ಮ೦ಗಳೂರು: ಸಹಕಾರ ಕ್ಷೇತ್ರ ಅತ್ಯ೦ತ ಪವಿತ್ರವಾದುದು. ಸಹಕಾರಿ ತತ್ವವನ್ನು ಜೀವನ ಧ್ಯೇಯವಾಗಿ ಸ್ವೀಕರಿಸಿರುವ ನಾನು ಅದಕ್ಕೆ ಬದ್ದನಾಗಿ ನಡೆದುಕೊ೦ಡು ಬ೦ದಿದ್ದೇನೆ. ಸಹಕಾರಿಯಾಗಿ ಸವ೯ರ ಸಮೃದ್ದಿಯ ಆಶಯ ನನ್ನದಾಗಿದ್ದು ಅದರ ಸಾಕಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸಿ ಯಶಸ್ಸು ಕ೦ಡುಕೊ೦ಡ ಸ೦ತೃಪ್ತಿ ನನ್ನದಾಗಿದೆ ಎ೦ದು ಸಹಕಾರರತ್ನ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.

ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಸೋಮವಾರ ಜರುಗಿದ .ಸಹಕಾರರತ್ನ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 76ನೇ ಹುಟ್ಟುಹಬ್ಬದ ಸಂಭ್ರಮ, ಅಭಿನಂದನಾ ಕಾರ್ಯಕ್ರಮ ಮತ್ತು ಅರ್ಹರಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಮಾನವ ಜಾತಿಗಿಂತ ದೊಡ್ಡ ಜಾತಿಯೇ ಇಲ್ಲ. ಅದೇ ನನ್ನ ಜಾತಿ. ಎಲ್ಲರನ್ನೂ ಸಮಾನವಾಗಿ ಕಾಣುತ್ತಾ ಬ೦ದಿದ್ದೇನೆ. ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಿ೦ದ ಜಿಲ್ಲೆಯಲ್ಲಿ ಸಾಕಾರಗೊ೦ಡ ಸಹಕಾರ ಕ್ಷೇತ್ರ ಇ೦ದು ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸಮೃದ್ದವಾಗಿ ಬೆಳೆದಿದೆ.ಅಥಿ೯ಕ ಸ್ವಾವಲ೦ಬನೆ ಮೂಲಕ ಬದುಕು ಕಟ್ಟಿಕೊಡುವ ಕಾಯ೯ ಮಾಡಿದೆ ಎ೦ದರು.

ಬೇರೆ ಬ್ಯಾಂಕ್ ಗಳಲ್ಲಿ ವಸೂಲಾತಿ ಎನ್ನುವ ಪದ ಬಳಕೆ ಮಾಡುತ್ತಾರೆ. ಆದರೆ ಕಳೆದ 29 ವರ್ಷಗಳಲ್ಲಿ ನಮ್ಮ ಬ್ಯಾಂಕ್ ನಿಂದ ರೈತರಿಗೆ ಕೊಟ್ಟಿರುವ ಸಾಲ ನೂರಕ್ಕೆ ನೂರು ಮರುಪಾವತಿಯಾಗಿದೆ ಎ೦ದರು. ಸಹಕಾರ ಕ್ಷೇತ್ರದಲ್ಲಿ ನನ್ನನ್ನು ಬೆಳೆಸಿದ,ಸಹಕಾರ ಕ್ಷೇತ್ರದ ಉತ್ತು೦ಗಕ್ಕೆ ಶ್ರಮಿಸಿದ ಸವ೯ರಿಗೂ ನಾನು ಅಭಾರಿಯಾಗಿದ್ದೇನೆ ಎ೦ದವರು ಹೇಳಿದರು.
ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಮಾತನಾಡಿ . ಮೊಳಹಳ್ಳಿ ಶಿವರಾಯರ ಆಶಯಗಳಿಗೆ ಅನುಗುಣವಾಗಿ ಸಹಕಾರಿ ಕ್ಷೇತ್ರವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ರಾಜೇಂದ್ರ ಕುಮಾರ್ ಅವರ ಬದ್ದತೆ, ದೃಢ ನಿರ್ಧಾರ ಮತ್ತು ಆಡಳಿತ ವೈಖರಿ ಸವ೯ರಿಗೂ ಅನುಕರಣೀಯವಾಗಿದೆ. ಸಹಕಾರ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಯಶಸ್ಸು ಲಭಿಸಲಿ“ ಎಂದರು.
ಕೋಟೆಕಾರು ಸಹಕಾರ ಬ್ಯಾಂಕ್ ದರೋಡೆಯನ್ನು ಕ್ಷೀಪ್ರವಾಗಿ ಭೇದಿಸಿರುವ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹಾಗೂ ತಂಡವನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.
ಶಾಸಕರಾದ ಯಶ್ ಪಾಲ್ ಸುವರ್ಣ, ಡಾ.ಭರತ್ ಶೆಟ್ಟಿ ವೈ., ಕಣಚೂರು ವಿದ್ಯಾಸಂಸ್ಥೆಯ ಸಂಸ್ಥಾಪಕ ಕಣಚೂರು ಮೋನು, ದ.ಕ.ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುಚರಿತ ಶೆಟ್ಟಿ, ಎಸ್ ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಟಿ.ಜಿ.ರಾಜಾರಾಮ್ ಭಟ್, ಭಾಸ್ಕರ್ ಕೋಟ್ಯಾನ್ , ಜಯರಾಮ್ ರೈ, ಬಿ.ಆರ್. ರಮೇಶ್, ಇಂದ್ರಾಳಿ ಜಯಕರ ಶೆಟ್ಟಿ ಹಾಗೂ ಮೇಘರಾಜ್ ಜೈನ್ ಮತ್ತಿತರರು ಉಪಸ್ಥಿತರಿದ್ದರು. ನಿರ್ದೇಶಕಹಾಗೂ ಅಭಿನ೦ದನಾ ಸಮಿತಿ ಅಧ್ಯಕ್ಷ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಪ್ರಾಸ್ತಾವನೆಗೈದು ಸ್ವಾಗತಿಸಿದರು. ಶಶಿಕುಮಾರ್ ರೈ ಬೊಳ್ಯೊಟ್ಟು ಧನ್ಯವಾದ ಸಮರ್ಪಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
Celebrating the 76th birthday of SCDCC Bank Chairman Sahakharatna Dr. M.N Rajendra Kumar.
.
