ಮಂಗಳೂರು: ಬೆಂಗಳೂರಿನ ತಾಂತ್ರಿಕ ಶಿಕ್ಷಣ, ಕರ್ನಾಟಕ ಸರ್ಕಾರ ಮತ್ತು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಮಂಗಳೂರುಜಂಟಿಯಾಗಿ ಮಂಗಳೂರಿನ ಸಹ್ಯಾದ್ರಿ ಕ್ಯಾಂಪಸ್ನಲ್ಲಿ ಡಿಸೆಂಬರ್ 21 ಗುರುವಾರದ೦ದು ಪದವೀಧರರು, ಎಂಜಿನಿಯರುಗಳು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಕೇಂದ್ರೀಕೃತ ವಾಕ್-ಇನ್ ಸಂದರ್ಶನವನ್ನು ಆಯೋಜಿಸಿರುತ್ತಾರೆ.
ಬೋರ್ಡ್ ಆಫ್ ಅಪ್ರೆಂಟಿಸ್‌ಶಿಪ್ ತರಬೇತಿ, ಸೌತ್ ರೀಜನ (SR) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ. ಪದವೀಧರರು, ಎಂಜಿನಿಯರ್‌ಗಳು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಪ್ರಾಯೋಗಿಕ ತರಬೇತಿಯನ್ನು ನೀಡುವ ಉದ್ದೇಶದಿಂದ ಹಿಂದಿನ ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ `ಪ್ರಾಯೋಗಿಕ ತರಬೇತಿ ಸ್ಟೈಪೆಂಡಿಯರಿ ಯೋಜನೆ’ ಯನ್ನು ಪ್ರಾರಂಭಿಸಿತು.
ವಾಕ್-ಇನ್-ಇಂಟರ್ವ್ಯೂ ಮೇಳದಲ್ಲಿ 30ಕ್ಕೂ ಹೆಚ್ಚು ಪ್ರಮುಖ ಕೈಗಾರಿಕೆ ಕಂಪನಿಗಳು ಭಾಗವಹಿಸುತ್ತಿವೆ.
ಅರ್ಹತೆ: ಪದವೀಧರರು, ಎಂಜಿನಿಯರುಗಳು ಮತ್ತು ಡಿಪ್ಲೊಮಾ ಪದವೀಧರರಾಗಿರಬೇಕು.
- ಕಳೆದ 05 ವರ್ಷಗಳಿಂದ ಪಾಸಾದ ಅಂದರೆ ಅಭ್ಯರ್ಥಿಗಳು 2019, 2020, 2021, 2022 ಮತ್ತು 2023 ರಲ್ಲಿ ಉತ್ತೀರ್ಣರಾದ
ಪದವೀಧರರಾಗಿರಬೇಕು. • ಅಭ್ಯರ್ಥಿಗಳಿಗೆ ನೋಂದಣಿ ಶುಲ್ಕ ಇರುವುದಿಲ್ಲ.
ಸಂದರ್ಶನಕ್ಕಾಗಿ ಅಭ್ಯರ್ಥಿಗಳ ಜೊತೆಯಲ್ಲಿ ತರಬೇಕಾದ ಡಾಕ್ಯುಮೆಂಟ್ಗಳು: ನವೀಕರಿಸಿದ ಸಿ.ವಿ.ನ ಬಹು ಪ್ರತಿಗಳು • ಪಾಸ್ಪೋರ್ಟ್ ಗಾತ್ರದಛಾಯಾಚಿತ್ರಗಳು • ಎಲ್ಲಾ ಮೂಲಗಳು ಮತ್ತು ಪ್ರಮಾಣಪತ್ರಗಳನ್ನು ಒಳಗೊಂಡಂತೆ ಗುರುತು ಕಾರ್ಡ್ಗಳ ಪೋಟೋಕಾಪಿಗಳು.
30 ಕ್ಕೂ ಅಧಿಕ ಕಂಪನಿಗಳು ವಾಕ್-ಇನ್-ಸಂದರ್ಶನದಲ್ಲಿ ಭಾಗವಹಿಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-22 777 66 ಕರೆಮಾಡಬಹುದಾಗಿದೆ