18.5 C
Karnataka
Friday, November 22, 2024

ಮಂಗಳೂರಿಗೆ CGHS ವೆಲ್ ನೆಸ್ ಸೆಂಟರ್ ಮಂಜೂರು: ನಳಿನ್ ಹರ್ಷ

ಮ೦ಗಳೂರು: ಕೇಂದ್ರ ಸರ್ಕಾರದ ನಿವೃತ್ತ ನೌಕರರ ಬಹುದಿನ ಬೇಡಿಕೆಯಾದ CGHS ವೆಲ್ ನೆಸ್ ಸೆಂಟರ್ ನ್ನು ಮಂಗಳೂರಿನಲ್ಲಿ ತೆರೆಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಸಂಸದ ನಳಿನ್ ಕುಮಾರ್ ರವರ ಪ್ರಯತ್ನದಿಂದ ಬಹುದಿನದ ಬೇಡಿಕೆ ಈಡೇರುತ್ತಿದೆ. ಸಂಸದರು ಕಳೆದ ಬಾರಿ ಕೇಂದ್ರ ಆರೋಗ್ಯ ಸಚಿವರಿಗೆ ಭೇಟಿಯಾಗಿ ಮಂಗಳೂರಿನಲ್ಲಿ CGHS ವೆಲ್ ನೆಸ್ ಸೆಂಟರ್ ನ್ನು ತೆರೆಯುವಂತೆ ಮನವಿ ಮಾಡಿದ್ದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಮನ್ ಸುಖ್ ಮಾಂಡವೀಯ ರವರು ನಳಿನ್ ಕುಮಾರ್ ರವರಿಗೆ ಪತ್ರ ಬರೆದು ಮಂಗಳೂರು ಸೇರಿದಂತೆ ದೇಶದ 20 ನಗರಗಳಲ್ಲಿ CGHS ವೆಲ್ ನೆಸ್ ಸೆಂಟರ್ ಗಳನ್ನು ತೆರೆಯುತ್ತಿರುವುದಾಗಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಹಾಗೂ ನೆರೆಯ ಜಿಲ್ಲೆಗಳ 50ಕ್ಕೂ ಅಧಿಕ ಕೇಂದ್ರ ಸರ್ಕಾರದ ಇಲಾಖೆಗಳ ಸುಮಾರು 5500 ಉದ್ಯೋಗಿಗಳಿದ್ದು, 29000 ಕ್ಕೂ ಅಧಿಕ ನಿವೃತ್ತ ಕೇಂದ್ರ ಸರ್ಕಾರದ ಉದ್ಯೋಗಿಗಳಿದ್ದಾರೆ. ಮಂಗಳೂರಿನಲ್ಲಿ ಈ ಕೇಂದ್ರ ಪ್ರಾರಂಭವಾಗುವುದರಿಂದ ಅವರು ನಿಯಮಾನುಸಾರ ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ. ತಮ್ಮ ಮನವಿಯನ್ನು ಪುರಸ್ಕರಿಸಿ ಮಂಗಳೂರಿಗೆ CGHS ವೆಲ್ ನೆಸ್ ಸೆಂಟರ್ ನ್ನು ಮಂಜೂರು ಮಾಡಿದ ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಧ ಡಾ. ಮನ್ ಸುಖ್ ಮಾಂಡವೀಯರವರಿಗೆ ಮಾನ್ಯ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles