿ ಪ್ರಾಯೋಜಿತ ಅಖಿಲ ಭಾರತ ಜಿಎಸ್ ಬಿ ಚೆಸ್ ಟೂರ್ನಮೆಂಟ್ ಬೆಂಗಳೂರಿನ ಖಾಸಗಿ ಹೋಟೇಲಿನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು.ಕೊಡಿಯಾಲ್ ಸ್ಪೋರ್ಟ್ ಅಸೋಸಿಯೇಷನ್, ಕಿಂಗ್ಸ್ ಚೆಸ್ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಶನ್ ಜಂಟಿಯಾಗಿ ಆಯೋಜಿಸಿದ ಚೆಸ್ ಸ್ಪರ್ಧಾಕೂಟದಲ್ಲಿ 6 ರಿಂದ 67 ವರ್ಷ ವಯೋಮಾನದ ಚೆಸ್ ಆಟಗಾರರು...
ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಂಗಳೂರು:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರೀಡೆಯ ಅಭಿವೃದ್ಧಿಗೆ ನೆರವು ನೀಡಿ 5 ವರ್ಷಗಳಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಕ್ರೀಡಾ ಪೋಷಕರಿಂದ 2022-23ನೇ ಸಾಲಿಗೆ ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕ ನಿವಾಸಿಗಳಲ್ಲದ ಹಾಗೂ ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ತೊಡಗಿಸದೇ...